ವರದಿಗಾರ-ಮೂಡಿಗೆರೆ: ಬಡ ಜನತೆಗೆ ಸ್ವಾತಂತ್ರ್ಯ ಸಿಗಲು ಜಾತ್ಯಾತೀತ ಮನಸ್ಸುಗಳು ಒಂದಾಗಬೇಕಾದ ಅಗತ್ಯತೆ ಇದೆ ಎಂದು ಪೀಸ್ & ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕರಾದ ಅಲ್ತಾಫ್ ಬಿಳಗುಳ ಹೇಳಿದ್ದಾರೆ.
ಅವರು 71 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪೀಸ್ & ಅವೆರ್ನೆಸ್ ಟ್ರಸ್ಟಿನಿಂದ ಮೂಡಿಗೆರೆಯ ಕೃಷ್ಣಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಮ್ಮ ಹಿರಿಯರು ಪ್ರಾಣ ತ್ಯಾಗ ಮಾಡಿ ಗಳಿಸಿಕೊಟ್ಟಿರುವ ಸ್ವಾತಂತ್ರ್ಯವು ಇಂದು ಬಂಡವಾಳಶಾಹಿಗಳ, ಕೋಮುವಾದಿಗಳ ಕೈಯಲ್ಲಿ ಸಿಲುಗಿ ಒದ್ದಾಡುತ್ತಿರುವ ಪ್ರಸಕ್ತ ಕಾಲದಲ್ಲಿ, ಬಡವರ ಕೈಗೆ ಸ್ವಾತಂತ್ರ್ಯ ಸಿಗಲು ಮತ್ತೊಮ್ಮೆ ಜಾತ್ಯಾತೀತ ಮನಸ್ಸುಗಳು ಒಂದಾಗಿ ಹೋರಾಡುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
ಹ್ಯಾಂಡ್ ಪೋಷ್ಟ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಮೀದ್ ಧ್ವಜಾರೋಹಣ ನೆರವೇರಿಸಿದರು.
ವೇದಿಕೆಯಲ್ಲಿ ಸಮಾಜ ಸೇವಕರಾದ ಅಬ್ದುಲ್ ರಹಿಮಾನ್, ಧಾರ್ಮಿಕ ಮುಖಂಡರಾದ ಸುಲೈಮಾನ್ ಉಸ್ತಾದ್, ಪೀಸ್ & ಅವೆರ್ನೆಸ್ ಟ್ರಸ್ಟಿನ ಸಹಾಯಹಸ್ತ ವೇದಿಕೆಯ ಅಧ್ಯಕ್ಷರಾದ ತೌಸೀಫ್, ಟ್ರಸ್ಟಿನ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ಶಫೀಕ್, ಗ್ರಾಮ ಪಂಚಾಯತ್ ಸದಸ್ಯರಾದ ಝುಬೈರ್, ಜೆ.ಡಿ.ಎಸ್. ಅಲ್ಪಸಂಖ್ಯಾತ ಅಧ್ಯಕ್ಷರಾದ ಝಕರಿಯ್ಯಾ, ಸೂಪರ್ ಗೈಸ್ ತಂಡದ ಶರೀಫ್ ಉಪಸ್ಥಿತರಿದ್ದರು.
