ವರದಿಗಾರ : ಎನ್.ಎಸ್ಎಸ್ ಕುಂಬ್ಳೆ, ಜಿ.ಎಚ್.ಎಸ್.ಎಸ್. ಕುಂಬ್ಳೆ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಜನರಕ್ಷಾ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಯಾನಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು, ದಿನಾಂಕ 8.11.2017 ರಂದು ಕುಂಬ್ಳೆ ಜಿ ಎಚ್ ಎಸ್ ಎಸ್ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ದ ಸ್ವಾಗತ ಭಾಷಣವನ್ನು ಅನಿಲ್ ಕುಮಾರ್ ಎ.ಕೆ ಪ್ರಾಂಶುಪಾಲರು ಜಿ ಎಚ್ ಎಸ್ ಎಸ್ ಕಾಲೇಜು ಕುಂಬ್ಳೆ ಇವರು ಮಾಡಿದರೆ,
ಕಾರ್ಯಕ್ರಮ ದ ಅಧ್ಯಕ್ಷ ಸ್ಥಾನವನ್ನು ಸುರೇಶ್ ರಾವ್ ಪಿ ಟಿ ಎ ಅಧ್ಯಕ್ಷರು ಜಿ ಎಚ್ ಎಸ್ ಎಸ್ ಕಾಲೇಜು ಕುಂಬ್ಳೆ ಇವರು ವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪುಂದಿರಿಯಿಕಾನ್ ಅಧ್ಯಕ್ಷರು ಕುಂಬ್ಳೆ ಗ್ರಾಮ ಪಂಚಾಯತ್, ಪ್ರಾಸ್ತಾವಿಕವಾಗಿ ಉದಯಕುಮಾರಿ ಜಿ ಎಚ್ ಎಸ್ ಎಸ್ ಕಾಲೇಜು ಕುಂಬ್ಳೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನಾಸಿರ್ ಬಾಯಾರ್, ಎಕೆ ಆರಿಫ್,ಬಿನು ಸರ್ (ಮುಖ್ಯೋಪಾದ್ಯಾಯರು ಜಿ ಎಚ್ ಎಚ್ ಸ್ಕೂಲ್) ಸಿದ್ದೀಕ್ ಮಂಜೇಶ್ವರ,(ಅಧ್ಯಕ್ಷರು ಬ್ಲಡ್ ಡೋನರ್ಸ್) ಚೈತ್ರಾ, ಮೊಯ್ದು ಸಿತಾಂಗೋಳಿ, ಮುಸ್ತಪಾ ಕೆ.ಸಿ ರೋಡ್, ಪ್ರಶಾಂತ್ ಕುಂಬ್ಳೆ, ಇಬ್ರಾಹಿಂ ಪೆರ್ವಾಡ್, ಕರುನಾಕರನ್ ಬದಿಯಡ್ಕ, ಕಾರ್ತಿಕೇಯನ್, ರಝಾಕ್ ಯಾನಪೋಯ, ಇರ್ಶಾದ್ ಚಾಕು,ಮುನೀರ್ ಚೆಂಬುಗುಡ್ಡೆ, ಸಲಾಂ ಚೆಂಬುಗುಡ್ಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಲವಾರು ವಿದ್ಯಾರ್ಥಿನಿಯರೂ ರಕ್ತದಾನ ಮಾಡಿದರು
ವರದಿ : ಬ್ಲಡ್ ಡೋನರ್ಸ್ ಮಂಗಳೂರು
