ರಾಜ್ಯ ಸುದ್ದಿ

ಟಿಪ್ಪು ಪರ ರಾಷ್ಟ್ರಪತಿ ಭಾಷಣದಲ್ಲಿ ತಪ್ಪೇನಿಲ್ಲ-ಬಿಜೆಪಿ ಮುಖಂಡ ಸಮರ್ಥನೆ

▪ಟಿಪ್ಪು ಸುಲ್ತಾನ್ ಒಬ್ಬ ಉತ್ತಮ ಆಡಳಿತಗಾರ ಮತ್ತು ಅಭಿವೃದ್ಧಿಯ ಹರಿಕಾರರೂ ಹೌದು

▪ವಿವಾದ ಮಾಡಲೇಬೇಕು ಅನ್ನುವವರಿಗೆ ಟಿಪ್ಪು ಸುಲ್ತಾನ್ ವಿವಾದ ಆಗ್ತಾನೆ.

▪ಒಂದು ಒಳ್ಳೆಯ ಕಾರ್ಯಕ್ರಮ ಅನ್ನುವ ತೃಪ್ತಿಯಿದೆ.

ವರದಿಗಾರ: ಟಿಪ್ಪು ಸುಲ್ತಾನ್ ಒಬ್ಬ ಉತ್ತಮ ಆಡಳಿತಗಾರ ಮತ್ತು ಅಭಿವೃದ್ಧಿಯ ಹರಿಕಾರರೂ ಹೌದು. ಮೈಸೂರು ಅರಸರಷ್ಟೇ ಪ್ರಭಾವಿಯಾಗಿದ್ದರು. ಆದ್ದರಿಂದ ಟಿಪ್ಪು ಸುಲ್ತಾನ್ ರ ಬಗ್ಗೆ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿರುವುದರಲ್ಲಿ ತಪ್ಪೇನಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸ್ಪೀಕರ್ ಡಿ.ಬಿ. ಚಂದ್ರೇಗೌಡ ಸಮರ್ಥಿಸಿಕೊಂಡಿದ್ದಾರೆ.

ಅವರು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

ನಮಗೆ ಗೊತ್ತಿರುವ ಇತಿಹಾಸದ ಪ್ರಕಾರ ಟಿಪ್ಪು ಅಭಿವೃದ್ಧಿಯ ಹರಿಕಾರ ಎಂಬುವುದು ಗೊತ್ತಿದೆ. ರಾಷ್ಟ್ರಪತಿಯವರ ಭಾಷಣದ ವಿಚಾರದಲ್ಲಿ ವಿವಾದ ಮಾಡಲೇಬೇಕು ಅನ್ನುವವರಿಗೆ ಟಿಪ್ಪು ಸುಲ್ತಾನ್ ವಿವಾದ ಆಗ್ತಾನೆ. ವಿರೋಧ ವ್ಯಕ್ತಪಡಿಸುವವರೇ ಈ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಹೇಳಿದ್ದಾರೆ.

ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮ ಅನ್ನುವ ತೃಪ್ತಿಯಿದೆ. ಬರಬೇಕಾದವರು ಬಂದಿದ್ದದಾರೆ. ರಾಷ್ಟ್ರಪತಿ ರಾಜ್ಯದ ಬಗ್ಗೆ ಉತ್ತಮ ಭಾಷಣ ಮಾಡಿದ್ದಾರೆ. ರಾಜ್ಯದ ಬಗ್ಗೆ ಒಳ್ಳೆಯ ವಿಚಾರವನ್ನು ಹೇಳಿದ್ದಾರೆ. ಇದು ಕೇವಲ ಸಚಿವಾಲಯದ ಅಥವಾ ರಾಜ್ಯ ಸರಕಾರದ ಕಾರ್ಯಕ್ರಮವಲ್ಲ ಎಂಬುವುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಪ್ಪು ಸುಲ್ತಾನ್ ಅಪ್ರತಿಮ ವೀರನಾಗಿದ್ದ: ಟಿಪ್ಪು ಸಾಧನೆಯನ್ನು ಸ್ಮರಿಸಿದ ರಾಷ್ಟ್ರಪತಿ-ಬಿಜೆಪಿಗೆ ಮುಖಭಂಗ

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group