ಸುತ್ತ-ಮುತ್ತ

ಬಂಟ್ವಾಳ : ಇಮಾಂ ನವವಿ ಸ್ಮರಣಾರ್ಥ ‘ಮುತಅಲ್ಲಿಂ ಡೇ’

ಬಂಟ್ವಾಳ:ಇಲ್ಲಿನ ಸಮನ್ವಯ ವಿದ್ಯಾ ಸಂಸ್ಥೆ ಮಜ್ಲಿಸ್ ಗಾಣೆಮಾರ್ ನಲ್ಲಿ ನವವಿ ಇಮಾಮರ ಸ್ಮರಣಾರ್ಥ ‘ಮುತಅಲ್ಲಿಂ ಡೇ’ ಆಚರಿಸಲಾಯಿತು. ದೀನೀ ಜ್ಞಾನ ಸೇವೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಅಗ್ರಗಣ್ಯ ವಿದ್ವಾಂಸ ಕೇಸರಿ ನವವಿ ಇಮಾಮರನ್ನು ಅನುಸ್ಮರಿಸುತ್ತಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಇಸ್ಲಾಮೀ ಅರಿವಿನ ಮಹಾಸಾಮ್ರಾಜ್ಯದಲ್ಲಿ ವಿಹರಿಸಿದ ಇಮಾಂ ನವವಿಯವರ ಸೇವೆಗಳನ್ನು ಸಮಾಜದ ಎಲ್ಲಾ ಮಗ್ಗುಲುಗಳಲ್ಲಿರುವ ಜನರಿಗೆ ಪರಿಚಯಿಸುವುದು ಮುತಅಲ್ಲಿಂ ಡೇಯ ಉದ್ದೇಶ.
ಸಂಸ್ಥೆಯ ಚೆಯರ್ಮ್ಯಾನ್ ಹಾಫಿಳ್ ಅಬ್ದುಲ್ ಮಜೀದ್ ಕಾಮಿಲ್ ಸಖಾಫಿ ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದರು.ಸಂಸ್ಥೆಯ ಮುದರ್ರಿಸರುಗಳಾದ ಅಬೂಬಕರ್ ಸಿದ್ದೀಖ್ ಸಖಾಫಿ ಕಾಯಾರ್,ಇಸ್ಮಾಈಲ್ ಸಅದಿ ಮಾಚಾರ್,ಫಿರೋಝುದ್ದೀನ್ ಮುಈನಿ ಅಸ್ಸಅದಿ,ಸಲೀಂ ಸಖಾಫಿ,ಹಾಫಿಳ್ ಅನ್ಸಾರ್ ಸಅದಿ ಅಧ್ಯಾಪಕರಾದ ಸವಾದ್ ಸರ್,ಸ್ವಾದಿಖ್ ಸರ್,ಸಈದ್ ಸರ್,ಸದ್ದಾಂ ಸರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಶಾಕಿರ್  MSe

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group