ರಾಷ್ಟ್ರೀಯ ಸುದ್ದಿ

ಕಮಲ್ ಹಸನ್ ಹಣೆಗೆ ಗುಂಡಿಕ್ಕಿ; ಹಿಂದೂ ಮಹಾಸಭಾ ನಾಯಕ

ಕಮಲ್ ಹಸನ್ ರ ‘ಹಿಂದೂ ಭಯೋತ್ಪಾದನೆ’ ಹೇಳಿಕೆಯನ್ನು ನಿಜಪಡಿಸಿದ ಹಿಂದೂ ಮಹಾಸಭಾ

ವರದಿಗಾರ: ಇತ್ತೀಚೆಗೆ ಹಿಂದೂ ಭಯೋತ್ಪಾದನೆ ಬಗ್ಗೆ ಲೇಖನ ಬರೆದಿದ್ದ ನಟ ಕಮಲ್‌ ಹಸನ್‌, ಬಲಪಂಥೀಯ ಸಂಘಟನೆಗಳು ಹಿಂಸಾಚಾರಕ್ಕೆ ಮುಂದಾಗುತ್ತಿವೆ, ಇವರೊಂದಿಗೆ ವಾದಕ್ಕೆ ಇಳಿದರೆ ಹಿಂಸೆಯನ್ನು ಅನುಸರಿಸುತ್ತಾರೆ. ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ ಎಂಬ ಹೇಳಿಕೆಯನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾ ನಾಯಕ ನಿಜವಾಗಿಸಿದ್ದಾರೆ.

ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ  ರಾಷ್ಟ್ರೀಯ ಸುದ್ದಿ ವಾಹಿನಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಹೇಳಿಕೆಯಲ್ಲಿ, ಕಮಲ್‌ ಹಸನ್‌ರನ್ನು ಶೂಟ್‌ ಮಾಡಿ ಕೊಲೆ ಮಾಡುವುದಾಗಿ ಬಹಿರಂಗ ಬೆದರಿಕೆಯನ್ನು ಹಾಕಿರುವುದಲ್ಲದೆ, ಕಮಲ್‌ ಹಸನ್ ರಂತೆ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುವ ಪ್ರತಿಯೊಬ್ಬರ ಹಣೆಗೆ ಗುಂಡಿಡಬೇಕು ಇಲ್ಲವೇ ನೇಣು ಹಾಕಬೇಕು ಎಂದು ಹೇಳಿದ್ದಾರೆ.

ತನ್ನ ಹೇಳಿಕೆಯನ್ನು ಸಮರ್ಥಿಸುತ್ತಾ,  ಹಿಂದೂ ನಂಬಿಕೆಯನ್ನು ಪ್ರಶ್ನಿಸುವ ಮತ್ತು ಅದರ ಆಚಾರವನ್ನು ದ್ವೇಷಿಸುವ ಮನೋಭಾವದವರಿಗೆ ಈ ಪುಣ್ಯ ಭೂಮಿಯಲ್ಲಿ ಬದುಕುವ ಹಕ್ಕು ಇಲ್ಲ ಎಂದು ಹೇಳಿದ್ದಾರೆ.

ಈ ಹೇಳಿಕೆ ಹಾಗೂ ಇತ್ತೀಚೆಗೆ ಪ್ರಗತಿಪರರ ಹತ್ಯೆಗೆ ತುಂಬಾನೇ ಸಾಮೀಪ್ಯವಿದೆ ಎಂದರೆ ತಪ್ಪಾಗಲಾರದು.

 

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group