ತನ್ನ ಸಹೋದರನ ‘ಲವ್ ಜಿಹಾದ್’ ಆರೋಪದ ಕಾರಣ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜಸ್ತಾನದ ಆರಿಫಾ ಪ್ರಕರಣದಲ್ಲಿ ಹೈಕೋರ್ಟ್ ಆರಿಫಾಳಿಗೆ ತನ್ನ ಪತಿಯ ಜೊತೆ ಮರಳಲು ಅನುಮತಿ ನೀಡಿದೆ.
22ರ ಹರೆಯದ ಪಾಯಲ್ ಸಿಂಘ್ವಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಆರಿಫಾ ಎಂದು ಬದಲಿಸಿಕೊಂಡಿದ್ದಳು ಹಾಗೂ ಫೈಝ್ ಮೋದಿ ಎಂಬ ಮುಸ್ಲಿಮ್ ಯುವಕನನ್ನು ವಿವಾಹವಾಗಿದ್ದಳು. ಇದನ್ನು ‘ಲವ್ ಜಿಹಾದ್’ ಎಂದು ಆರೋಪಿಸಿ ಆಕೆಯ ಸಹೋದರ ಚಿರಾಗ್ ಸಿಂಘ್ವಿ ಕೋರ್ಟ್ ಮೇಟ್ಟಿಲೇರಿದ್ದನು. ಆಕೆಯು ಸಲ್ಲಿಸಿದ್ದ ಮತಾಂತರ ಹಾಗೂ ವಿವಾಹದ ದಾಖಲೆಗಳ ಬಗ್ಗೆ ಸಂಶಯವಿದ್ದರೂ ಸರಕಾರಿ ನಿವಾಸದಿಂದ ತನ್ನ ಪತಿಯ ಬಳಿ ಹೋಗಲು ಆಕೆಗೆ ಹೈಕೋರ್ಟ್ ಅನುಮತಿ ನೀಡಿದೆ. ದಾಖಲೆಗಳ ತನಿಖೆ ಮುಂದುವರಿಯುವುದಾಗಿಯೂ ಕೋರ್ಟ್ ತಿಳಿಸಿದೆ
ಇದು ಕೇರಳದ ಹಾದಿಯಾ ಪ್ರಕರಣದ ಮರುಪ್ರದರ್ಶನವಾಗಿತ್ತು ಎನ್ನಬಹುದು.
