ಸುತ್ತ-ಮುತ್ತ

ಟಿಪ್ಪು ಸುಲ್ತಾನ್ ವಿರೋಧಿಗಳನ್ನು ಅಭಿನಂದಿಸೋಣ : ಜುಮಾ ಭಾಷಣದಲ್ಲಿ ಅಝೀಝ್ ದಾರಿಮಿ

►ವಜ್ರ ಮಹೋತ್ಸದಲ್ಲಿ ಟಿಪ್ಪು ಸುಲ್ತಾನರ ಪ್ರಶಂಸೆ ಮಾಡಿ ರಾಜ್ಯ ಮತ್ತು ದೇಶದ ಹಿರಿಮೆ ಎತ್ತಿ ಹಿಡಿದ ರಾಷ್ಟ್ರಪತಿಗಳು

►ವೇದಕಾಲದ ವೈಮಾನಿಕ ಶಾಸ್ತ್ರ ದ  ಬಗ್ಗೆ ಮಾತಾಡುವ ಮಂದಿ ಟಿಪ್ಪು ಸುಲ್ತಾನರ ರಾಕೆಟ್ ಬಗ್ಗೆ ಅನುಮಾನಿಸುವುದು ಅಜ್ಞಾನದ ಪರಮಾವಧಿಯಾಗಿದೆ.

 

ಕುರಾನ್ ಹೇಳುತ್ತದೆ, “ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಪರಮ ದಯಾಮಯನು ಖಂಡಿತವಾಗಿಯೂ ಪ್ರೀತಿ ಸಿಗುವಂತೆ ಮಾಡುವನು.

ಪ್ರವಾದಿ  ಸ ರವರು ಹೇಳುತ್ತಾರೆ, “ಅಲ್ಲಾಹನು ಒಬ್ಬನನ್ನು ಪ್ರೀತಿಸಿದರೆ ಜಿಬ್ರೀಲನ್ನು ಕರೆದು ಆತನನ್ನು ಪ್ರೀತಿಸಲು ಹೇಳುತ್ತಾನೆ.ನಂತರ ಜಿಬ್ರೀಲ್ ಆಕಾರದಲ್ಲಿರುವ ಮಲಕ್ಕುಗಳಿಗೂ ಹೇಳುತ್ತಾರೆ, ಅಲ್ಲಾಹನು ಆ ವ್ಯಕ್ತಿ ಯನ್ನು ಪ್ರೀತಿಸುತ್ತಾನೆ ನೀವು ಪ್ರೀತಿಸಿ ಎಂದು. ಹಾಗೇ ಆಕಾಶದಲ್ಲಿರುವ ಎಲ್ಲರೂ ಪ್ರೀತಿಸುತ್ತಾರೆ.ಆನಂತರ ಭೂಮಿಯಲ್ಲಿ ಆತನಿಗೆ ಅಂಗೀಕಾರ ಸಿಗುತ್ತದೆ. ಇದು ಅಲ್ಲಾಹನ ಇಚ್ಚೆಯಾಗಿರುತ್ತದೆ.

 

ದೇಶ ಕಂಡ ಅಪ್ರತಿಮ ಹೋರಾಟಗಾರ ಹಝ್ರತ್ ಟಿಪು ಸುಲ್ತಾನರ ಬಗ್ಗೆ ಹೇಳುವುದಾದರೆ ಅವರದೊಂದು “ಮಿರಾಕಲ್”ಅಸಾಮಾನ್ಯ ವ್ಯಕ್ತಿತ್ವ.

ಧಾರ್ಮಿಕ,ರಾಜಕೀಯ ,ಸಾಮಾಜಿಕ,ಸಾಂಸ್ಕೃತಿಕ ಎಲ್ಲಾ ಸ್ತರಗಳಲ್ಲಿ ವಿಜೃಂಭಿಸಿದ ರಾಜ. ಮತ ಸಹಿಷ್ಣುತೆ ಗೆ ಅಪಾರ ಕೊಡುಗೆ ಕೊಟ್ಟ ಸುಲ್ತಾನ. ಸಾಮಾಜಿಕ ಅನಿಷ್ಟಗಳ ಮೂಲೋತ್ಪಾಟನೆ ಮಾಡಿದ ದೊರೆ. ಹಸಿರು ಕ್ರಾಂತಿಯ ಹರಿಕಾರ,ಕ್ಷಿಪಣಿಯ ಜನಕ,ಅರಸೊತ್ತಿಗೆಯಲ್ಲಿ ಪ್ರಜಾಸತ್ತೆ ಯನ್ನು ಅರಳಿಸಿದ ಮಹಾರಾಜ. ಪಾನ,ಜೂಜು,ವೇಶ್ಯಾವಾಟಿಕೆ ಮುಕ್ತ ಸಂಸ್ಥಾನದ ಪ್ರಭು.ಕಾಲಕಾಲದಲ್ಲಿ ಭೂಮಿಯ ಒಡೆತನ ಸಿಗದ ದಲಿತರಿಗೆ ಭೂಮಿಯನ್ನು ಕೊಟ್ಟ ಅಧಿಪತಿ. ಕೆಲವರ್ಗದ ಮಹಿಳೆಯರು ಆಭರಣ ಧರಿಸಲು,ಎದೆಮುಚ್ಚಲು,ಮೊಲೆ ಉಣಿಸಲು ,ಸೊಂಟದಲ್ಲಿ ಬಿಂದಿಗೆ ಇಡಲು ಪಾವತಿಸುತ್ತಿದ್ದ ತೆರಿಗೆಯನ್ನು ರದ್ದು ಮಾಡಿ ಅವರಿಗೆ ಮಾನ ಮುಚ್ಚಲು ಅನುವು ಮಾಡಿಕೊಟ್ಟ ಜನಸ್ನೇಹಿ.

ಅತೀ ಹೆಚ್ಚು ಬ್ರಿಟೀಷರನ್ನು ಕೊಂದ ವೀರ,ಅತೀ ಹೆಚ್ಚು ಹಿಂದು ಸೈನಿಕರನ್ನು ಮತ್ತು ಹಿಂದು ಸೇನಾ ನಾಯಕರನ್ನು ಹೊಂದಿದ ಏಕೈಕ ಮುಸ್ಲಿಂ ಅರಸ.ಟಿಪು ಸುಲ್ತಾನರು ಜಗತ್ತಿಗೇ ಮಾನವ ಸೌಹಾರ್ದ ತೆ ಮತ್ತು ಪರಮತ ಸಹಿಷ್ಣುತೆಯ ರಾಯಭಾರಿಯಾಗಿದ್ದರು.ಅವರ

ಧರ್ಮ ಮತ್ತು ವ್ಯಕ್ತಿತ್ವದ ಮಧ್ಯೆ ಅಡ್ಡ ಗೋಡೆ ಕಟ್ಟಲು ಯಾವ ಸಂಪಾದನೆ ಬರಹಗಾರರಿಗೂ ಸಾದ್ಯವಿಲ್ಲ.

ಮರಾಠರಿಂದ  ಶೃಂಗೇರಿ ಹಿಂದು ದೇವಾಲಯವನ್ನು ಕಾಪಾಡಿದ ಮತ್ತು ಪೀಠವನ್ನು ಪುನಃಸ್ಥಾಪನೆ ಮಾಡಿದ ದಾಖಲೆಗಳು ಮೈಸೂರಿನ ಪುರಾ ವಸ್ತು ನಿರ್ದೇಶಕರಾದ ರಾವ್ ಬಹಾದ್ದೂರ್ ಪ್ರಸ್ತುತ ಪಡಿಸಿದ್ದಾರೆ.156 ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ನೀಡಿದರೆ ಅನೇಕ ದೇವಸ್ಥಾನಗಳಿಗೆ ಸಾವಿರಾರು ಹೆಕ್ಟೇರ್ ಭೂಮಿಯನ್ನು ಅವರು ಮಂಜೂರು ಮಾಡಿದ್ದರು. ಶತ್ರು ಸೇನೆಯ ಮಹಿಳೆಯರನ್ನು ಹಿಂಸಿಸಿದ್ದಕ್ಕೆ ತನ್ನ ತಂದೆಯ ಸೇನಾ ಮುಖ್ಯಸ್ಥ ಮಕ್ಬೂಲ್ ಅಹ್ಮದ್ ನಿಗೆ  ಶಿಕ್ಷೆಯನ್ನೂ ಕೊಟ್ಟಿದ್ದರು.ಕೊಲ್ಲೂರು ದೇವಸ್ಥಾನದಲ್ಲಿ ಇಂದಿಗೂ ಬೆಳಗ್ಗೆ  ಸಲಾಂ ಮಂಗಲಾರತಿ ನಡೆಯುತ್ತಿದ್ದರೆ ಅದು ಟಿಪ್ಪು ಸುಲ್ತಾನರ ಒಳಿತಿನ ಸ್ಮರಣೆಯೇ ಆಗಿದೆ. ಕುಣಿಗಲ್ ನಲ್ಲಿ ಕೃಷಿ ಸಸ್ಯ ಪ್ರಯೋಗ ಶಾಲೆ, ಗುಬ್ಬಿ ಹರಿಹರದಲ್ಲಿ ವಾಣಿಜ್ಯ ಕೇಂದ್ರ ವನ್ನು ಟಿಪ್ಪು ನಿರ್ಮಿಸಿದರು. 1794 ರಲ್ಲಿ ಕನ್ನಂಬಾಡಿ ಅಣೆಕಟ್ಟು ಗೆ ಮಾಡಿದ ಶಂಕುಸ್ಥಾಪನೆ ಯ ಕಲ್ಲು ವಿಶ್ವೇಶರಯ್ಯ ರ ನೇತ್ರತ್ವದಲ್ಲಿ ಅಗೆದಾಗ ಕಾಣಸಿಕ್ಕಿತ್ತು. ಇದು ಜನಸೇವೆಗೆ ಸಮರ್ಪಿತವೆಂದು ಆ ಶಾಸನದಲ್ಲಿ ಬರೆಯಲಾಗಿತ್ತು.

39೦೦೦ ಕೆರೆಗಳನ್ನು ತೋಡಿದ ರಾಜ ಬೇರೆ ಇಲ್ಲ. ರೇಷ್ಮೆಯ ಉತ್ತಮ ತಳಿ ಸಂವರ್ಧನಾ ಘಟಕವನ್ನುಅವರು ಸ್ಥಾಪಿಸಿದ್ದರು.ಅಂದು ರೈತರಿಗೆ ಬಡ್ಡಿ ರಹಿತ ಸಾಲವನ್ನು ಮಂಜೂರು ಮಾಡಲಾಗಿತ್ತು.ನಲುವತ್ತು ಸಾವಿರ ಚದರ ವಿಸ್ತೀರ್ಣ ರಾಜ್ಯವನ್ನು ಎಂಬತ್ತು ಸಾವಿರ ಮೈಲಾಗಿ ವಿಸ್ತರಿಸಿದ ಕೀರ್ತಿ ಸುಲ್ತಾನರಿಗೆ ಸಲ್ಲುತ್ತದೆ.ಉತ್ತರಕ್ಕೆ ತುಂಗಭದ್ರಾ,  ದಕ್ಷಿಣದಲ್ಲಿ ಮಲಬಾರ್,ಪೂರ್ವ ತಮಿಳುನಾಡು,ಪಶ್ಚಿಮ ಹೊನ್ನಾವರ ತನಕ ವಿಸ್ತಾರವಾದ ಸಂಸ್ಥಾನ. ಸಮರ ಭೂಮಿಯಲ್ಲಿ ತನ್ನ ಎರಡು ಮಕ್ಕಳನ್ನೇ ಒತ್ತೆ ಇಟ್ಟ ರಾಜ! ಇದನ್ನು ಸಹಿಸದ ಹಿಂದು ಬಾಂಧವರು ಮೂರು ಕೋಟಿ  ಸೊತ್ತು ಒಡವೆಯನ್ನು ಸುಲ್ತಾನರಿಗೆ ಅರ್ಪಿಸಲು ಮುಂದಾಗುತ್ತಾರೆ.ಆಗ ನಿಮ್ಮ ಸೊತ್ತುಗಳನ್ನು ಒಪ್ಪಿಸುವುದಕ್ಕಿಂತ ನನ್ನ ಮಕ್ಕಳನ್ನೇ ಒಪ್ಪಿಸುತ್ತೇನೆ ಎಂದು ಹೇಳಿ ಅವರ ಬೇಡಿಕೆಯನ್ನು  ತಿರಸ್ಕರಿಸುತ್ತಾರೆ.  ಹೈದರಲಿ  ಮತ್ತು ಟಿಪ್ಪುಸುಲ್ತಾನರ ಹೋರಾಟದ ಫಲವಾಗಿ ನಲುವತ್ತು ವರ್ಷ ಕಾಲ ಬೀಟಿಷರಿಗೆ ದಕ್ಷಿಣ ಭಾರತ ಪ್ರವೇಶಿಸಲು ಸಾಧ್ಯವಾಗಲಿಲ್ಲ. 1799 ರಲ್ಲಿ ನಿಜಾಮ ಮತ್ತು ಮರಾಠರು ಬ್ರಿಟಿಷರೊಂದಿಗೆ ಕೈಜೋಡಿಸದಿದ್ದರೆ ಬ್ರಿಟೀಷರು ದೇಶದಿಂದ ಅವತ್ತೇ ಓಡಿಹೋಗುತ್ತಿದ್ದರು.ಕೊನೆಯ ಯುದ್ಧದಲ್ಲಿ ಮಡಿದವರ ಸಂಖ್ಯೆ ಹಿಂದು ಮುಸಲ್ಮಾನರೂ ಸೇರಿ ಹನ್ನೆರಡು ಸಾವಿರಕ್ಕಿಂತಲೂ ಅಧಿಕ.

ಸಿರಾಜುದ್ದವುಲಾರಿಂದ ಬಂಗಾಳವನ್ನು ವಶಪಡಿಸಿಕೊಂಡ ಬ್ರಿಟಿಷರು ಟಿಪ್ಪು ಹುತಾತ್ಮರಾಗುವುದರೊಂದಿಗೆ ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡನ್ನು ಕೈವಶ ಮಾಡಿಕೊಂಡರು. ನಂತರ ಒರಿಸ್ಸಾ ಬಿಹಾರವನ್ನೂ ಆಮೇಲೆ ಗುಜರಾತ್,ಮಾಹಾರಷ್ಟ,

ಪಂಜಾಬನ್ನೂ ವಶಪಡಿಸಿಕೊಂಡರು.ಮರಾಠ, ನಿಜಾಮರು ಬ್ರಿಟಿಷರೊಂದಿಗೆ ಕೈ ಜೋಡಿಸಿದರೂ ಅವರಿಗೆ ಹೆಚ್ಚು ಕಾಲ ಬಾಳಲಾಗಲಿಲ್ಲ.

ಆದರೆ ಟಿಪ್ಪುವಿನೊಂದಿಗೆ ಬಿಟಿಷರು ತೋರಿದ ಕ್ರೌರ್ಯ ದಬ್ಬಾಳಿಕೆ ಗಿಂತ ದೊಡ್ಡ ಪ್ರಮಾಣದ, ಕ್ರೌರ್ಯವನ್ನು ಇತಿಹಾಸದ ಹೆಸರಲ್ಲಿ  ಅಲನ್ ಮಚಾದೋ,ಬೀಟ್ಸನ್,ಮಾರ್ಕ್ಸ್ ಮಿಲ್ಕ್,ಬೌರಿಂಗ್ ಮತ್ತು ಈಗಿನ ಮತಾಂಧ ಬರಹಗಾರರು ತೋರಿದ್ದಾರೆ.ಆ ಮಧ್ಯೆ ಸ್ಯಾಂಡ್ಬರ್ಗ್,ತಿರುಮಲ ತಾತಚಾರ್ಯ,ಹಯವದನ ರಾಯರು,ಸಾಕೇತ್ ರಾಜನ್,ಡಾ,ಷೇಕ್ಅಲಿ,ಮುಂತಾದವರು ಬರಹದೊಂದಿಗೆ ಪ್ರಾಮಾಣಿಕತೆ ಮೆರೆದಿದ್ದಾರೆ.

ಹಿಂದು ಮಹಾಸಭಾದ ಭಗವಾನ್ ಗಿದ್ವಾಯಿ ಟಿಪ್ಪು ಬಗ್ಗೆ ಕ್ರೌರ್ಯವನ್ನು ಹುಡುಕಿ  ಬರೆಯಲು ಸಲುವಾಗಿ ಲಂಡನಿನ ಪ್ರಾಚ್ಯವಸ್ತುಗಳ ಮಧ್ಯೆ ತಡಕಾಡಿದರೂ ಕಡೆಗೆ ಬರೆದ ಕೃತಿ ದಿ ಸೋರ್ಡ್ ಅಪ್ ಟಿಪ್ಪು ಸುಲ್ತಾನ್ ಆಗಿತ್ತು.ಗಣರಾಜ್ಯೋತ್ಸವ ಪೆರೇಡ್ ನಲ್ಲಿಯೂ ಟಿಪ್ಪುಸುಲ್ತಾನರ ಟ್ಯಾಬ್ಲೋ ಪ್ರದರ್ಶನ ಗೊಂಡಿತ್ತು ಎನ್ನುವುದು ಉಲ್ಲೇಖನೀಯ.

ಟಿಪ್ಪು ಸುಲ್ತಾನರ ಬಗ್ಗೆ ಬಿಜೆಪಿ ಸರಕಾರವೇ ಪುಸ್ತಕ ಪ್ರಕಟಿಸಿತ್ತು. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಟಿಪ್ಪು ವೈಭವೀಕರಿಸಿ ‘ಟಿಪ್ಪು ಸುಲ್ತಾನ್‌–ಎ ಕ್ರುಸೇಡರ್‌ ಫಾರ್‌ ಚೇಂಜ್‌’ ಎಂಬ ಕೃತಿ ಮುದ್ರಿಸಿ ಪ್ರಕಟಿಸಿದೆ.ಕರ್ನಾಟಕ ಗೆಜೆಟಿಯರ್‌ ಇಲಾಖೆ ಹೊರತಂದಿರುವ ಈ ಪುಸ್ತಕ 2012ರಲ್ಲಿ ಮುದ್ರಣವಾಗಿದೆ. ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರು ಅವರು ‘ಟಿಪ್ಪು ಶ್ರೇಷ್ಠ ಸಮಾಜ ಸುಧಾರಕ, ಮಹಾನ್‌ ಸೇನಾನಿ, ಪ್ರೇರಕ ಶಕ್ತಿ, ರಾಕೆಟ್‌ ತಂತ್ರಜ್ಞಾನ ಕಂಡುಹಿಡಿದವ’ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.₨ 950 ಬೆಲೆಯ ಈ ಪುಸ್ತಕವನ್ನು ಕರ್ನಾಟಕ ಗೆಜೆಟಿಯರ್ ಇಲಾಖೆಯ ಅಂತರ್ಜಾಲ ತಾಣದಲ್ಲಿ (www.gazetteer.kar.nic.in) ಉಚಿತವಾಗಿ ಓದಬಹುದು.

 

ದೇಶದ ಇಬ್ಬರು ರಾಷ್ಟ್ರಪತಿಗಳ  ಮೆಚ್ಚುಗೆ ಯ ಮಾತುಗಳು ಟಿಪ್ಪುಸುಲ್ತಾನರು ಮಹಾನ್ ಹೋರಾಟಗಾರರೆಂದು ಬಣ್ಣಿಸುತ್ತದೆ.ಮಾಜಿ ರಾಷ್ಟ್ರಪತಿ ಕಲಾಮರು ತನ್ನ ಪ್ರಸಿದ್ದ ವಿಂಗ್ಸ್ ಅಪ್ ಫೈಯರ್ ನಲ್ಲಿ ಈ ರೀತಿ ಬರೆದಿದ್ದಾರೆ. “Towards the end of my visit, I went to the Wallops Flight Facility at Wallops Island in East Coast, Virginia.  This place was the base for NASA’s sounding rocket programme.  Here, I saw a painting prominently displayed in the reception lobby.  It depicted a battle scene with a few rockets flying in the background.  A painting with this theme should be the most commonplace thing at a Flight Facility, but the painting caught my eye because the soldiers on the side launching the rockets were not white, but dark-skinned, with the racial features of people found in South Asia.  One day, my curiosity got the better of me, drawing me towards the painting.  It turned out to be Tipu Sultan’s army fighting the British.  The painting depicted a fact forgotten in Tipu’s own country but commemorated here on the other side of the planet.  I was happy to see an Indian glorified by NASA as a hero of warfare rocketry

ಅಮೇರಿಕದ ನಾಸಾ ದ ಸೌಂಡಿಂಗ್ ರಾಕೆಟ್ ಪ್ರೋಗ್ರಾಂ ಸ್ಥಳದಲ್ಲಿ ಬರೆಯಲಾದ ವರ್ಣಚಿತ್ರವು ನನ್ನ ಗಮನ ಸೆಳೆಯಿತು.ರಾಕೆಟ್ ಉಡಾಯಿಸುವ ಸೈನಿಕರು, ಅವರು ಬಿಳಿಯರಲ್ಲ.ಕಂದು ಬಣ್ಣದ ದಕ್ಷಿಣ ಏಷ್ಯಾದವರಾಗಿದ್ದರು.ನನಗೆ ಗೊತ್ತಾಯಿತು ಅದು ಟಿಪ್ಪು ಸುಲ್ತಾನರ ಸೈನಿಕರೆಂದು.ಟಿಪ್ಪುವನ್ನು ಸ್ವಂತ ಊರಿನಲ್ಲಿ ಮರೆತರೂ ಭೂಮಿಯ ಇನ್ನೊಂದು ಕಡೆಯಲ್ಲಿ ನೆನಪಿಸುವಂತಿತ್ತು ಆ ಚಿತ್ರ.ನಾಸಾ ಮೂಲಕ ಔನತ್ಯಕ್ಕೆರಿಸಲ್ಪಟ್ಟ ಕ್ಷಿಪಣಿ ಜನಕನ ಬಗ್ಗೆ ಸಂತೋಷಪಟ್ಟೆ. ವೇದಕಾಲದ ವೈಮಾನಿಕ ಶಾಸ್ತ್ರ ದ  ಬಗ್ಗೆ ಮಾತಾಡುವ ಮಂದಿ ಟಿಪ್ಪು ಸುಲ್ತಾನರ ರಾಕೆಟ್ ಬಗ್ಗೆ ಅನುಮಾನಿಸುವುದು ಅಜ್ಞಾನದ ಪರಮಾವಧಿ ಯಾಗಿದೆ.

ಇದೇ ರೀತಿ ಕರ್ನಾಟಕದ ವಿಧಾನಸಭೆ ಯ ವಜ್ರಮಹೋತ್ಸವದಲ್ಲಿ ಮಾನ್ಯ  ರಾಷ್ಟ್ರಪತಿ ಗಳ ಭಾಷಣವೂ ಕೆಲವರ ಕಣ್ಣನ್ನು ತೆರೆಸುವಂತಿತ್ತು. “Tipu Sultan died a historic death fighting the British. He was also a pioneer in the development and use of Mysore rockets in warfare. The technology was later adopted by Europeans,”

ಟಿಪ್ಪುಬ್ರಿಟಿಷರೊಂದಿಗೆ ಹೋರಾಡುತ್ತಾ ವೀರ ಮರಣಹೊಂದಿದರು.ಅಭಿವೃದ್ಧಿ ಮತ್ತು ರಾಕೆಟ್ ತಂತ್ರಜ್ಞಾನ ಅಳವಡಿಸಿದವರಲ್ಲಿ ಮೊದಲಿಗರಾಗಿದ್ದರು.ಬ್ರಿಟಿಷರು ಆನಂತರ ಅದನ್ನು ಅಳವಡಿಸಿಕೊಂಡಿದ್ದರು.

ಒಟ್ಟಿನಲ್ಲಿ ಟಿಪ್ಪು ಬಗ್ಗೆ ಇರುವ ಎಲ್ಲಾ ಗೊಂದಲಗಳನ್ನು ಕೊನೆಗೊಳಿಸಲು ಬೇಕಾದ ಸಂದೇಶ ರಾಷ್ಟ್ರಪತಿಯವರ ಭಾಷಣದಲ್ಲಿತ್ತು ಆದರೆ ಹಾಗಾಗದ್ದು ದುರಂತ.ಟಿಪ್ಪುವನ್ನು ಮುಸ್ಲಿಮರು ಪ್ರತಿನಿಧಿಯಾಗಿಸುವುದರಲ್ಲಿ ಯಾವ ಅಪರಾಧವೂ ಆಗದು.ಖಲೀಫಾ ಉಮರ್ (ರ) ರವರ ಪರಮತ ಸಹಿಷ್ಣುತೆಯ ಮಾದರಿ ಅವರಲ್ಲಿತ್ತು ಎನ್ನುವುದು ಸತ್ಯ ವಿಚಾರ.

ಒಟ್ಟಿನಲ್ಲಿ ಟಿಪ್ಪೂ ಸುಲ್ತಾನರ ಬಗ್ಗೆ ಆಧಾರ ಸಹಿತವಾಗಿ ಜನರಿಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವಂತೆ ಮಾಡಿದ ಎಲ್ಲಾ ಟಿಪ್ಪು ವಿರೋಧಿಗಳಿಗೆ ಹೃದಯ ತುಂಬಾ ಧನ್ಯವಾದಗಳನ್ನು ಸಮರ್ಪಿಸೋಣ. ವಜ್ರ ಮಹೋತ್ಸವದಲ್ಲಿ ಟಿಪ್ಪು ವಿರೋಧಿಗಳ ಮೇಲೆ ವಜ್ರಾಯುಧ ಚೆನ್ನಾಗಿ ಪ್ರಯೋಗವಾಗಿರುವುದಂತೂ ನಿಜ. ಕೆಲವರ ಟಿಪ್ಪು ವಿರೋಧವು ಆ ವೀರ ಹೋರಾಟಗಾರನ ಅಸಾಮಾನ್ಯ ಸಾಧನೆ,ಪರ ಧರ್ಮ ಸ್ನೇಹ, ಸಹಿಷ್ಣುತೆಯನ್ನು ಜನರಿಗೆ ತಿಳಿಸಿಕೊಟ್ಟಿದೆ. ಅದಕ್ಕಾಗಿ ಅವರನ್ನು ಅಭಿನಂದಿಸೋಣ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group