ರಾಷ್ಟ್ರೀಯ ಸುದ್ದಿ

ಸಂಘಪರಿವಾರದ ಹಿಂದುತ್ವ ಫ್ಯಾಶಿಸಂ ವಿರುದ್ಧ ಧೃಢ ನಿಲುವಿಗಾಗಿ ಸಂಘಟನೆಯ ಮೇಲೆ ಕ್ರಿಮಿನಲ್ ಪಿತೂರಿ: ಪಾಪ್ಯುಲರ್ ಫ್ರಂಟ್

ವರದಿಗಾರ: ಇಂಡಿಯಾ ಟುಡೆ ಪ್ರಸಾರ ಮಾಡಿದ ತಥಾಕಥಿತ ಸ್ಟಿಂಗ್ ಆಪರೇಷನ್, ಕಳೆದ ಕೆಲವು ತಿಂಗಳಿನಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಗುರಿಪಡಿಸುತ್ತಿರುವ ಕೇಂದ್ರೀಯ ಗುಪ್ತಚರ ಏಜೆನ್ಸಿಯ ನಿಗೂಢ ನಡೆಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಪಿ ಮುಹಮ್ಮದ್ ಬಶೀರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಘ ಪರಿವಾರ ನೇತೃತ್ವದ ಹಿಂದುತ್ವ ಫ್ಯಾಶಿಸಂನ ವಿರುದ್ಧದ ಸಂಘಟನೆಯ ಧೃಢ ನಿಲುವಿಗಾಗಿ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ವಿರುದ್ಧ ವಿಶೇಷವಾಗಿ ಹಾದಿಯಾ ಪ್ರಕರಣದಂತಹ ವಿಷಯಗಳಲ್ಲಿ ಕಾನೂನು ಹೋರಾಟದ ನೇತೃತ್ವ ವಹಿಸುವ ಕಾರಣಕ್ಕಾಗಿ ಅವರು ಪಾಪ್ಯುಲರ್ ಫ್ರಂಟ್‍ನ್ನು ಗುರಿಪಡಿಸುತ್ತಿದ್ದಾರೆ. ಈ ದೇಶದ ಕಾನೂನಿನ ವಿರುದ್ಧ ಪಾಪ್ಯುಲರ್ ಫ್ರಂಟ್ ಯಾವುದೇ ಅಜೆಂಡಾಗಳನ್ನು ಹೊಂದಿಲ್ಲ. ನಿರಾಧಾರ ಆರೋಪಗಳ ಹೊರತಾಗಿ, ಇದರ 25 ವರ್ಷಗಳ ದೀರ್ಘ ಇತಿಹಾಸದಲ್ಲಿ ಸಂಘಟನೆಯ ವಿರುದ್ಧ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡ ಯಾವುದೇ ಸಂಗತಿಗಳು ಸಾಬೀತಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಂಘಟನೆಯ ವಿರುದ್ಧದ ತನಿಖೆಯ ಸಂದರ್ಭ ಎನ್‍ಐಎ ಸೇರಿದಂತೆ ಏಜೆನ್ಸಿಗಳ ಪುರಾವೆಯ ಬಯಕೆಯು ಈಡೇರದೇ ಇದ್ದಾಗ ಸಂಘಟನೆಯ ವಿರುದ್ಧ ಸಾಕ್ಷ್ಯಾ ಧಾರಗಳನ್ನು ತಯಾರಿಸಲು ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಘಟನೆಯೊಂದಿಗೆ ಸಂಬಂಧ ಹೊಂದಿರದ ವ್ಯಕ್ತಿಗಳೊಂದಿಗೆ ನಡೆಸಿದ ಸಂವಹನದ ಮಾಹಿತಿಯನ್ನು ಬಳಸಿಕೊಂಡು ಈ ವಿಡಿಯೋವನ್ನು ತಯಾರಿಸಲಾಗಿತ್ತು. ಅಪೇಕ್ಷಿತ ಫಲಿತಾಂಶ ಉಂಟು ಮಾಡಲು ವಿಫಲರಾದ ಬಳಿಕ ಅವರು ವಿಷಯಗಳನ್ನು ಬದಲಾಯಿಸಿದರು. ಅವರು ಅದರ ಹೊರ ಭಾಗವನ್ನು ತಿದ್ದಿ ತಮ್ಮ ನಿರೂಪಣೆಗೆ ಹೋಲುವ ಹೊಸ ಪ್ರಶ್ನೆಗಳನ್ನು ತೂರಿಸಿದರು. ಕೇಂದ್ರ ಸಚಿವರು, ಎನ್‍ಐಎ ವಕ್ತಾರ ಮತ್ತು ಬಿಜೆಪಿ ನಾಯಕತ್ವದ ಸಂಘಟನೆಯ ವಿರುದ್ಧದ ತುರ್ತು ಪ್ರತಿಕ್ರಿಯೆಯ ವಾಸ್ತವವ ಗಮನಿಸಿದರೆ, ಸಂಪೂರ್ಣ ಆವೃತ್ತಿಯನ್ನು ಮರುಹುಟ್ಟುಹಾಕಲಾಗಿತ್ತು ಮತ್ತು ಎಲ್ಲವೂ ಪೂರ್ವಯೋಜಿತವಾಗಿ ನಡೆದಿದೆ ಎಂಬುದನ್ನು ತೋರಿಸುತ್ತದೆ.

ಸುದ್ದಿ ಯಾವುದೇ ಆಗಿದ್ದರೂ, ಅದನ್ನು ವಿಶ್ವಾಸಾರ್ಹಗೊಳಿಸುವ ನಕಲಿ ಸುದ್ದಿಗಳನ್ನು ಸಷ್ಟಿಸಲು ಇತರ ಮಾಧ್ಯಮಗಳಿಂದ ಈ ಮೊದಲೇ ರಚಿಸಲಾಗಿದ್ದ ಪಿತೂರಿಯಲ್ಲಿ ಮಾಧ್ಯಮದ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅವರು ವ್ಯಕ್ತಿಗಳೊಂದಿಗೆ ಅನೌಪಚಾರಿಕ ಮಾತುಕತೆ ಆಯೋಜಿಸಿದರು. ಅವರು ಬಯಸುವ ಪದಗಳನ್ನು ಹೇಳಲು ಅವರನ್ನು ಚತುರತೆಯಿಂದ ಪ್ರೇರೇಪಿಸಿದರು. ಬಳಿಕ ಅದಕ್ಕೆ ಹೊಸ ಪ್ರಶ್ನೆಗಳನ್ನು ತುರುಕಿಸಿ ಅದನ್ನು ಪಾಪ್ಯುಲರ್ ಫ್ರಂಟ್‍ನದ್ದು ಎಂಬಂತೆ ಪ್ರಸ್ತುತಪಡಿಸಿದರು. ಇದರ ಹಿಂದೆ ಕ್ರಿಮಿನಲ್ ಪಿತೂರಿ ಇದೆ ಮತ್ತು ನಾವು ಇದರ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ ಎಂಬುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ನಮ್ಮ ಕಾರ್ಯಚಟುವಟಿಕೆಗಳನ್ನು ನಿಗ್ರಹಿಸುವ ಪ್ರಯತ್ನದ ವಿರುದ್ಧ `ನಮಗೂ ಹೇಳಲಿಕ್ಕಿದೆ’ ಎಂಬ ಘೋಷಣೆಯೊಂದಿಗೆ ಸಂಘಟನೆಯು ರಾಷ್ಟ್ರವ್ಯಾಪಿ ಹಮ್ಮಿಕೊಂಡಿದ್ದ ಅಭಿಯಾನದ ಅಂಗವಾಗಿ ದೇಶಾದ್ಯಂತ ನಡೆದ ಮಹಾ ಸಮಾವೇಶಗಳಲ್ಲಿ ಲಕ್ಷಾಂತರ ಮಂದಿ ಜನರು ಪಾಲ್ಗೊಂಡಿದ್ದರು. ಸ್ಟಿಂಗ್ ಆಪರೇಷನ್‍ನಂತಹ ಈ ರೀತಿಯ ಕೆಟ್ಟ ನಡೆಗಳು ನಾವು ಪಡೆಯುತ್ತಿರುವ ಅಭೂತಪೂರ್ವ ಬೆಂಬಲವನ್ನು ನಾಶಪಡಿಸುವ ಉದ್ದೇಶವನ್ನು ಹೊಂದಿವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಸೇವೆ ನೀಡಲು ಮಾಧ್ಯಮದ ಎಲ್ಲಾ ನೀತಿಶಾಸ್ತ್ರ ಮತ್ತು ಸಿದ್ಧಾಂತಗಳನ್ನು ತೊರೆದ ಇಂತಹ ಶಕ್ತಿಗಳ ಕುರಿತಂತೆ ಮಾಧ್ಯಮ ಕೇಂದ್ರಗಳು ಜಾಗರೂಕರಾಗಿರಬೇಕು. ಫ್ಯಾಶಿಸ್ಟ್ ಅಜೆಂಡಾಗಳನ್ನು ಅರಿಯಲು ಮತ್ತು ಅವರ ವಿಸ್ತರಣೆಯನ್ನು ತಡೆಯಲು ನಾವು ಎಲ್ಲಾ ಪಕ್ಷಗಳು ಮತ್ತು ಸಂಘಟನೆಗಳೊಂದಿಗೆ ಮನವಿ ಮಾಡುತ್ತಿದ್ದೇವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group