ರಾಷ್ಟ್ರೀಯ ಸುದ್ದಿ

ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡುವವರು ದೇಶ ವಿರೋಧಿಗಳು: ಯೋಗಿ ಆದಿತ್ಯನಾಥ್

ವರದಿಗಾರ: ಬಲಪಂಥೀಯ ಗುಂಪುಗಳು ತಮ್ಮ ಧಾರ್ಮಿಕ ನಿಲುವುಗಳನ್ನು ‍‍ಪ್ರಚಾರಪಡಿಸಲು ಹಿಂದೂ ಭಯೋತ್ಪಾದನೆಯಲ್ಲಿ ತೊಡಗಿವೆ ಎಂಬ ನಟ ಕಮಲ್ ಹಸನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸಹಿಷ್ಣುತೆ ಮತ್ತು ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡುವವರು ದೇಶವಿರೋಧಿಗಳು ಎಂದು  ಹೇಳಿದ್ದಾರೆ.

‌ಸನಾತನ ಧರ್ಮ ಒಂದೇ ಭಾರತದಲ್ಲಿರುವ ಧರ್ಮ. ಉಳಿದವರೆಲ್ಲ ವಿವಿಧ ಸಂಸ್ಕೃತಿ ಮತ್ತು ನಂಬಿಕೆಗಳ ಅನುಯಾಯಿಗಳಷ್ಟೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಧರ್ಮ ಹಾಗೂ ಸಂಸ್ಕೃತಿಯನ್ನು ಅನುಸರಿಸಲು ಹಕ್ಕಿದೆ ಎಂದು ಯೋಗಿ ಹೇಳಿದ್ದಾರೆ.

ಹಣ ಮಾಡುವುದಕ್ಕೋಸ್ಕರ ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಹಿಂದೂ ಭಯೋತ್ಪಾದನೆ ಮತ್ತು ಅಸಹಿಷ್ಣುತೆ ಬಗ್ಗೆ ಮಾತನಾಡುವವರು ಇಂಥದ್ದೇ ಆರೋಪಗಳನ್ನು ಮಾಡುವ ವಿದೇಶಿಯರನ್ನು ರಕ್ಷಿಸುತ್ತಿದ್ದಾರೆ. ಇಂಥವರು ದೇಶವಿರೋಧಿಗಳಾಗಿದ್ದು, ದೇಶದ ಜನತೆ ಇವರ ಕೃತ್ಯವನ್ನು ಎಂದಿಗೂ ಮರೆಯದು ಎಂದು ಯೋಗಿ ಆದಿತ್ಯನಾಥ್ ಹೇಳಿರುವುದಾಗಿ ಮೂಲಗಳು ವರದಿ ಮಾಡಿದೆ.

 

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group