ವರದಿಗಾರ : ವಂದೇ ಮಾತರಂ ಹಾಡದವರು ದೇಶದ್ರೋಹಿಗಳು, ಅವರು ದೇಶ ಬಿಟ್ಟು ಹೋಗಬೇಕೆಂದು ಅನವಶ್ಯಕವಾಗಿ ಸಮಸ್ಯೆಗಳನ್ನು ಹುಟ್ಟುಹಾಕುವ ಬಿಜೆಪಿ ಮತ್ತದರ ಅಂಗ ಪರಿವಾರಗಳು, ಈ ವಿಷಯದಲ್ಲಿ ತಮ್ಮ ಟೊಳ್ಳುತನ ಬಯಲು ಮಾಡುತ್ತಲೇ ಬಂದಿದ್ದಾರೆ. ಕಳೆದ ಬಾರಿ ಉತ್ತರ ಪ್ರದೇಶದ ಬಿಜೆಪಿ ಸಚಿವ ಬಲ್ದೇವ್ ಸಿಂಗ್ ಓಲಾಕ್ ‘ಇಂಡಿಯಾ ಟುಡೇ’ಯ ಕಾರ್ಯಕ್ರಮವೊಂದರಲ್ಲಿ ವಂದೇ ಮಾತರಂ ಹಾಡಲು ಹೇಳಿದಾಗ ಹಾಡಲು ಗೊತ್ತಿಲ್ಲದೆ ತಡವರಿಸಿ ನಗೆಪಾಟಲಿಗೀಡಾಗಿದ್ದರು. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವಂದೇ ಮಾತರಂ ಕುರಿತು ದೇಶದಾದ್ಯಂತ ದೊಡ್ಡ ಮಟ್ಟದ ಕೋಲಾಹಲ ಎಬ್ಬಿಸುವ ಬಿಜೆಪಿಗರು ತಾವೇ ಮೊದಲು ವಂದೇ ಮಾತರಂ ಹಾಡನ್ನು ಕಲಿಯಬೇಕೇ ಎಂಬುವುದರ ಕುರಿತು ಜಿಜ್ಞಾಸೆ ಶುರುವಾಗಿದೆ.
ಝೀ ಸಲಾಂ ಚಾನೆಲಿನಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದ್ದಾಗ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಬೋರ್ಡ್ (AIMPLB) ಸದಸ್ಯ ಮುಫ್ತಿ ಇಜಾಝ್ ಅರ್ಶದ್ ಖಾಸಿಮಿಯವರು ಬಿಹಾರ ಬಿಜೆಪಿಯ ವಕ್ತಾರ ನವೀನ್ ಕುಮಾರ್ ಸಿಂಗ್’ರವರಿಗೆ ಮೊದಲು ‘ವಂದೇ ಮಾತರಂ’ ಹಾಡನ್ನು ಹಾಡಿ ತೋರಿಸಿ ಎಂದು ಸವಾಲು ಹಾಕುತ್ತಾರೆ. ನೀವೂ ಹಾಡಬೇಕೆಂದು ಇಜಾಝ್ ಅರ್ಶದ್’ರವರಿಗೆ ಹೇಳಿದಾಗ ಇಜಾಝ್’ರವರು ಆಯಿತೆಂದು ಒಪ್ಪಿಕೊಳ್ಳುತ್ತಾರೆ. ಈ ವೇಳೆ ವಂದೇ ಮಾತರಂ ಹಾಡನ್ನು ತನ್ನ ಮೊಬೈಲಿನಲ್ಲಿ ಹುಡುಕಲು ಪ್ರಾರಂಭಿಸಿದಾಗ, ಮೊಬೈಲ್ ಸಹಾಯವಿಲ್ಲದೆ ಹಾಡಬೇಕೆಂದು ಇಜಾಝ್ ಅರ್ಶದ್’ರವರು ವಿನಂತಿಸುತ್ತಾರೆ. ನವೀನ್’ರವರು ವಂದೇ ಮಾತರಂ ಹಾಡಲು ಪ್ರಾರಂಭಿಸುತ್ತಾರಾದರೂ, ಅದು ಬಹಳಷ್ಟು ತಪ್ಪುಗಳಿಂದ ಕೂಡಿತ್ತು. ತಾವೆಲ್ಲಿ ತಪ್ಪಾಗಿ ಹಾಡಿದ್ದೀರಾ ಎಂದು ಖುದ್ದು ಇಜಾಝ್’ರವರೇ ನವೀನ್’ರವರಿಗೆ ಮನದಟ್ಟು ಮಾಡುತ್ತಾರೆ !
ಕೊನೆಯಲ್ಲಿ ಟಿವಿ ನಿರೂಪಕ ವಂದೇ ಮಾತರಂ ಹಾಡುವಂತೆ ಮೊದಲಿಗೆ ಸವಾಲು ಹಾಕಿದ್ದ ನವೀನ್’ರವರು ಹಾಡಿ ತೋರಿಸಬೇಕೆಂದು ಕೇಳಿಕೊಂಡಾಗ ನವೀನ್, ತನ್ನ ಮೊಬೈಲ್ ನೋಡುತ್ತಾ ಮತ್ತೊಮ್ಮೆ ಕೆಟ್ಟ ಧಾಟಿಯಲ್ಲಿ ಮತ್ತು ತಪ್ಪು ಉಚ್ಚಾರಗಳನ್ನೊಳಗೊಂಡ ವಂದೇ ಮಾತರಂ ಹಾಡುತ್ತಾರೆ. ‘ವಂದೇ ಮಾತರಂ’ ಕುರಿತು ಗುಲ್ಲೆಬ್ಬಿಸುವ ಎಲ್ಲಾ ಬಿಜೆಪಿಗರ ಟೊಳ್ಳುತನವನ್ನು ಬಹಿರಂಗಪಡಿಸಿದ ನವೀನ್’ರವರು ಅವರೆಲ್ಲರ ವಕ್ತಾರನಂತೆ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಈ ವೀಡಿಯೊ ಈಗ ಅಂತರ್ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಟಿವಿ ಚರ್ಚೆಯ ವೀಡಿಯೋ ವೀಕ್ಷಿಸಿ
https://m.facebook.com/story.php?story_fbid=289017761615945&id=252303598620695
