ವರದಿಗಾರ-ಎಣ್ಮೂರು: ದರ್ಗಾ ಶರೀಫ್ ಮತ್ತು ಜುಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಮತ್ತು ಮುಸ್ಲಿಂ ಯುವಜನ ಸಂಘ(M Y S) ಇದರ ವತಿಯಿಂದ ಸ್ವಾತಂತ್ತ್ಯ ದಿನಾಚರಣೆ ಆಚರಿಸಲಾಯಿತು. ಖತೀಬರಾದ ಅಬ್ದುರಹೀಂ ಸಖಾಫಿ ಅಲ್ ಅಝ್ಹರಿ ದ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು.
ಜುಮಾಮಸ್ಜಿದ್ ಅದ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ಪಂಜ ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ ಅತಿಥಿ ಭಾಷಣವನ್ನು ಮಾಡಿದರು.ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಪುರಿಯ, ಜುಮಾಮಸ್ಜಿದ್ ಉಪಾದ್ಯಕ್ಷರಾದ ಅಬ್ದುಲ್ ಖಾದರ್ ಟಿ.ಎಸ್, ಎಂ ವೈ ಎಸ್ ಅದ್ಯಕ್ಷರಾದ ಅಲಿ ಪಡ್ಪಿನಂಗಡಿ, ಮುಚ್ಚಿಲ ಮದ್ರಸ ಸದರ್ ಮುಹಲ್ಲಿಮ್ ಅಬ್ದುಲ್ ರಝಾಕ್ ಬಾಖವಿ, ಅಬೂಬಕ್ಕರ್ ಸಅದಿ, ಖಾಸಿಂ ಸಅದಿ, ಅಶ್ರಫ್ ಮುಸ್ಲಿಯಾರ್ಉ ಪಸ್ಥಿತರಿದ್ದರು. ರಫೀಕ್ ಐವತ್ತೊಕ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಹನೀಫ್ ಎಂ.ಕೆ ವಂದಿಸಿದರು.
