ವರದಿಗಾರ : ಉತ್ತರ ಪ್ರದೇಶದ ಭಡೋಯಿ ಜಿಲ್ಲೆಯಲ್ಲಿ ಅಕ್ಟೋಬರ್ 26ರಂದು ಸ್ವಾಮೀ ವಿವೇಕಾನಂದರ ವಿಗ್ರಹವೊಂದನ್ನು ವಿರೂಪಗೊಳಿಸಲಾಗಿತ್ತು. ಖಂಡನೀಯ ಕೃತ್ಯವು ಬೆಳಕಿಗೆ ಬರಲಾರಂಭಿಸಿದಾಗಲೇ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರನ್ನು ಅರೋಪಿಸುತ್ತಾ ಕೆಲವು ಮತಾಂಧರು ಕೋಮು ವಿಧ್ವೇಷ ಹರಡಲು ತಮ್ಮಿಂದಾಗುವ ಪ್ರಯತ್ನ ನಡೆಸಿದರು.
ಭಡೋಯಿಯ ಹೆಚ್ಚುವರಿ ಎಸ್ಪಿ ಸಂಜಯ್ ಕುಮಾರ್ ಅವರು ಮುಸ್ಲಿಮರ ಮೇಲಿರುವ ಅರೋಪವನ್ನು ಅಲ್ಲಗಳೆದರು. ಮಾನಸಿಕ ಅಸ್ವಸ್ಥನೊಬ್ಬನು ವಿಗ್ರಹವನ್ನು ವಿರೂಪಗೊಳಿಸಿದ್ದಾನೆ ಎಂದು ಅವರು ತಿಳಿಸಿದರು.
ಕೋತ್ವಾಲಿಯ ಪೊಲೀಸರು ಪ್ರೇಮಚಂದ್ರ ಗೌತಮ್ ಎಂಬ ಮಾನಸಿಕವಾಗಿ ಅಸ್ವಸ್ಥನಾಗಿರುವ ವ್ಯಕ್ತಿಯೋರ್ವನನ್ನು ವಿಗ್ರಹ ವಿರೂಪಗೊಳಿಸಿದ ಅರೋಪದಲ್ಲಿ ಬಂದಿಸಿದ್ದಾರೆ ಎಂದು ಭಡೋಯಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಆದರೆ ಹಲವಾರು ಮತಾಂಧರು ಆಗಾಗಲೇ ಮುಸ್ಲಿಮರ ಮೇಲೆ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವ ಮೂಲಕ ತಮ್ಮ ಮಾನಸಿಕ ಅಸ್ವಸ್ಥತೆಯನ್ನೂ ಪ್ರದರ್ಶಿಸಿದರು.
‘ಶಂಖನಾಡ್’ ಎಂಬ ಟ್ವಿಟ್ಟರ್ ಖಾತೆಯೊಂದು ವಿಗ್ರಹ ವಿರೂಪಗೊಳಿಸಿದ ಪ್ರಕರಣದಲ್ಲಿ ಮುಸ್ಲಿಮರನ್ನು ಆರೋಪಿಸಿ ಮಾಡಿದ ಟ್ವೀಟ್ ಈಗಾಗಲೇ 2600 ಬಾರಿ ‘ರಿಟ್ವೀಟ್’ ಮಾಡಲಾಗಿದೆ. ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಯ ಪರಿಣಾಮ ಸಣ್ಣ ಮಟ್ಟದ್ದಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಹಲವಾರು ಬಲಪಂಥೀಯ ವೆಬ್ ಸೈಟ್ ಗಳು ಈ ವದಂತಿಯನ್ನು ‘ಸುದ್ದಿ’ಯಾಗಿ ಪಕಟಿಸಿದವು.
ಸಾಮಾಜಿಕ ಜಾಲತಾಣದಲ್ಲಿರುವ ಮಾನಸಿಕ ಅಸ್ವಸ್ಥರ ವಿಫಲ ಪ್ರಯತ್ನ ಇಲ್ಲಿದೆ:
BREAKING: Statue of Swami #Vivekananda “beheaded” / destroyed allegedly by #Muslims in Bhadohi, UP.
Is India Saudi Arabia ? Media silent. pic.twitter.com/ZnRC8X7q0O— ShankhNaad (@ShankhNaad) October 28, 2017
