ಸುತ್ತ-ಮುತ್ತ

ಕೇಂದ್ರ ಕಾನೂನು ಸಚಿವರ ಅಭಿಪ್ರಾಯ ಅವಮಾನಕಾರಿ: ಪಾಪ್ಯುಲರ್ ಫ್ರಂಟ್

ವರದಿಗಾರ: ಇಂಡಿಯಾ ಟುಡೇಯ ತಥಾಕಥಿತ ಸ್ಟಿಂಗ್ ಆಪರೇಷನ್ ಪ್ರಸಾರವಾದ ಬಳಿಕ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನೀಡಿರುವ ಅಭಿಪ್ರಾಯವು ಅವಮಾನಕಾರಿ ಮತ್ತು ಕೇಂದ್ರ ಸಚಿವರಾಗಿರುವ ಅವರ ಸ್ಥಾನಕ್ಕೆ ಕಿಂಚಿತ್ತೂ ಭೂಷಣವಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಭಿಪ್ರಾಯ ಪಟ್ಟಿದೆ.

ವಿಡಿಯೋದ ಸತ್ಯಾಸತ್ಯತೆಯನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿರುವಾಗ, ಕೇಂದ್ರ ಸಚಿವರು ಕೇರಳದಲ್ಲಿ ಬಲವಂತದ ಮತಾಂತರದ ಹೆಸರಿನಲ್ಲಿ ಮುಸ್ಲಿಮ್ ಸಂಘಟನೆಗಳ ಮೇಲೆ ಸಾರ್ವಜನಿಕವಾಗಿ ಒಂದೇ ಏಟಿಗೆ ದಾಳಿ ನಡೆಸಿದ್ದಾರೆ. ಸರಕಾರದ ಹುದ್ದೆಯಲ್ಲಿ ಕುಳಿತಿರುವ ವ್ಯಕ್ತಿಗಳಿಗೆ ಪಾಪ್ಯುಲರ್ ಫ್ರಂಟ್‍ನಂತಹ ಸಂಘಟನೆಗಳ ವಿಚಾರಣೆಗಾಗಿ ವೃತ್ತಿಪರ ಯಾ ನೈತಿಕ ಪತ್ರಿಕೋದ್ಯಮದ ಹಿನ್ನೆಲೆಯಿರುವ ವ್ಯಕ್ತಿಗಳಿಂದ ನಡೆಸಲಾದ ಅಣಕು ಕಾರ್ಯಾಚರಣೆಯ ಮೇಲೆ ಪೂರ್ಣವಾಗಿ ನಂಬುವ ಅಗತ್ಯವೇನೂ ಇಲ್ಲ. ಈ ರೀತಿಯ ನಡೆಗಳು, ಪಾವತಿ ಮಾಧ್ಯಮ ವ್ಯಕ್ತಿಗಳು ಮತ್ತು ಚಾನೆಲ್‍ಗಳನ್ನು ಬಳಸಿಯೂ ಮಂತ್ರಿ ಮತ್ತು ಸರಕಾರವು ಸಂಘಟನೆಯನ್ನು ನಿಗ್ರಹಿಸುವ ಕಾರಣಗಳಿಗಾಗಿ ತುಂಬಾ ನಿರಾಶರಾಗಿದ್ದಾರೆ ಎಂಬ ಭಾವನೆಯನ್ನು ಮಾತ್ರವೇ ಸಷ್ಟಿಸುತ್ತವೆ ಎಂದು ಹೇಳಿದೆ.

ಪಾಪ್ಯುಲರ್ ಫ್ರಂಟ್ ಸಂಘಟನೆಯು ಇಂದು ಮತ್ತು ಎಂದಿಗೂ ಸಾಂವಿಧಾನಿಕ ಮೌಲ್ಯಗಳ ಮೇಲೆಯೇ ನಿಂತಿದೆ. ವಾಸ್ತವದಲ್ಲಿ ಈ ರೀತಿಯ ವಿಡಿಯೋಗಳು ಅವರ ಬಳಿ ನಮ್ಮ ವಿರುದ್ಧ ಇತ್ತೀಚಿನ ತನಿಖಾ ವರದಿಗಳಲ್ಲಿ ಮೊದಲೇ ಸಿದ್ಧಪಡಿಸಿದ ಸಾಕ್ಷ್ಯಗಳಲ್ಲದೇ ಮತ್ತೇನೂ ಇಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಒಂದು ವೇಳೆ ಅವರಲ್ಲಿ ಅಲ್ಪವಾದರೂ ನೈತಿಕತೆ ಎಂಬುದು ಉಳಿದಿದ್ದರೆ, ಯಾವುದೇ ಎಡಿಟ್ ಮಾಡಿರದ ವಿಡಿಯೋವನ್ನು ಪೂರ್ಣವಾಗಿ ಪ್ರಸಾರ ಮಾಡಲಿ ಎಂದು ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಇಂಡಿಯಾ ಟುಡೇಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್‍ಮ್ಯಾನ್ ಇ.ಅಬೂಬಕರ್  ಇ.ಅಬೂಬಕರ್ ಸವಾಲು ಹಾಕಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group