ರಾಷ್ಟ್ರೀಯ ಸುದ್ದಿ

ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಪಾಕ್ ಐ ಎಸ್ ಐ, ಆರೆಸ್ಸೆಸ್ಸಿಗೆ 24 ಕೋಟಿ ನೀಡಿದೆ : ಮುಂಬೈ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ !

ವರದಿಗಾರ :  ಆರೆಸ್ಸೆಸ್ ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಪಾಕಿಸ್ತಾನದ ಗೂಢಾಚಾರ ಸಂಸ್ಥೆಯಾದ ಐ ಎಸ್ ಐ ನಿಂದ 24 ಕೋಟಿಯ ಲಂಚ ಪಡೆದುಕೊಂಡಿದೆ ಎಂಬ ಗಂಭೀರವಾದ ಮತ್ತು ಅಷ್ಟೇ ಆತಂಕಕಾರಿಯಾದಂತಹ ಆರೋಪವನ್ನು ಮುಂಬೈ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶ ಬಿ ಜಿ ಕೋಲ್ಸೆ ಪಾಟೀಲ್, ಆರೆಸ್ಸೆಸ್ ಮೇಲೆ ಹೊರಿಸಿದ್ದಾರೆ.

ಅವರು ಇಂದು ದೆಹಲಿಯಲ್ಲಿ ಪಿ ಎಫ್ ಐ ಸಂಘಟನೆ ಹಮ್ಮಿಕೊಂಡಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಆರ್ಯಭಟ ಬ್ರಾಹ್ಮಣವಾದಿ ಸಿದ್ಧಾಂತ ಈ ಜಗತ್ತಿನ ಅತಿ ವಿಷಕಾರಿ ಸಿದ್ಧಾಂತವಾಗಿದೆ. ಸಾವಿರಾರು ವರ್ಷಗಳಷ್ಟು ಕಾಲ ಅವರು ಇಲ್ಲಿನ ಜನರನ್ನು ಸರಿಯಾಗಿ ನಿದ್ರಿಸಲೋ ಅಥವಾ ತಿನ್ನಲೋ ಬಿಟ್ಟಿಲ್ಲ. ಅವರು ಬಹಳ ಹಿಂದಿನಿಂದಲೇ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿ, ಭಾರತದ ವಿರುದ್ಧ ಷಡ್ಯಂತರ ರೂಪಿಸುತ್ತಾ, ಭಾರತದಲ್ಲಿ ಅರಾಜಕತೆ ಸೃಷ್ಟಿಸುತ್ತಾ ಬಂದಿದ್ದಾರೆ. ಆರೆಸ್ಸೆಸ್ಸಿನ ಮುಖ್ಯಸ್ಥ ಮೋಹನ್ ಭಾಗ್ವತ್, ಪಾಕಿಸ್ಥಾನದ ಗೂಢಾಚಾರ ಸಂಸ್ಥೆಯಾದ ಐ ಎಸ್ ಐ ನಿಂದ 24 ಕೋಟಿ ಹಣವನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ. ಭಾರತದಲ್ಲಿ ಅರಾಜಕತೆ ಸೃಷ್ಟಿಸುವುದಷ್ಟೇ ಇದರ ಉದ್ದೇಶ ಎಂದು ಕೋಲ್ಸೆ ಪಾಟೀಲ್ ಹೇಳಿದ್ದಾರೆ. ಈ ಆರ್ಯಭಟ ಬ್ರಾಹ್ಮಣವಾದಿಗಳು,  ಹಿಂದೂಗಳ ಮಧ್ಯೆ ಭಿನ್ನಾಬಿಪ್ರಾಯ ಸೃಷ್ಟಿಸಿ, ಅವರ ನಡುವೆ ಒಡಕು ಮೂಡಿಸಿದ್ದಷ್ಟೇ ಅವರ ಸಾಧನೆ ಎಂದು ಅವರು ಹೇಳಿದ್ದಾರೆ. ನಾವು ನಮ್ಮ ಶತ್ರುಗಳು ಯಾರೆಂಬುವುದನ್ನು ಮೊದಲು ಅರಿತುಕೊಳ್ಳಬೇಕಾಗಿದೆ. ಅದಕ್ಕಾಗಿ ಎಲ್ಲಾ ಸಮಾನ ಮನಸ್ಕ ಹಿಂದೂಗಳು, ದಲಿತರು ಮತ್ತು ಎಲ್ಲಾ ಹಿಂದುಳಿದ ವರ್ಗಗಳ ಜನರು ಒಂದಾಗಬೇಕಾಗಿದೆ. ಇದು ನಮ್ಮ ಭಾರತ, ನಾವಾಗಿದ್ದೇವೆ ಇದರ ಒಡೆಯರು. ಎಲ್ಲರೂ ಒಂದಾಗಿ ಈ ಆರ್ಯಭಟ ಬ್ರಾಹ್ಮಣವಾದವನ್ನು ಒದ್ದೋಡಿಸಬೇಕಾಗಿದೆ ಎಂದು ಪಾಟೀಲ್ ಕರೆ ನೀಡಿದರು.

ಕೋಲ್ಸೆ ಪಾಟೀಲ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ವೀಡೀಯೋ :

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group