ವರದಿಗಾರ-ಬೆಂಗಳೂರು:ನಗರದಲ್ಲಿ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಹಸಿವು ಮುಕ್ತ ಸಮಾಜವೇ ನಮ್ಮ ಗುರಿಯೆಂದು ಹೇಳಿದ್ದಾರೆ. ಅದರ ಭಾಗವಾಗಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.ಬೆಂಗಳೂರಿನಲ್ಲಿ 198 ಕ್ಯಾಂಟೀನ್ ಪ್ರಾರಂಭಿಸಬೇಕಿತ್ತು, ಆದರ ಸೂಕ್ತ ಸ್ಥಳಾವಕಾಶದ ಕೊರತೆಯಿಂದ 101 ಕ್ಯಾಂಟಿನ್ ಉದ್ಘಾಟಿಸಲಾಗಿದೆ ಎಂಬ ಬೇಸರವನ್ನೂ ಇದೇ ಸಂದರ್ಭ ಮುಖ್ಯಮಂತ್ರಿ ವ್ಯಕ್ತಪಡಿಸಿದರು..ಇದು ರಾಜಕೀಯ ಲಾಭಕ್ಕಾಗಿ ಮಾಡಿದ ಕಾರ್ಯಕ್ರಮ ಅಲ್ಲವೆಂದು ಸ್ಪಷ್ಟಪಡಿಸಿದರು.ಯೋಜನೆಯೂ ಬೆಂಗಳೂರಿನ ಪಾಲಿಗೆ ಐತಿಹಾಸಿಕ ಮತ್ತು ಸ್ಮರಣೀಯ ದಿನವೆಂದು ಹೇಳಿದರು.
ಇಂದಿರಾ ಕ್ಯಾಂಟೀನ್ ನನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಉದ್ಘಾಟನೆ ಮಾಡಿದ್ದಾರೆ.ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೊಂದು ಐತಿಹಾಸಿಕ ಕಾರ್ಯಕ್ರಮವೆಂದು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಯಾರೂ ಹಸಿವಿನಿಂದ ಇರಬಾರದು. ಈ ಯೋಜನೆಯಿಂದ ಬೆಂಗಳೂರಿಗೆ ಬರುವ ಅಸಂಖ್ಯಾತ ಜನರಿಗೆ ಆಹಾರ ದೊರೆಯಲಿದ್ದು, ಹಸಿವನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು
ಇವತ್ತಿನಿಂದ ಸರಕಾರದ ಕನಸಾಗಿದ್ದ ಇಂದಿರಾ ಕ್ಯಾಂಟೀನ್ ಬಡವರ ಸೇವೆಗೆ ಸಿಗಲಿದೆ.ಈ ಮೂಲಕ ಸಮಾಜದಲ್ಲಿ ಹಸಿವಿನಿಂದ ಜೀವನ ಮುಂದೂಡುತ್ತಿದ್ದ ಜನತೆಯ ಪಾಲಿಗೆ ಹೊಸದೊಂದು ಆಶಾಕಿರಣವಾಗಲಿ.
