ವರದಿಗಾರ-ಮೂಡಿಗೆರೆ: 71 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪೀಸ್ & ಅವೆರ್ನೆಸ್ ಟ್ರಸ್ಟ್ ವತಿಯಿಂದ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಶಿಬಿರದ ಅಧ್ಯಕ್ಷತೆಯನ್ನು ಮಲ್ನಾಡ್ ಮುಸ್ಲಿಂ ವೇದಿಕೆ ಮುಖಂಡರಾದ ಎ.ಸಿ.ಅಯ್ಯೂಬ್ ಹಾಜಿಯವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು ೬೨ ಶಿಭಿರಾರ್ಥಿಗಳು ರಕ್ತದಾನ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪೀಸ್ & ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕರಾದ ಅಲ್ತಾಫ್ ಬಿಳಗುಳ,
ಸಮಾಜ ಸೇವಕರಾದ ಅಬ್ದುಲ್ ರಹಿಮಾನ್, ಫಿಶ್ ಮೋಣು, ರಕ್ತನಿಧಿಯ ಮುಖ್ಯಸ್ಥರಾದ ಡಾ. ಮುರಳಿಧರ್, ವೈಧ್ಯಾಧಿಕಾರಿಯಾದ ಡಾ. ಯೋಗೇಶ್, ಶುಶ್ರೂಷಕಿಯಾದ ವರಮಹಾಲಕ್ಷ್ಮಿ ಈ ಸಂದರ್ಭ ಉಪಸ್ಥಿತರಿದ್ದರು.
