ರಾಷ್ಟ್ರೀಯ ಸುದ್ದಿ

ದನದ ಹೆಸರಿನಿಂದ ದೇಶದ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಲಿದೆ: ಕಾಂಗ್ರೆಸ್ ನಾಯಕ

ವರದಿಗಾರ: ದನಗಳ ಹೆಸರಿನಿಂದ ದೇಶದ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವರಾದ ಮನೀಷ್ ತಿವಾರಿ ಗೋರಕ್ಷಕರ ಬಗ್ಗೆ ಪ್ರಧಾನ ಮಂತ್ರಿ ಮೋದಿ ಧೋರಣೆಯನ್ನು ಕಟುವಾಗಿ ಟೀಕಿಸುತ್ತಾ, ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಮೊಹಾಲಿಯ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ನಡೆದ ಯುವ ಚಿಂತಕರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

ಮೋದಿ ದೇಶವನ್ನು ಆರ್ಥಿವಾಗಿ ನಾಲ್ಕು ದಶಕಗಳಷ್ಟು ಹಿಂದಕ್ಕೆ ಸಾಗಿಸಿದ್ದಾರೆ. ಗೋರಕ್ಷಣೆ, ಲವ್ ಜಿಹಾದ್, ಘರ್ ವಾಪಸಿ ಎಂಬುವುದೆಲ್ಲವೂ ಬಹುಸಂಖ್ಯಾತ ಸಿದ್ಧಾಂತವನ್ನು ಸ್ಥಾಪಿಸಲು ಮುಂದಾಗಿರುವ ಆರೆಸ್ಸೆಸ್ ನ ಕಾರ್ಯಸೂಚಿಯಾಗಿದೆ ಎಂದು ಅವರು ಹೇಳಿದ್ದಾರೆ.

ಮೋದಿ ಮಾಧ್ಯಮ  ರಂಗವನ್ನು ವಿಭಜಿಸಿದ್ದಾರೆ. ಇದು ದೇಶದ ಸಂಸ್ಕೃತಿಯಲ್ಲ. ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದ್ದು, ವಿಚಾರವಾದಿಗಳ ಹಾಗೂ ಪತ್ರಕರ್ತರ ಹತ್ಯೆಯ ಪ್ರಕರಣಗಳ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾ, ಸದ್ಯ ಪತ್ರಿಕೋದ್ಯವು ವ್ಯಾಪಾರವಾಗಿದೆ. ಪತ್ರಕರ್ತರನ್ನು ಸಶಕ್ತಗೊಳಿಸಲು ದೇಶವು ವಿಫಲತೆಯನ್ನು ಕಂಡಿದೆ ಎಂದಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group