ವರದಿಗಾರ : ರಾಜಕಾರಣಿಗಳು ಅದೇನೆಲ್ಲಾ ಕಷ್ಟಪಟ್ಟು ಮತದಾರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಾರೆ. ಆವೇಶದ ಕಿಚ್ಚಿನಲ್ಲಿ ಮಾತನಾಡಿದ ನಂತರ ಕೆಲವೊಮ್ಮೆ ತಮ್ಮ ಬೆರಳನ್ನೇ ಕಚ್ಚಬೇಕಾದ ಪ್ರಸಂಗ ಕೂಡಾ ಬರುತ್ತದೆ. ಅದಕ್ಕೆ ತಾಜಾ ಉದಾಹರಣೆ ಡಿ ವಿ ಸದಾನಂದ ಗೌಡ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸರ್ಕಾರವನ್ನು ಟೀಕಿಸುವ ಭರದಲ್ಲಿ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ, ‘ನಾಚಿಕೆಯಾಗಬೇಕು ನರೇಂದ್ರ ಮೋದಿಗೆ’ ಎಂದು ಭಾಷಣ ಮಾಡಿ ನಗೆಪಾಟಲಿಗೀಡಾಗಿದ್ದಾರೆ.
ಬಿ ಸಿ ರೋಡಿನ ಮೈದಾನದಲ್ಲಿ ಇಂದು ನಡೆದ ‘ಪರಿವರ್ತನಾ ರಾಲಿ’ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸದಾನಂದ ಗೌಡ ಬಾಯ್ತಪ್ಪಿನಿಂದಾಗಿ ಮೇಲಿನ ಮಾತನ್ನು ಆಡಿದರಾದರೂ, ಭಾಷಣ ಆಲಿಸುತ್ತಿದ್ದ ಕಾರ್ಯಕರ್ತರು ಮಾತ್ರ ತಮ್ಮ ರಾಜ್ಯ ನಾಯಕರ ಈ ಪರಿಯ ಬೇಜವಬ್ದಾರಿಗೆ ಮುಖ ಮುಖ ನೋಡಿಕೊಳ್ಳುವಂತಾಯಿತು. ಕಾರ್ಯಕರ್ತರು ಮುಜುಗರುಪಡುವುದಕ್ಕೆ ಕಾರಣಗಳೂ ಇದೆ. ಏಕೆಂದರೆ ಒಂದು ದಿನದ ಹಿಂದಷ್ಟೇ ಶಾಸಕ ಶ್ರೀರಾಮುಲು ಸುಳ್ಯದ ಸಭೆಯಲ್ಲಿ, ‘ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಯಡಿಯೂರಪ್ಪ, ಶೋಭಾ ಮತ್ತು ಸದಾನಂದ ಗೌಡರೇ ಕಾರಣರೆಂಬ ಹೇಳಿಕೆಯ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಖುದ್ದು ಸದಾನಂದ ಗೌಡರ ಈ ಹೇಳಿಕೆಯಿಂದ ಕಾರ್ಯಕರ್ತರಷ್ಟೇ ಅಲ್ಲ ನಾಯಕರುಗಳೂ ಮುಜುಗರಪಟ್ಟಿರುವುದಂತೂ ಸುಳ್ಳಲ್ಲ
ಕೃಪೆ : ನ್ಯೂಸ್ 18
