ಅನಿವಾಸಿ ಕನ್ನಡಿಗರ ವಿಶೇಷ

ಅಲ್ಪಸಂಖ್ಯಾತರು, ದಮನಿತರು, ದಲಿತರು  ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ: ಆರೀಫ್ ಜೋಕಟ್ಟೆ

ವರದಿಗಾರ-ಸೌದಿ ಅರೇಬಿಯಾ: ಇಂಡಿಯಾ ಸೋಶಿಯಲ್ ಪೋರಂ, ಅಭಾ ಕರ್ನಾಟಕ ವಲಯದ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ ಮತ್ತು ಪ್ರಸಕ್ತ ಭಾರತ ವಿಚಾರ ಸಂಕಿರಣ ಕಮೀಸ್ ಮುಶೈತ್ ನ ಜುಬಿಲಿ ರೆಸ್ಟೋರೆಂಟ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು.

ಸ್ವತಂತ್ರ್ಯ ಭಾರತ ಮತ್ತು ಪ್ರಸಕ್ತ ಭಾರತ ಎಂಬ ವಿಷಯದ ಮೇಲೆ ವಿಚಾರ ಮಂಡಿಸಿದ ಎ.ಎಂ. ಆರೀಫ್ ಜೋಕಟ್ಟೆ, ಭಾರತ ಸ್ವತಂತ್ರ್ಯವಾಗಿ ಸುಮಾರು ಏಳು ದಶಕಗಳಲ್ಲಿ ಸ್ವಾತಂತ್ರ್ಯದ ನೈಜ ಉದ್ದೇಶ ಈಡೇರಿಕೆಯಾಗಿಲ್ಲ. ಈ ದೇಶದ ಅಲ್ಪಸಂಖ್ಯಾತರು, ದಮನಿತರು, ದಲಿತರು  ಭಯದ ವಾತಾವರಣದಲ್ಲಿ ಜೀವಿಸುವಂತಹ ಅಸಹಿಷ್ಣುತೆಯ ಪರಿಸ್ಥಿತಿ ಈ ದೇಶದಲ್ಲಿದೆ.  ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿಯಲಾಗುತ್ತಿದೆ. ಬಂಡವಾಳಶಾಹಿಗಳು ಮತ್ತು ಬ್ರಾಹ್ಮಣಶಾಹಿಗಳು  ಮಾತ್ರ   ಸ್ವಾತಂತ್ರ್ಯದ ಫಲವನ್ನು ಪಡೆಯುತ್ತಿದ್ದಾರೆ. ಆದರೆ ಈ ದೇಶದ ಶೋಷಿತರು , ದಮನಿತರು , ಕಾರ್ಮಿಕರಿಗೆ ಅಲ್ಪಸಂಖ್ಯಾತರಿಗೆ  ಸ್ವತಂತ್ರ್ಯ ಮರೀಚಿಕೆಯಾಗಿಯೇ ಉಳಿದಿದೆ ಎಂದರು.
ಇತ್ತೀಚಿಗೆ ಭಾರತದಲ್ಲಿ ನಡೆಯುತ್ತಿರುವ ಗುಂಪು ಹತ್ಯೆ ಸರಣಿಯ ಬಗ್ಗೆ ವಿಷಯ  ಪ್ರಸ್ತಾಪಿಸಿದ ಆರೀಫ್, ಗುಂಪು ಹಿಂಸಾ ಹತ್ಯೆಯನ್ನು ಹತ್ತಿಕ್ಕಲು ತಕ್ಕ ಪ್ರತಿರೋಧದ ಅವಶ್ಯಕತೆ ಇದೆ.  ಸಂವಿಧಾನ ವಿರೋಧಿಗಳ ವಿರುದ್ದ  ಭಾರತದಲ್ಲಿ ನಡೆಯುವ ಎಲ್ಲಾ ಜನಪರ  ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಕೈ ಜೋಡಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅಭಾ ಖಮೀಸ್ ವಲಯಾಧ್ಯಕ್ಷರಾದ ಸಲೀಂ ಗುರುವಾಯನಕೆರೆ, ಈ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅನಿವಾರ್ಯತೆ ಸೃಷ್ಟಿಯಾಗಿದೆ ಮತ್ತು  ಸಂವಿಧಾನ ರಚಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ರವರ ಮಾತಿನ ಪ್ರಕಾರ ತುಳಿತಕ್ಕೊಳಗಾದ ಸಮುದಾಯಕ್ಕೆ ರಾಜಕೀಯ ಅಧಿಕಾರದ ಅಗತ್ಯವಿದೆ ಎಂದು ರಾಜಕೀಯ ಅಗತ್ಯತೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರ ಆಶಾಕಿರಣವಾಗಿರುವ ಇಂಡಿಯನ್ ಸೋಶಿಯಲ್ ಫೋರಮ್ ನ ಸಮಯಾಜಮುಖಿ ಕಾರ್ಯಕ್ರಮಗಳನ್ನು ಮೆಚ್ಚಿ ಕೈ ಜೋಡಿಸುವ ಉದ್ದೇಶದಿಂದ ಹಲವಾರು ಅನಿವಾಸಿ ಭಾರತೀಯರು ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯತ್ವ ಪಡೆದುಕೊಂಡರು ಅವರನ್ನು ಇಂಡಿಯನ್ ಸೋಶಿಯಲ್ ಫೋರಮ್ ಅಭಾ ಕಮೀಸ್ ಚಾಪ್ಟರ್ ಅಧ್ಯಕ್ಷರಾದ ಹನೀಫ್ ಮಂಜೇಶ್ವರ, ಕಾರ್ಯದರ್ಶಿ ಸಾದಿಕ್ ಉಳ್ಳಾಲ್ ಆತ್ಮೀಯವಾಗಿ ಬರಮಾಡಿಕೊಂಡರು. ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಇದರ ಪ್ರಾದೇಶಿಕ ಕಾರ್ಯದರ್ಶಿ ಮುಹಿಯುದ್ದೀನ್, ಇಂಡಿಯನ್ ಫ್ರೆಟರ್ನಿಟಿ ಫೋರಮ್ ಕಮೀಸ್ ಘಟಕದ ಅಧ್ಯಕ್ಷರಾದ ಸಮೀರ್ ಕೆ ಸಿ ರೋಡ್  ಉಪಸ್ಥಿತರಿದ್ದರು . 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಅಭಾ ಕಮೀಸ್ ಚಾಪ್ಟರ್ ಅಧ್ಯಕ್ಷರಾದ ಹನೀಫ್ ಮಂಜೇಶ್ವರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾತಂತ್ರೋತ್ಸವದ ಶುಭಾಶಯವನ್ನು  ಕೋರಿದರು.    ಇಂಡಿಯನ್ ಸೋಶಿಯಲ್ ಫೋರಮ್ ಅಭಾ ಘಟಕದ  ಕಾರ್ಯದರ್ಶಿ ಸಾದಿಕ್ ಉಳ್ಳಾಲ್ ಸ್ವಾಗತಿಸಿ, ತನ್ವಿರ್ ಮೈಂದಾಳ ವಂದಿಸಿದರು. ಆರಿಫ್ ಬೆಳ್ಳಾರೆ  ಕಾರ್ಯಕ್ರಮ ನಿರೂಪಿಸಿದರು.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group