ವರದಿಗಾರ-ಸೌದಿ ಅರೇಬಿಯಾ: ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ “ಸ್ನೇಹ ಕೂಟ 2017” ಕುಟುಂಬ ಸಮ್ಮಿಲನ ಕಾರ್ಯಕ್ರಮವು ಇತ್ತೀಚೆಗೆ ರಿಯಾದಿನ ಅಲ್ ರುಶ್ದ್ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಇಂಡಿಯಾ ಫ್ರೆಟರ್ನಿಟಿ ಫೋರಮ್ ನ ಸೌದಿ ಅರೇಬಿಯಾದ ಅಧ್ಯಕ್ಷರಾದ ಬಶೀರ್ ಕೇರಳ, ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಇದಕ್ಕಾಗಿ ಎಲ್ಲ ಸಮಾನ ಮನಸ್ಕರು ಜೊತೆಗೂಡಬೇಕೆಂದು ಕರೆ ನೀಡಿದರು.
ಮುಖ್ಯ ಭಾಷಣ ಮಾಡಿದ ಇಂಡಿಯನ್ ಸೋಷಿಯಲ್ ಫಾರಂ ದಮ್ಮಾಮ್ ರಾಜ್ಯ ಸಮಿತಿಯ ಸದಸ್ಯ ನಝೀರ್ ತುಂಬೆ, ಪ್ರಸಕ್ತ ಇಂಡಿಯಾ ದೇಶದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾತನಾಡುತ್ತಾ, ಸರಕಾರ ಇಂದು ಅಚ್ಛೆದಿನ್ನ ಕನಸು ತೋರಿಸಿ, ಇಂದು ತಮ್ಮ ವೈಫಲ್ಯಗಳನ್ನು ಮರೆಮಾಚಲು ಅಮಾಯಕರ ಮೇಲೆ ಗೂಬೆಕೂರಿಸುವ ಪ್ರಯತ್ನ ಮಾಡುತ್ತಿದೆ. ಅಹಿಂದ ಸಮಾಜದ ಐಕ್ಯತೆಯಿಂದ ಮಾತ್ರ ಅಲ್ಪಸಂಖ್ಯಾತರ ಸಬಲೀಕರಣ ಸಾದ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ಅ ಧ್ಯಕ್ಷರಾದ ಇಸ್ಮಾಯಿಲ್ ಇನೋಳಿ, ಸಂಘಟನೆಯು ನಡೆಸುತ್ತಿರುವ ಸಾಮಾಜಿಕ ಸೇವೆಯನ್ನು ಹಾಗೂ ಸಂಘಟನೆಯ ಮಹತ್ವ ಮತ್ತು ಅವಶ್ಯಕತೆಯ ಬಗ್ಗೆ ವಿವರಿಸಿದರು.
ಮುಖ್ಯ ಅಥಿತಿಯಾಗಿದ್ದ ಏರ್ ಇಂಡಿಯಾ ರಿಯಾದಿನ ವ್ಯವಸ್ಥಾಪಕರಾದ ಕುಂದನ್ ಲಾಲ್ ಗೋತ್ವಾಲ್ ಮಾತನಾಡಿ , ಇಸ್ಲಾಂ ಶಾಂತಿ ಮತ್ತು ಸೌಹಾರ್ದತೆಯ ಧರ್ಮವಾಗಿದ್ದು, ಸಮಾಜ ಸೇವೆಯನ್ನು ಮಾಡಲು ಪ್ರೇರೇಪಿಸುತ್ತದೆ, ಅದೇ ರೀತಿ ಇಂಡಿಯಾದಲ್ಲಿ ಅಂಬೇಡ್ಕರ್ ಸಂವಿಧಾನ ಜೀವಂತವಾಗಿರಬೇಕಾದರೆ ಎಲ್ಲರೂ ಒಗ್ಗೂಡಬೇಕಾಗಿದೆ ಎಂದು ಹೇಳಿದರು .
ವೇದಿಕೆಯಲ್ಲಿ ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ವಲಯ ಅಧಕ್ಷರಾದ ಸಲೀಮ್ ಮೌಲವಿ ಖಾಸಿಮಿ ಹಾಗೂ ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್
ಮುಬಾರಕುಲ್ಲಾ ಬೆಂಗಳೂರು, ಖಿದ್ಮ ಫೌಂಡೇಶನ್ ನ ಅಧ್ಯಕ್ಷರಾದ ಜನಾಬ್ ಯಾಸಿನ್ ಶಿರೂರು, ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಜನಾಬ್ ಇರ್ಷಾದ್ ಮಾಣಿ ಮತ್ತು ಸಮಾಜ ಸೇವಕರಾದ ಜನಾಬ್ ಮುಸ್ತಾಕ್ ಕಾಸಿಮಿ ಮತ್ತು ಜನಾಬ್ ಅಬ್ದುಲ್ ಖದರ್ ದಿರಾರವರು ಉಪಸ್ಥಿತರಿದ್ದರು.
ಅಥಿತಿಗಳನ್ನು ಇಂಡಿಯಾ ಫ್ರೆಟರ್ನಿಟಿ ಫೋರಮ್ ವತಿಯಿಂದ ವಿಶೇಷ ಸ್ಮರಣಿಕೆ ನೀಡಿ ಈ ಸಂದರ್ಭ ಸನ್ಮಾನಿಸಲಾಯಿತು.
ಇಂಡಿಯಾ ಫ್ರೆಟರ್ನಿಟಿ ಫೋರಮ್ ರಿಯಾದ್ ಜಿಲ್ಲಾ ಪ. ಕಾರ್ಯದರ್ಶಿ ತಾಜುದ್ದೀನ್ ಪುತ್ತೂರು ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯರಾದ ಮೊಹಮ್ಮದ್ ನವೀದ್ ಕುಂದಾಪುರ, ಶರೀಫ್ ಕಬಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಾಸ್ಟರ್ ಹಸನುಲ್ ಬನ್ನ ರವರ ಕಿರಾತ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
—————————————————–
ಪ್ರಸಕ್ತ ಸನ್ನಿವೇಶದ ಮೇಲೆ ಬೆಳಕು ಚೆಲ್ಲುವ “ ಬಯಲಾದ ಸತ್ಯ” ಎಂಬ ಕಿರು ಹಾಸ್ಯ ಪ್ರಹಸನವು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.
ಪುರುಷರು ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಕ್ರೀಡಾಕೂಟ ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಏರ್ ಇಂಡಿಯಾ ವತಿಯಿಂದ ನಡೆದ ಅದೃಷ್ಠ ಚೀಟಿ ಡ್ರಾ ನಲ್ಲಿ ಅದೃಷ್ಠಶಾಲಿಯಾಗಿ ನಿಝರ್ ರವರು ಉಚಿತವಾಗಿ ಭಾರತಕ್ಕೆ ಹೋಗಿ ಬರುವ ವಿಮಾನದ ಟಿಕೇಟನ್ನು ಗೆದ್ದುಕೊಂಡರು.
ಸಾಕಷ್ಟು ಕುತೂಹಲ ಕೆರಳಿಸಿದ ವಾಲಿಬಾಲ್ ಫೈನಲ್ ಹಣಾಹಣಿಯಲ್ಲಿ ಎಸ್.ಸಿ.ಸಿ ತಂಡ ವನ್ನು ಸೋಲಿಸುವುದರ ಮೂಲಕ ಕೆಕೆಆರ್ ತಂಡವು ಸ್ನೇಹ ಕೂಟ -2017ರ ಚೊಚ್ಚಲ ಟ್ರೋಫಿಯನ್ನು ತನ್ನಾಗಿಸಿಕೊಂಡಿತ್ತು. ಹಗ್ಗ ಜಗ್ಗಾಟದಲ್ಲಿ ಬಂಟ್ವಾಳ ಗೈಸ್ ತಂಡವು ವಿಜಯಿಯಾಗಿ, ಬತಾ ಗೈಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು. ಇಸ್ಮಾಯಿಲ್ ಇನೋಳಿ, ತಾಜುದ್ದೀನ್ ಪುತ್ತೂರು, ಅಬ್ದುಲ್ ರವೂಫ್ ಕಲಾಯಿ ಮತ್ತು ನವೀದ್ ಕುಂದಾಪುರ ರವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ IFF EXPO-2017 ಸಾಕ್ಷ್ಯಚಿತ್ರ ಪ್ರದರ್ಶನವು ಇಂಡಿಯಾ ಫ್ರೆಟರ್ನಿಟಿ ಫೋರಮ್ ನ ಸಮಾಜ ಸೇವೆಗೆ ಕನ್ನಡಿಯಾಗಿತ್ತು. ಕಾರ್ಯಕ್ರಮಕ್ಕೆ ಸುಲ್ತಾನ್ ಬಿಲ್ಡರ್ಸ್ ಮಂಗಳೂರು, AKA ಇಂಡಸ್ಟ್ರಿಯಲ್ ಸರ್ವಿಸ್, ದೇಬ ಅಲ ಖಲೀಜ್, ಆನ್ ಡಾಟ್ ಫ್ರೈಟ್, ಫ್ರೆಂಡಿ ಮೊಬೈಲ್ ಮತ್ತು ಫವಾರಿ ಮನಿ ಟ್ರಾನ್ಸ್ಫರ್ ಕಾರ್ಯಕ್ರಮದ ಪ್ರಯೋಜಕರಾಗಿದ್ದರು.
Report: Naveed Kundapur
