ವರದಿಗಾರ-ಮದೀನಾ ಮುನವ್ವರ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಮದೀನಾ ಸೆಕ್ಟರ್ ವತಿಯಿಂದ ದ್ವೇಷ ತೊಲಗಲಿ, ದೇಶ ಬೆಳಗಲಿ ಧ್ಯೇಯ ವಾಕ್ಯದೊಂದಿಗೆ, ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.
ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ ಸರಳಿಕಟ್ಟೆ ಸಂದೇಶ ಭಾಷಣ ಮಾಡುತ್ತಾ, ದೇಶ ಪ್ರೇಮವು ಇಸ್ಲಾಮಿನ ಭಾಗವಾಗಿದೆ. ಸ್ವತಂತ್ರ್ಯಕ್ಕಾಗಿ ಹೋರಾಡಿ ಅಮರರಾದ ಬಹದ್ದೂರ್ ಶಾ, ಟಿಪ್ಪುಸುಲ್ತಾನರ ಚರಿತ್ರೆಯನ್ನು ಈ ಸಂದರ್ಭ ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಮಾತನಾಡಿ ನಮ್ಮ ಪೂರ್ವಜರು ತಮ್ಮ ಜೀವ ಮತ್ತು ಜೀವನದಲ್ಲಿ ತ್ಯಾಗ, ಬಲಿದಾನದ ಮೂಲಕ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ರಕ್ತ ಸಾಕ್ಷಿಗಳಾಗಿ ನಮಗೆ ಸ್ವಾತಂತ್ರ್ಯ ದಕ್ಕಿಸಿ ಕೊಟ್ಟಿದ್ದಾರೆ. ಇಂದು ಹಳ್ಳಿಯಿಂದ ದೆಲ್ಲಿಯವರೆಗೆ ಸ್ವಾತಂತ್ರೋತ್ಸವ ಆಚರಿಸಲಾಗುತ್ತಿದೆ. ಆದ್ರೆ ನಮಗೆ ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ. ಬೆಳಗ್ಗೆ ಹೋದ ವ್ಯಕ್ತಿ ಮರಳಿ ಮನೆಗೆ ಬರುತ್ತಾನೆ ಎನ್ನಲು ಸಾಧ್ಯವಿಲ್ಲದ ಪರಿಸ್ಥಿತಿ ಬಂದೊಗಿದ್ದು, ಅಕ್ರಮ, ಅನಾಚಾರ, ಅಧರ್ಮ ಹಾಗೂ ನಮ್ಮಲ್ಲಿಯೇ ಕಚ್ಚಾಡುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಖೇಧ ವ್ಯಕ್ತಪಡಸಿದರು. ಸಯ್ಯದ್ ಖ್ವಾಜ ಜಿಸ್ತಿ ತಂಙಳ್ ಹೈದರಾಬಾದ್ ಭಾರತೀಯರಿಗೆ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಮದನಿ, ಇಸ್ಮಾಯಿಲ್ ಕಿನ್ಯಾ, ಅಶ್ರಫ್ ಕಿನ್ಯಾ, ತಾಜುದ್ದೀನ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.
ಉಮ್ಮರ್ ಗೇರುಕಟ್ಟೆ ಸ್ವಾಗತಿಸಿ, ಹುಸೈನಾರ್ ಮಾಪಳ್ ವಂದಿಸಿದರು. ಇದೇ ವೇಳೆ ಹಜ್ಜ್ ನಿರ್ವಹಿಸಲು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಹಜ್ಜಾಜಿಗಳಿಗೆ ಮಸ್ಜಿದುನ್ನಭವಿ ಮದೀನಾ ಮುನವ್ವರದಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಸ್ವಾತಂತ್ರ್ಯ ಆಚರಿಸಿದರು.
