ರಾಜ್ಯ ಸುದ್ದಿ

ಬಲಪಂಥೀಯರಿಗೆ ಹಿಂದುತ್ವ ಭಯೋತ್ಪಾದನೆಯ ಅಸ್ತಿತ್ವವನ್ನು ನಿರಾಕರಿಸಲಾಗದು : ನಟ ಕಮಲ್ ಹಸನ್

ವರದಿಗಾರ : ತಮಿಳು ಚಿತ್ರ ರಂಗದ ಮೇರು ನಟ ಕಮಲ್ ಹಸನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಲಪಂಥೀಯರಿಗೆ ಹಿಂದುತ್ವ ಭಯೋತ್ಪಾದನೆಯ ಅಸ್ತಿತ್ವವನ್ನು ನಿರಾಕರಿಸಲು ಸಾಧ್ಯವಿಲ್ಲವೆಂದವರು ಹೇಳಿದ್ದಾರೆ. ಹಿಂದುತ್ವ ಭಯೋತ್ಪಾದನೆಯ ಮಾತುಕತೆಗಳ ವೇದಿಕೆಗಳಲ್ಲಿ ತಮ್ಮ ಅಸ್ತಿತ್ವವನ್ನು ಬಲಪಂಥೀಯರಿಗೆ ಇಲ್ಲವೆನ್ನಲು ಸಾಧ್ಯವೇ ? ಏಕೆಂದರೆ ಅವರ ಶಿಬಿರಗಳಲ್ಲೇ ಭಯೋತ್ಪಾದನೆಯ ಕರಾಳ ಹಸ್ತ ಚಾಚಿಕೊಂಡಿದೆ. ಹಿಂದೆಲ್ಲಾ ಬಲಪಂಥೀಯರು ಮಾತುಕತೆಗಳ ಮೂಲಕ ತಮ್ಮ ವಿರೋಧಿಗಳೊಂದಿಗೆ ವ್ಯವಹರಿಸುತ್ತಿದ್ದರು, ಆದರೆ ಈಗ ಹಿಂಸಾತ್ಮಕ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ಕಮಲ್ ಹಸನ್ ತಮಿಳು ವಾರಪತ್ರಿಕೆ “ದಿ ಪಾಪ್ಯುಲರ್ ಸ್ಟಾರ್” ಗೆ ಬರೆದ ತನ್ನ ಲೇಖನದಲ್ಲಿ ಹೇಳಿಕೊಂಡಿದ್ದಾರೆ.

ಮುಂದುವರೆಯುತ್ತಾ ಕಮಲ್, ಹಿಂದೂಗಳು ಈಗೀಗ ” ಸತ್ಯಮೇವ ಜಯತೆ”ಯಲ್ಲಿ ನಂಬಿಕೆ ಕಳಕೊಳ್ಳಲಾರಂಭಿಸಿದ್ದಾರೆ. ಮಾತ್ರವಲ್ಲ ‘ಸರಿ ಇರಲೂಬಹುದು’ ಎನ್ನುವ ಯೋಚನೆಗಳಿಗೆ ಜೋತು ಬೀಳತೊಡಗಿದ್ದಾರೆಂದು ಹೇಳಿದ್ದಾರೆ.

ರಾಜಕೀಯ ತಜ್ಞರ ಪ್ರಕಾರ, ಕಮಲ್ ಹಸನ್’ರವರ ಈ ಹೇಳಿಕೆಯು ತಮಿಳುನಾಡು ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಸಾರಲು ಸಹಕಾರಿಯಾಗಬಹುದೆಂದು ಅಂದಾಜಿಸಲಾಗಿದೆ.

ಆರೆಸ್ಸೆಸ್ ವಲಯದಲ್ಲಿ ಕಮಲ್ ಹೇಳಿಕೆಗೆ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕಮಲ್ ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group