ರಾಷ್ಟ್ರೀಯ ಸುದ್ದಿ

ಮಹಾನದಿ ಸಿನಿಮಾಗೆ ಮಗಳ ಕಿಡ್ನಾಪ್ ಯತ್ನ ಪ್ರೇರಣೆ: ಕಮಲ್ ಹಸನ್

ವರದಿಗಾರ:ಸೂಪರ್ ಸ್ಟಾರ್ ಕಮಲ್ ಹಸನ್ ರವರ 1994ರ ಮಹಾನದಿ ರೋಚಕ ಚಿತ್ರದ ಚಿತ್ರಕಥೆ ಬರೆಯೋದಕ್ಕೆ ತನ್ನ ಮಗಳ ಅಪಹರಣ ಯತ್ನ ಪ್ರೇರಣೆಯಾಗಿದ್ದು, ಅದೊಂದು ಭಯಾನಕ ಘಟನೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಕಮಲ್‌ ಹಸನ್ ಕೇವಲ ನಟಿಸಿರುವುದು ಮಾತ್ರವಲ್ಲ, ಕಥೆ ಕೂಡಾ ಅವರೇ ಸ್ವತಹಃ ಬರೆದಿದ್ದರಂತೆ. ನೈಜ ಘಟನೆಯಿಂದ ಪ್ರೇರಿತಗೊಂಡು ಇದನ್ನು ಬರೆಯಲಾಗಿತ್ತು ಎಂದಿದ್ದಾರೆ. ಇದನ್ನು ಬರೆಯಲು ಕಾರಣ ಏನೆಂಬುವುದನ್ನು ಕಮಲ್‌ ಹಸನ್ ಇದುವರೆಗೂ ಹೇಳಿಕೊಂಡಿರಲಿಲ್ಲ.

ಮನೆಗೆಲಸದ ಮಹಿಳೆಯ ನೆರವಿನಿಂದ ಹಣಕ್ಕಾಗಿ ಈ ರೀತಿ ಮಾಡಲು ಪ್ಲಾನ್ ನಡೆದಿತ್ತು. ಅಷ್ಟರಲ್ಲಾಗಲೇ ನನಗೆ ವಿಷಯ ಗೊತ್ತಾಗಿ ಅಲರ್ಟ್ ಆದೇ ಎಂದು ಸಂದರ್ಶನವೊಂದರಲ್ಲಿ ಕಮಲ್ ಹಸನ್ ಹೇಳಿದ್ದಾರೆ. ಅದು ಕೂಡಾ ತನ್ನ ಮಗಳನ್ನು ಹಣಕ್ಕಾಗಿ ಅಪಹರಿಸುವಂತೆ ಯಾರೋ ಪಿತೂರಿ ಹೂಡಿದ್ದರು. ಈ ವಿಷಯ ಹೇಗೋ ನನಗೆ ತಿಳಿದುಹೋಯಿತು. ಕೋಪದಲ್ಲಿದ್ದ ನಾನು ನನ್ನ ಮಗುವಿನ ರಕ್ಷಣೆಗಾಗಿ ಆ ಸಂದರ್ಭ ಏನೂ ಬೇಕಾದರೂ ಮಾಡಲೂ ತಯಾರಿದ್ದೆ. ಈ ಘಟನೆಯೇ ‘ಮಹಾನದಿ’ ಸಿನಿಮಾ ಮಾಡಲು ಪ್ರೇರಣೆಯಾಗಿದ್ದು ಎಂದು ಹೇಳಿಕೊಂಡಿದ್ದಾರೆ.ಮಹಾನದಿ ರೋಚಕ ಸಿನಿಮಾದಲ್ಲಿ ಮಕ್ಕಳನ್ನು ಅಪಹರಿಸಿ ಅವರನ್ನು ಮಾರಾಟ ಮಾಡಿ ಸೆಕ್ಸ್‌ ವರ್ಕರ್‌ಗಳಾಗಿ ಮಾಡಲಾಗುವ ಪಾತ್ರವಿದೆ. ಇದು ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯಲು ಪ್ರಮುಖ ಪಾತ್ರವಾಗಿತ್ತು.

ಈ ಮಹಾನದಿ ಸಿನಿಮಾ ರಾಷ್ಟ್ರಪ್ರಶಸ್ತಿಯೂ ಒದಗಿ ಬಂದಿತ್ತು. ಹಾಗಾಗಿ ಈ ಸಿನಿಮಾ ಕಮಲ್‌ ಜೀವನದಲ್ಲಿ ಮಹತ್ವದ್ದಾಗಿದೆ ಎಂದು ಕಮಲ್ ಹಸನ್ ಹೇಳಿಕೊಂಡಿದ್ದಾರೆ.
ಅಪಹರಣ ಯತ್ನ ಅಕ್ಷರ ಹಸನ್ ಮೇಲೆ ಅಥವಾ ಶೃತಿ ಹಸನ್ ಮೇಲೆ ನಡೆದಿತ್ತಾ ಎಂಬುವುದನ್ನು ಕಮಲ್ ಹಸನ್ ಇನ್ನೂ ಬಹಿರಂಗ ಪಡಿಸಿಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group