ವರದಿಗಾರ ವಿಶೇಷ

ಹಾದಿಯಾ ಪ್ರಕರಣ : ಕುಟುಕು ಕಾರ್ಯಾಚರಣೆಗೆ ಬಂದಿದ್ದ ‘ಇಂಡಿಯಾ ಟುಡೇ’ ಪತ್ರಕರ್ತೆ ಬೆಚ್ಚಿ ಬಿದ್ದದ್ಯಾಕೆ?

►ಪಿ ಎಫ್ ಐ ನಿಷೇಧ ಅಭಿಯಾನದಲ್ಲಿ ಕೇಂದ್ರದೊಂದಿಗೆ “ಕೈ” ಜೋಡಿಸಿದ ಆರೋಪ ಇಂಡಿಯಾ ಟುಡೇ ಮೇಲೆ?!

ವರದಿಗಾರ ವಿಶೇಷ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕೆಂಬ ಬಲ ಪಂಥೀಯರ ಕೂಗಿಗೆ ಮಣಿದ ಕೇಂದ್ರ ಸರಕಾರವು ನಿಷೇದಕ್ಕೆ ವೇದಿಕೆಯನ್ನು ಸಜ್ಜುಪಡಿಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಹಿಂದೆ ಝಾಕಿರ್ ನಾಯ್ಕ್ ವಿವಾದಕ್ಕೆ ಸಂಬಂದಪಟ್ಟು ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ನಿಷೇದಕ್ಕೆ ಮುನ್ನ ಸಜ್ಜುಪಡಿಸಿದ ವೇದಿಕೆಯನ್ನೇ ಇನ್ನೊಮ್ಮೆ ಸಜ್ಜುಗೊಳಿಸುತ್ತಿದೆ ಎನ್ನುವುದು ಪಿ ಎಫ್ ಐ ಕಾರ್ಯಕರ್ತರ ಆರೋಪ. ಮೊದಲು ಪಿ ಎಫ್ ಐ ವಿರುದ್ಧ ‘ಟೈಮ್ಸ್ ನೌ’ ಚಾನೆಲ್ ಭಯೋತ್ಪಾದನೆ, ಬಲವಂತದ ಮತಾಂತರ ಎಂಬಿತ್ಯಾದಿ ಗಂಭೀರ ಆರೋಪಗಳೊಂದಿಗೆ ಕೆಲವು ದಿನಗಳವರೆಗೆ ಪಿ ಎಫ್ ಐ ಸಂಘಟನೆಗೆ ‘ಪ್ರೈಂ ಟೈಂ’ ಪ್ರಾಮುಖ್ಯತೆ ನೀಡಿತ್ತು. ಆದರೆ ಈಗಾಗಲೇ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಮುಖವಾಣಿ ಎಂಬ ಆರೋಪ ಟೈಮ್ಸ್ ನೌ ಚಾನೆಲಿನ ವಿರುದ್ಧ ಕೇಳಿ ಬರುತ್ತಿರುವುದರಿಂದ ಬಿಜೆಪಿ-ಸಂಘಪರಿವಾದವರಲ್ಲದವರು ಚಾನೆಲಿನ ಈ ಸುದ್ದಿಗೆ ಅಷ್ಟು ಗಂಭೀರತೆ ಕೊಡುವುದಿಲ್ಲ ಎನ್ನುವುದನ್ನು ಗಮನಿಸಿದ ಆಡಳಿತ ಪಕ್ಷದ ಮುಂದಿನ ಕ್ರಮವಾಗಿದೆ ‘ಆಜ್ ತಕ್’ ಹಾಗೂ ‘ಇಂಡಿಯಾ ಟುಡೇ’ ಯ ಆರೋಪಗಳು ಎನ್ನುತ್ತಿದ್ದಾರೆ ಸಂಘಟನೆಯ ಕಾರ್ಯಕರ್ತರು.

ಪಿ ಎಫ್ ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಹಲವು ಕಾರಣಗಳನ್ನು ನೀಡುತ್ತಿರುವ ಕೇಂದ್ರ ಸರಕಾರ, ಅದರಲ್ಲೊಂದಾದ ಕೇರಳದ ಡಾ. ಹಾದಿಯಾರ ಮತಾಂತರ ಪ್ರಕರಣದಲ್ಲಿ ಹಾದಿಯಾರ ಪರವಾಗಿ ವಾದಿಸುತ್ತಿರುವ ವಕೀಲ ಕೆ ಸಿ ನಝೀರ್’ರವರನ್ನು ಸಂದರ್ಶಿಸಲು ಬಂದ ‘ಇಂಡಿಯಾ ಟುಡೇ’ ವರದಿಗಾರ್ತಿ ಪ್ರಿಯಂವದಾ ತಾನು ಸಂದರ್ಶನ ನಡೆಸುತ್ತಿರುವ ದೃಶ್ಯಗಳನ್ನು ನಝೀರ್’ರವರ ಸಹೋದ್ಯೋಗಿಯೊಬ್ಬರು ತನ್ನ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದು, ‘ದಯವಿಟ್ಟು ರೆಕಾರ್ಡ್ ಮಾಡದಂತೆ ಗೋಗರೆದಿದ್ದಾರೆ. ಈ ಎಲ್ಲಾ ಘಟನಾವಳಿಗಳನ್ನು ವೀಡಿಯೋ ಸಮೇತ ವಕೀಲ ಕೆ ಸಿ ನಝೀರ್’ರವರು ತನ್ನ ಫೇಸ್ಬುಕ್’ನಲ್ಲಿ ಪೋಸ್ಟ್ ಮಾಡಿದ್ದು, ‘ಇಂಡಿಯಾ ಟುಡೇ’ಯ ಕರಾಳ ಮುಖ ಮತ್ತು ಕೀಳು ಮಟ್ಟದ ಪತ್ರಿಕೋಧ್ಯಮವನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ.

 

ನಝೀರ್’ರವರ ಗೆಳೆಯರ ಪ್ರಕಾರ ಇದೊಂದು ಷಡ್ಯಂತರದ ಭಾಗವಾಗಿದ್ದು, ‘ಇಂಡಿಯಾ ಟುಡೇ’ ಚಾನೆಲಿನ ವರದಿಗಾರರು ಶರೀಫ್ ಅನ್ನುವ ಓರ್ವ ಪಿ ಎಫ್ ಐ ಕಾರ್ಯಕರ್ತ ಮತ್ತು ವಿಮೆನ್ಸ್ ಫ್ರಂಟಿನ ಝೈನಬಾರವರನ್ನು ಕುಟುಕು ಕಾರ್ಯಾಚರಣೆಯ ಮೂಲಕ ಸಂದರ್ಶನ ನಡೆಸಿದ್ದು, ಅಲ್ಲಿ ಇವರೀರ್ವರ ಮಾತುಕತೆಗಳನ್ನು ಸಂಪೂರ್ಣವಾಗಿ ತಿರುಚಿ, ಕೇಂದ್ರ ಸರಕಾರದ ಹುನ್ನಾರಕ್ಕೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಪ್ರಸಾರ ಮಾಡಿದ ಆರೋಪವನ್ನು ‘ಇಂಡಿಯಾ ಟುಡೇ’ ಎದುರಿಸುತ್ತಿದೆ. ಈ ಕುರಿತು ಚಾನೆಲಿನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವುದಾಗಿಯೂ ತಿಳಿದು ಬಂದಿದೆ.

ವಕೀಲ ಕೆ ಸಿ ನಸೀರ್’ರವರ ಫೇಸ್ಬುಕ್ ಪೋಸ್ಟ್ ಕೆಳಗಿನಂತಿದೆ

ಇಂಡಿಯಾ ಟುಡೇಯ ಚೆನ್ನೈ ವರದಿಗಾರ್ತಿ ಪ್ರಿಯಂವದಾ ಕ್ಯಾಮರಾ ಮ್ಯಾನಿನೊಂದಿಗೆ ‘ಸತ್ಯಸರಣಿ’ಗೆ ಬಂದಿದ್ದರು.

ಎರಡೂವರೆ ಗಂಟೆಗಳಷ್ಟು ಕಾಲ ಅವರು ಕ್ಯಾಮರಾದೊಂದಿಗೆ ಅಲ್ಲಿ ಕಾಲ ಕಳೆದರು.

ತಮಗೆ ಬೇಕಾದ ವಿಷಯಗಳ ಕುರಿತು ಪ್ರಶ್ನಿಸಿ, ಕೆಲವನ್ನು ನೇರವಾಗಿ ಕಂಡು ಅದಕ್ಕೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಅಲ್ಲಿ ನೀಡಿದ ಬೋಜನವನ್ನು ಸವಿದು ಅಲ್ಲಿಂದ ಹೊರಟಿದ್ದರವರು

ಅದರ ನಂತರ ಮತ್ತೊಮ್ಮೆ ಅವರು ನನ್ನ ಮತ್ತು ಝೈನಬಾ ಟೀಚರ್’ರವರ ಸಂದರ್ಶನಕ್ಕಾಗಿ ಬಂದಿದ್ದು.

ಅವರು ಬಂದ ಕೂಡಲೇ ವರದಿ ಮಾಡಿದ್ದು, ಪೊಲೀಸರಿಗೂ ಸಹ ಕಾಲಿಡಲು ಸಾಧ್ಯವಾಗದ “ಐಸಿಸ್ ನೇಮಕಾತಿ” ಕೇಂದ್ರಕ್ಕೆ ಕಮಾಂಡೋಗಳ ಸಹಾಯದೊಂದಿಗೆ ಅತಿ ಸಾಹಸ ಪ್ರದರ್ಶಿಸಿ ಬಂದು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರ ಕುರಿತಾಗಿತ್ತು !! (ಕುಹಕ ಮತ್ತು ಚುಚ್ಚು ಮಾತಿನ ಧಾಟಿಯಲ್ಲಿ)

ಸಹಿಸಲಸಾಧ್ಯವಾದ ಅವರ ಮುಂದಿನ ಅಚ್ಚರಿ ಕಾದಿದ್ದು ‘ಜಿಹಾದಿ ರಾಣಿ’ ಝೈನಬಾ ಟೀಚರನ್ನು ಕಂಡಾಗಲಾಗಿತ್ತು ! (ಮತ್ತೆ ಕುಹಕದ ಧಾಟಿ)

ಅವರನ್ನು ಕಂಡ ಕೂಡಲೇ ವರದಿಗಾರ್ತಿ ಪ್ರಿಯಂವದಾ ಉದ್ಗರಿಸಿದ್ದು “ಓಹ್..ಇವರೇನಾ ಝೈನಬಾ? ಜಿಹಾದಿ ರಾಣಿ ಮತ್ತು ಬಲವಂತದ ಮತಾಂತರದ ಮಾಸ್ಟರ್ ಮೈಂಡ್ ಎಂದು ನನಗೆ ಹೇಳಲ್ಪಟ್ಟವರು? ಅಯ್ಯೋ, ಸತ್ಯಸರಣಿ ಮತ್ತು ಇವರೆಲ್ಲರ ಕುರಿತು ಬಹಳ ಕೆಟ್ಟ ಚಿತ್ರಗಳು ಮತ್ತು ಕಥೆಗಳು ನನಗೆ ನಮ್ಮ ಕಛೇರಿಯಲ್ಲಿ ಹೇಳಿದ್ದರು !! ಆದರೆ ಈಗ ನೋಡಿದ್ರೆ ಅವೆಲ್ಲವೂ ಸುಳ್ಳೆನಿಸುತ್ತಿದೆ ನನಗೆ !”

ಅವರು ಹೇಳಿದ್ದನ್ನು ಮಿತ್ರನೋರ್ವ ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದು ಗಮನಿಸಿದ ಆಕೆ ಕೂಡಲೇ, “ಇದೆಲ್ಲಾ ನನ್ನ ವೈಯುಕ್ತಿಕ ಹೇಳಿಕೆಗಳಷ್ಟೇ, ದಯವಿಟ್ಟು ಇದನ್ನು ಡಿಲೀಟ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಗೋಗರೆಯತೊಡಗಿದಳು.

ಅವಳ ಈ ರೀತಿಯ ದಯನೀಯ ಅವಸ್ಥೆಯನ್ನು ಕಂಡು ನಾ ಕೇಳಿದೆ “ತಾವು ಕಂಡಿದ್ದು ಮತ್ತು ತಮ್ಮ ಅರಿವಿಗೆ ಬಂದ ನೈಜ ವಿಷಯಗಳು ಹೀಗಿದ್ದರೂ ತಮ್ಮ ಚಾನೆಲ್ ಆಡಳಿತ ಸುಳ್ಳುಗಳನ್ನು ಪ್ರಸಾರ ಮಾಡುತ್ತಿರುವುದರಿಂದಾಗಿರಬಹುದಲ್ಲವೇ ತಮ್ಮ ಈ ದಿಗ್ಭ್ರಾಂತಿಗೆ ಕಾರಣ?

ತಮ್ಮ ಬಯಲಾದ ಸಂಚನ್ನು ಮರೆಮಾಚಲು ಬಹಳ ಕಷ್ಟಪಟ್ಟು ಆಕೆ ಹೇಳಿದ್ದು ” ಅದು ಹಾಗಲ್ಲ, ಸಿದ್ಧಾಂತಕ್ಕೆ ವಿರುದ್ಧವಾದುದು, ನಾವು ಸಂದರ್ಶನ ಮಾಡುವುದನ್ನು ತಮಗೂ ರೆಕಾರ್ಡ್ ಮಾಡಬಹುದಲ್ಲವೇ?” ಎಂದಾಗಿತ್ತು ಆಕೆ ಉತ್ತರಿಸಿದ್ದು.

ಆದರೆ ನಮ್ಮಂತಹಾ ಪಾಪದ “ಭಯೋತ್ಪಾದಕರಿಗೆ” ಆಗ ಗೊತ್ತಾಗಲಿಲ್ಲ. (ಕುಹಕ)

ನನ್ನ ಸಂದರ್ಶನದ ವೀಡಿಯೋ ಇನ್ನೂ ಹೊರಬಂದಿಲ್ಲ. ಬಹುಶಃ ಅದರ ಎಡಿಟಿಂಗ್, ಕಾಪಿ-ಪೇಸ್ಟ್ ಮಾಡುತ್ತಿರುವ ಪ್ರಕ್ರಿಯೆ ನಡೆಯುತ್ತಿರಬಹುದು. ಒಂದು ವೇಳೆ ಅವರಿಗೆ ಬೇಕಾದ ಹಾಗೆ ಎಡಿಟಿಂಗ್ ಆಗದಿದ್ದರೆ ನನ್ನ ವೀಡಿಯೋ ಹೊರಬರುವ ಸಾಧ್ಯತೆಯೂ ಇಲ್ಲ.

‘ಸತ್ಯ ಸರಣಿ’ಯ ಅತಿ ಭಯಂಕರ ರಹಸ್ಯಗಳನ್ನು ತನ್ನ ಒಡಲಲ್ಲಿಟ್ಟಿರುವ ಅಲ್ಲಿನ ಟಾಯ್ಲೆಟಿನ ಸ್ಟಿಂಗ್ ಅಪರೇಶನ್’ನ ವೀಡಿಯೋಗಳು ಯಾವಾಗ ಹೊರಬರುತ್ತೋ ಏನೋ? ( ಕುಹಕದ ಮಾತು)

ಬರುವಾಗ ಪ್ರಿಯಂವದಾ ಮೊಬೈಲ್ ಸಂದೇಶ ಕಳುಹಿಸಬಹುದೇನೋ?

ನಂತರ ‘ಇಂಡಿಯಾ ಟುಡೇ’ ಚಾನೆಲ್, ಆರೆಸ್ಸೆಸ್ಸಿಗೆ ಬೇಕಾಗಿ ನಡೆಸಿದ ಮಾಧ್ಯಮ ವೇಶ್ಯಾವೃತ್ತಿಯ ಕಪಟ ದೇಶಭಕ್ತಿಯ ಭಾರತೀಯ ಆವೃತ್ತಿ ‘ಇಂಡಿಯಾ ಟುಡೇ’ ಚಾನೆಲಿನಲ್ಲಿ ಪ್ರಸಾರವಾದಾಗ  ನಾನು ಪ್ರಿಯಂವದಾಗೆ ಕೆಲವೊಂದು ಸಂದೇಶಗಳನ್ನು ಕಳುಹಿಸಿದೆ.

ಅವರಿಂದ ಇದುವರೆಗೂ ಉತ್ತರ ಬಂದಿಲ್ಲ. ಅದು ಅವರ ತಪ್ಪಾಗಿರಲಿಕ್ಕಿಲ್ಲ ಪಾಪ. ಅದು ಅಸಹಾಯಕತೆಯಾಗಿರಬಹುದು. ಅವರನ್ನು ಸುಮ್ಮನೆ ಬಿಟ್ಟುಬಿಡಿ. ಅವರು ಯಾವುದೇ ನಿಮಿಷದಲ್ಲಿ ಹೊರಹಾಕಲ್ಪಡುವ ಓರ್ವ ಚಾನೆಲ್ ಕೆಲಸಗಾರ್ತಿ ಮಾತ್ರ.

ನಿಮ್ಮ ಚಾನೆಲಿಗಿರುವ ಮರ್ಯಾದೆಗಿಂತಲೂ ಓರ್ವ ವಿಟಪುರುಷ (ಪಿಂಪ್) ನಿಗಿದೆಯೆಂದು ನಿಮ್ಮ ಚಾನೆಲಿನ ಮುಖ್ಯಸ್ಥರಿಗೆ ತಿಳಿಸಿರೆಂದು ನಾನವರಿಗೆ ಹೇಳಿದೆ.

ಇದಾಗಿದೆ ವಕೀಲ ಕೆ ಸಿ ನಝೀರ್’ರವರ ಫೇಸ್ಬುಕ್ ಪೋಸ್ಟಿನ ಯಥಾವತ್ ರೂಪ.

ಪಿ ಎಫ್ ಐ ಸಂಘಟನೆಯ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಸರಿ ಎಂದಿಟ್ಟುಕೊಳ್ಳೋಣ, ಹಾಗಿದ್ದಲ್ಲಿ ಕುಟುಕು ಕಾರ್ಯಾಚರಣೆಯ ನಂತರ ವೀಡಿಯೋದಲ್ಲಿ ‘ಕೈಚಳಕ’ ತೋರಿಸಬೇಕಾದ ಅವಶ್ಯಕತೆಯಿತ್ತೇ?

ಕುಟುಕು ಕಾರ್ಯಾಚರಣೆಯ ಸಂಪೂರ್ಣ ವೀಡಿಯೋವನ್ನು ಈ ಚಾನೆಲ್ ಗಳು ಏಕೆ ಬಹಿರಂಗಗೊಳಿಸಿಲ್ಲ?? ಕುಟುಕು ಕಾರ್ಯಾಚರಣೆಗೆ ಬಂದಿದ್ದ ಪತ್ರಕರ್ತೆ ಆಕೆಯ ವೀಡಿಯೊ ಚಿತ್ರೀಕರಿಸುವಾಗ ಬೆಚ್ಚಿ ಬಿದ್ದದ್ಯಾಕೆ??

ಸಾಮಾಜಿಕ ಸಂಘಟನೆಯೆಂದು ಹೇಳಿಕೊಳ್ಳುತ್ತಿರುವ ಸಂಘಟನೆಯ ವಿರುದ್ಧ ಭಯೋತ್ಪಾದನೆ ಹಾಗೂ ಬಲವಂತದ ಮತಾಂತರದಂತಹಾ ಗಂಭೀರ ಅರೋಪಗಳು ಹಾಗೂ ನಿಷೇಧದ ಸೂಚನೆಗಳು ಸಿಗುತ್ತಿರುವಾಗ ಸಾಮಾನ್ಯ ಜನರು ಸತ್ಯವನ್ನು ತಿಳಿಯಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಕುಟುಕು ಕಾರ್ಯಾಚರಣೆ ನಡೆಸಿದ್ದು ಶ್ಲಾಘನೀಯ. ಆದರೆ ನಂತರದ ‘ಕೈಚಳಕ’ ಹಾಗೂ ವರದಿಯ ತಿರುಚುವಿಕೆ ಅಷ್ಟೇ ಖಂಡನೀಯ. ಕುಟುಕು ಕಾರ್ಯಾಚರಣೆಯಲ್ಲಿ ಕ್ಯಾಮರಾವನ್ನು ಮಾತ್ರ ಅಡಗಿಸಬೇಕೇ ಹೊರತು ಸತ್ಯವನ್ನಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group