ವರದಿಗಾರ: ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಮತ್ತೊಮ್ಮೆ ಮೌನ ಮುರಿದಿದ್ದು, ದೇಶದ ಪ್ರಸಿದ್ಧಿಯನ್ನು ಹೆಚ್ಚಿಸಿದ ತಾಜ್ ಮಹಲ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಕಾಶ್ ರೈ ‘ನೀವು ತಾಜಮಹಲ್ನ ಬುನಾದಿ ಅಗೆಯಲು ಆರಂಭಿಸಿದ್ದೀರಿ, ಅದನ್ನು ಯಾವಾಗ ಹೊಡೆದುರುಳಿಸುತ್ತೀರಿ? ಕೊನೆಯ ಬಾರಿಯಾದರೂ ಮಕ್ಕಳಿಗೆ ತೋರಿಸ್ಬೇಕು’ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ತಾಜಮಹಲ್ ಭವಿಷ್ಯದ ದಿನಗಳಲ್ಲಿ ಇತಿಹಾಸದ ಪುಟ ಸೇರುತ್ತಾ? ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಪರ ಮತ್ತು ವಿರೋಧದ ಚರ್ಚೆಗಳ ಮಧ್ಯೆ ಕೆಲವರು ತಾಜಮಹಲ್ ಅನ್ನು ಕೆಡವಬೇಕು ಎನ್ನುವವರೆಗೂ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಉತ್ತರ ಪ್ರದೇಶ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಈ ಟ್ವೀಟ್ ಹಾಕಿದ್ದಾರೆ ಎಂಬುವುದಾಗಿ ಚರ್ಚೆಗಳಾಗುತ್ತಿದೆ.
ಆದರೆ ಒಂದೆಡೆ ಈ ಹೇಳಿಕೆಯನ್ನು ಮುಂದಿಟ್ಟು ವಿವಾದಾತ್ಮಕ ಹೇಳಿಕೆಯೆಂದು ಬಿಂಬಸಲಾಗುತ್ತಿದೆ ಎಂದು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
#justasking …..Will this worlds wonder #tajmahal be a past in our future ..??? pic.twitter.com/4tTvBHr7UR
— Prakash Raj (@prakashraaj) October 23, 2017
