ವರದಿಗಾರ-ಬೆಳಗಾವಿ: ದೇಶದ ವಿವಿಧೆಡೆ ಸೈನಿಕರಿಗೆ ತರಬೇತಿ ನೀಡುವ ಕೇಂದ್ರಗಳಲ್ಲಿರುವ ಗೋಶಾಲೆಗಳನ್ನು ಮುಚ್ಚುಬೇಕೆಂಬ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಶ್ರೀರಾಮಸೇನೆ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಆದೇಶ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಿ ಹಾಗೂ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಸಂಘಟನೆಯ ಪ್ರಮೋದ್ ಮುತಾಲಿಕ್, ಮತ್ತಿತರು ಉಪಸ್ಥಿತರಿದ್ದರು.
