ವರದಿಗಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಾಗಲೆಲ್ಲಾ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಿರುವುದು ಯಾಕೆಂದರೆ ಅವರಿಗೆ ನನ್ನನ್ನು ಕಂಡರೆ ಭಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹೀಗೆಂದು ಅವರು ಮೈಸೂರಿನಲ್ಲಿ ಹೇಳಿಕೊಂಡಿದ್ದಾರೆ.
ಎಲ್ಲರೂ ನನ್ನನ್ನು ಕಂಡ್ರೆ ತೊಡೆ ತಟ್ಟುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು ಒಂದು ವೇಳೆ ನಾನು ‘ವೀಕ್’ ಆಗಿರುತ್ತಿದ್ದರೆ ಅವರೆಲ್ಲಾ ನನ್ನ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗರಿಗೆ ನನ್ನನ್ನು ಕಂಡರೆ ಭಯವಾಗುತ್ತದೆ. ಅವರಿಗೆ ಕಾಂಗ್ರೆಸ್ ಆಡಳಿತವನ್ನು ಸಹಿಸಲು ಆಗುತ್ತಿಲ್ಲ ಎಂದಿದ್ದಾರೆ.
ಬಿಜೆಪಿಗರು ಕೊಳಕು ಮನಸ್ಸಿನವರು. ಅವರಷ್ಟು ಕೆಟ್ಟ ರಾಜಕಾರಣ ಮಾಡುವವರು ಎಲ್ಲೂ ಇಲ್ಲ ಎಂದು ಬಿಜೆಪಿಗೆ ಚಾಟಿ ಬೀಸಿದ್ದಾರೆ.
