ವರದಿಗಾರ : ಹಯಾತುಲ್ ಇಸ್ಲಾಂ ಮದ್ರಸ ಬೆಳ್ತಂಗಡಿಯಲ್ಲಿ ‘ಮುಅಲ್ಲಿಂ ಡೇ’ ಕಾರ್ಯಕ್ರಮ ಮದ್ರಸ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಖಿಲಿರಿಯ್ಯ ಜುಮ್ಮಾ ಮಸೀದಿ ಖತೀಬರಾದ ಹನೀಫ್ ದಾರಿಮಿ ನೆರವೇರಿಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ಮದ್ರಸ ಮುಖ್ಯೋಪಾಧ್ಯಾಯರಾದ ಹಾರಿಸ್ ಹನೀಫಿ, ಮುಅಲ್ಲಿಂ ಎಂಬುವುದು ಇಲ್ಲದಿರುತ್ತಿದ್ದರೆ ಎಲ್ಲರೂ ಅಂಧಕಾರದಲ್ಲಿ ಮುಳುಗುತಿದ್ದರು. ಅಂಧಕಾರದಲ್ಲಿದ್ದ ಅರಬಿಯನ್ ಜನರಿಗೆ ಪ್ರವಾದಿ(ಸ.ಅ) ಬೆಳಕು ಚೆಲ್ಲಿದರು. ಮನುಷ್ಯನ ಇಹಪರ ವಿಜಕ್ಕಾಗಿ ಅಲ್ಲಾಹನು ಪ್ರವಾದಿ(ಸ.ಅ) ಮೂಲಕ ಕಾಣಿಸಿ ಕೊಟ್ಟಂತಹ ನಿಯಮಾವಳಿಯನ್ನು ಜನರಿಗೆ ತಿಳಿಸುವುದೇ ಮುಅಲ್ಲಿಮರ ಧ್ಯೇಯ. ಆದುದರಿಂದ ಧಾರ್ಮಿಕ ವಿಧ್ಯಾಭ್ಯಾಸದೊಂದಿಗೆ ಸಾಮಾಜಿಕ, ಶೈಕ್ಷಣಿಕ , ಸಾಂಸ್ಕ್ರತಿಕ ಕ್ಷೇತ್ರದಲ್ಲಿಯೂ ಮುಅಲ್ಲಿಮರ ಪಾತ್ರವೂ ಅತ್ಯಗತ್ಯವಾಗಿದೆ ಪ್ರತಿಯೋಬ್ಬ ಮುಅಲ್ಲಿಮರು ಅವರರವರ ಜವಬ್ದಾರಿಯನ್ನು ಕಾರ್ಯರೂಪದಲ್ಲಿ ತಂದರೆ ಖಂಡಿತವಾಗಿಯೂ ಅಂಧಕಾರದ ಸಮಾಜಕ್ಕೆ ಬೆಳಕು ಚೆಲ್ಲಲು ಸಾದ್ಯವೆಂದರು.
ಕಾರ್ಯಕ್ರಮದ ಕೊನೆಯಲ್ಲಿ ಸಹ ಅಧ್ಯಪಕರಾದ ಹಸೈನಾರ್ ಮುಸ್ಲಿಯಾರ್ ಧನ್ಯವಾದ ಸಮರ್ಪಿಸಿದರು
