ರಾಷ್ಟ್ರೀಯ ಸುದ್ದಿ

ನಕಲಿ ಲವ್ ಜಿಹಾದ್ ಪ್ರಕರಣ ; ಹಾದಿಯಾರ ಹೇಳಿಕೆ ‘ಮಹತ್ವ’ದ್ದು : ಸುಪ್ರೀಂ ಕೋರ್ಟ್

► NIA ಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್ !!

► ನವೆಂಬರ್ 27ಕ್ಕೆ ಮುಕ್ತ ನ್ಯಾಯಾಲಯದಲ್ಲಿ ಡಾ. ಹಾದಿಯಾರಿಂದ ಹೇಳಿಕೆ ದಾಖಲು

ವರದಿಗಾರ : ‘ಲವ್ ಜಿಹಾದ್’ ಷಡ್ಯಂತರವನ್ನು ಬಳಸಿಕೊಂಡು ಕೇರಳದ ಹೈಕೋರ್ಟ್ ರದ್ದುಗೊಳಿಸಿರುವ ತನ್ನ ಮದುವೆಯ ಕುರಿತು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿರುವ ಡಾ ಹಾದಿಯಾರ ಪತಿ ಶೆಫೀನ್ ಜಹಾನ್’ರವರ  ಅರ್ಜಿಯನ್ನು ಇಂದು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಈ ಪ್ರಕರಣದಲ್ಲಿ ಯಾವುದೇ ತನಿಖೆಯ ಅಗತ್ಯವಿಲ್ಲ. ಮಾತ್ರವಲ್ಲ ಡಾ. ಹಾದಿಯಾ ಓರ್ವ ಪ್ರೌಢ ಮಹಿಳೆಯಾಗಿರುವುದರಿಂದ ಆಕೆಯ ಹೇಳಿಕೆಗಳು’ಮಹತ್ವ’ವುಳ್ಳದ್ದಾಗಿದೆ. ಅದನ್ನು ಪರಿಗಣಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನವೆಂಬರ್ 27 ಕ್ಕೆ ಡಾ ಹಾದಿಯಾರನ್ನು ಸುಪ್ರೀಂ ಕೋರ್ಟಿಗೆ ಹಾಜರುಪಡಿಸುವಂತೆಯೂ ಆದೇಶಿಸಿದೆ.

ಡಾ. ಹಾದಿಯ ಯಾಕೆ ಮತ್ತು ಹೇಗೆ ಓರ್ವ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂಬುವುದನ್ನು ಅವರ ಬಾಯಿಯಿಂದಲೇ ಕೇಳಬೇಕಾಗಿದೆ. ಅವರ ಹೇಳಿಕೆಗಳನ್ನು ನವೆಂಬರ್ 27 ರಂದು ತೆರೆದ ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕರೂ ಈ ವೇಳೆ ಹಾಜರಿರಬಹುದಾಗಿದೆ.  ಇದೇ ವೇಳೆ ಇಡೀ ಪ್ರಕರಣದಲ್ಲಿ ಸಂಶಯಾಸ್ಪದವಾಗಿ ಯಾರದೋ ಮಾರ್ಗದರ್ಶನದ ಪ್ರಕಾರ  ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬರುತ್ತಿರುವ  NIA ಗೆ ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್, ಯಾವುದೇ ಕಾನೂನುಗಳು ಓರ್ವ ಕ್ರಿಮಿನಲ್ ವ್ಯಕ್ತಿಯನ್ನೂ ಪ್ರೀತಿಸುವುದನ್ನು  ತಡೆಯುವುದಿಲ್ಲವೆಂದು ಹೇಳಿದೆ. ಹಾಗೊಂದು ವೇಳೆ ರಾಷ್ಟ್ರೀಯ ಭದ್ರತೆಯ ಸಮಸ್ಯೆಗಳಿರುವುದಾದರೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೇ ವಿನಹ ,  ಆ ಹೆಸರಿನಲ್ಲಿ ವೈಯುಕ್ತಿಕ ಹಕ್ಕುಗಳನ್ನು ಹತ್ತಿಕ್ಕಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ

ಡಾ. ಹಾದಿಯಾರ ಮದುವೆ ‘ಲವ್ ಜಿಹಾದ್’ ಆಗಿದೆ ಎಂಬ ಅವರ ತಂದೆ ಅಶೋಕನ್ ಅರ್ಜಿ ಸಲ್ಲಿಸಿದ್ದರು. ಅಶೋಕನ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದ ಕೇರಳ ಸರಕಾರ ಪ್ರಾಸಿಕ್ಯೂಶನ್ ಕೂಡಾ ಹೈಕೋರ್ಟಿನಲ್ಲಿ ‘ಇದರಲ್ಲೇನೋ ಷಡ್ಯಂತರವಿದೆ’ ಎಂಬ ಅಫಿಡವಿಟ್ ಸಲ್ಲಿಸಿತ್ತು.

ಅಶೋಕನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಅವರ ಮದುವೆಯನ್ನು ರದ್ದುಗೊಳಿಸಿತ್ತು ಮತ್ತು ಹೆಚ್ಚಿನ ತನಿಖೆಗಾಗಿ ಸುಪ್ರೀಂ ಕೋರ್ಟ್’ಗೆ ಪ್ರಕರಣವನ್ನು ವರ್ಗಾಯಿಸಿತ್ತು. ಒಂದು ಹಂತದಲ್ಲಿ ಸುಪ್ರೀಂ ಕೋರ್ಟ್ ಅದನ್ನು ಎನ್ ಐ ಎ ತನಿಖೆ ನಡೆಸುವಂತೆ ಆದೇಶಿಸಿತ್ತು. ಆದರೆ ನಂತರ ಇದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ , ಡಾ. ಹಾದಿಯಾಗೆ ತನ್ನ ಇಷ್ಟದಂತೆ ಇರುವ ಅಧಿಕಾರವಿದೆ ಎಂದು ತೀರ್ಪು ನೀಡಿತ್ತು.

ಲವ್ ಜಿಹಾದ್ ಅಸ್ತಿತ್ವದಲ್ಲಿ ಇದ್ದರೂ ಇರದೇ ಇದ್ದರೂ, ಪ್ರೌಢ ವ್ಯಕ್ತಿಗಳಿಬ್ಬರ ಮದುವೆಯನ್ನು ಹೈಕೋರ್ಟ್ ಅದು ಹೇಗೆ ತಾನೆ ರದ್ದುಗೊಳಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.  ಕೊನೆಗೂ ಡಾ ಹಾದಿಯಾ ಎಲ್ಲಾ ಷಡ್ಯಂತರಗಳನ್ನು ಮೆಟ್ಟಿ ನಿಂತು,  ತಾನು ಇಷ್ಟಪಟ್ಟು ಮದುವೆಯಾದ ವ್ಯಕ್ತಿಯೊಂದಿಗೆ ಜೀವನ ಸಾಗಿಸುವ ಆಸೆಗಳು ಗರಿಗೆದರಿದಂತಾಗಿದೆ.

ಇದೇ ವೇಳೆ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಹಲವರು ತಮ್ಮ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟೇ ಹೇಳಿರುವ ಪ್ರಕಾರ ಡಾ ಹಾದಿಯಾರ ವೈಯುಕ್ತಿಕ ಹಕ್ಕುಗಳು ಹತ್ತಿಕ್ಕಲ್ಪಟ್ಟಿದ್ದರೆ ಆಕೆ ಯಾಕೆ ಇನ್ನೂ ಒಂದು ತಿಂಗಳು ತಂದೆಯ ಕಪಿಮುಷ್ಟಿಯ ಗೃಹಬಂಧನದಲ್ಲಿರಬೇಕೆಂದು ಹಲವರು ಪ್ರಶ್ನಿಸಿದ್ದಾರೆ

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group