ವರದಿಗಾರ: ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಹೊರಟಿದ್ದ ಸ್ಮಾಮೀಜಿಯೊಬ್ಬರು ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿದ್ದರು ಎನ್ನಲಾದ ವೀಡಿಯೋ ಬಹಿರಂಗಗೊಂಡಿದ್ದು, ರಾಸಲೀಲೆಯಲ್ಲಿ ಸಿಕ್ಕಿ ಬಿದ್ದಿರುವ ಸ್ವಾಮೀಜಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ನಟಿಯೊಂದಿಗೆ ಮಠದ ಕೋಣೆಯಲ್ಲೇ ರಾಸಲೀಲೆ ನಡೆಸಿ ವೀಡಿಯೋ ಮೂಲಕ ಬಹಿರಂಗಗೊಂಡಿದ್ದು, ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್ ಎಂದು ಗುರುತಿಸಲಾಗಿದೆ.
ರಾಸಲೀಲೆಯಲ್ಲಿ ತೊಡಗಿದ್ದರು ಎನ್ನಲಾದ ದಯಾನಂದನ ವಿರುದ್ದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಶ್ರೀಶೈಲ ಶಾಖಾ ಪೀಠದ ಶ್ರೀಗಳು ಮಠಕ್ಕೆ ಆಗಮಿಸಿ ಮಾತಕತೆ ನಡೆಸಬೇಕೆಂದು ಮಠಕ್ಕೆ ಮುತ್ತಿಗೆ ಹಾಕಿರುವ ಭಕ್ತರು ಪಟ್ಟು ಹಿಡಿದಿದ್ದಾರೆ.
500ವರ್ಷಗಳ ಇತಿಹಾಸವಿರುವ ವೀರಶೈವ ಪರಂಪರೆಯ ಈ ಮಠಕ್ಕೆ ಶಿವಾಚಾರ್ಯ ಶ್ರೀಗಳು 2011ರಲ್ಲಿ ಉತ್ತರಾಧಿಕಾರಿಯನ್ನಾಗಿ ತನ್ನ ಪುತ್ರ ದಯಾನಂದ ಅವರನ್ನೇ ನೇಮಕ ಮಾಡಿದ್ದರು ಎನ್ನಲಾಗಿದೆ.
