ರಾಷ್ಟ್ರೀಯ ಸುದ್ದಿ

ಗುಜರಾತ್ ಬಿಜೆಪಿಗೆ ಮತ್ತೊಂದು ಆಘಾತ: ಪಕ್ಷ ತ್ಯಜಿಸಿದ ಪಾಟೀದಾರ್ ನಾಯಕ ನಿಖಿಲ್ ಸವಾನಿ!!

 ► ಬಿಜೆಪಿ ಪಟೇಲ್ ಸಮುದಾಯಕ್ಕೆ ‘ಲಾಲಿಪಾಪ್’ ನೀಡಿ ಮೋಸ ಮಾಡುತ್ತಿದೆ !

 ► ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಸುಳಿವು

ವರದಿಗಾರ : ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿರುವಾಗ ಆಡಳಿತಾರೂಢ ಬಿಜೆಪಿ ಸರಣಿ ಅವಮಾನಗಳನ್ನು ಅನುಭವಿಸುತ್ತಿದೆ. ನಿನ್ನೆಯಷ್ಟೇ ಬಿಜೆಪಿಗೆ ಸೇರಿದ ಕೆಲವೇ ಗಂಟೆಗಳ ಬಳಿಕ ಬಿಜೆಪಿಯ ಭ್ರಷ್ಟಾಚಾರದ ಬ್ರಹ್ಮಾಂಡವನ್ನು ಬಯಲುಮಾಡಿ ಬಿಜೆಪಿ ತ್ಯಜಿಸಿದ್ದ ಪಾಟೀದಾರ್ ಆಂಧೋಲನದ ನಾಯಕ ನರೇಂದ್ರ ಪಟೇಲ್ ನಂತರ ಇಂದು ಮತ್ತೋರ್ವ ಪಾಟೀದಾರ್ ನಾಯಕ ನಿಖಿಲ್ ಸವಾನಿ ಬಿಜೆಪಿಯ ಆತಂಕಕಾರಿ ನಡೆಗಳಿಂದ ಬೇಸತ್ತು ಪಕ್ಷವನ್ನು ತ್ಯಜಿಸಿದ್ದು,ಸವಾನಿ 12 ಗಂಟೆಗಳ ಒಳಗಾಗಿ ಬಿಜೆಪಿಯನ್ನು ತ್ಯಜಿಸಿದ ಎರಡನೇ ಪಾಟೀದಾರ್ ನಾಯಕರಾಗಿದ್ದಾರೆ.

ಬಿಜೆಪಿ ಪಟೇಲ್ ಸಮುದಾಯಕ್ಕೆ ಕೇವಲ ಆಮಿಷಗಳನ್ನಷ್ಟೇ ನೀಡುತ್ತಿದೆಯಲ್ಲದೆ ಯಾವುದನ್ನೂ ಈಡೇರಿಸುತ್ತಿಲ್ಲ ಎಂದು ನಿಖಿಲ್ ಸವಾನಿ ಆಪಾದಿಸಿದರು. ನಮಗೇನಾದರೂ ಒಳಿತನ್ನು ಮಾಡುತ್ತಾರೆಂಬ ವಿಶ್ವಾಸದೊಂದಿಗೆ ಬಿಜೆಪಿ ಸೇರಿದ್ದೆ. ಆದರೆ ಅವರು ನಮಗೆ ಆಶ್ವಾಸನೆಯ ‘ಲಾಲಿಪಾಪ್’ ನೀಡುತ್ತಿದ್ದಾರೆಯೇ ವಿನಃ ಯಾವುದನ್ನೂ ಪಾಲಿಸುತ್ತಿಲ್ಲ ಎಂದರು. ಪಟೇಲ್ ಸಮುದಾಯ ಎಂದಿಗೂ ಬಿಜೆಪಿಯನ್ನು ಕ್ಷಮಿಸುವುದಿಲ್ಲ ಎಂದವರು ಹೇಳಿದರು. ಬಿಜೆಪಿಯಿಂದ ನಿಮಗೇನಾದರೂ ಹಣದ ಆಮಿಷ ಒಡ್ಡಲಾಗಿತ್ತೇ ಎಂಬ ಪ್ರಶ್ನೆಗೆ, ‘ಇಲ್ಲ ನನಗೆ ಅಂತಹಾ ಆಮಿಷಗಳಿರಲಿಲ್ಲ. ಆದರೆ ನಾನು ನರೇಂದ್ರ ಪಟೇಲ್ ಅವರನ್ನು ಅಭಿನಂದಿಸುತ್ತೇನೆ. ಅವರೋರ್ವ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದರೂ ತನಗೆ ನೀಡಿದ ಕೋಟಿ ರೂಪಾಯಿಗಳ ಆಮಿಷವನ್ನು ಒಪ್ಪದೇ ಜನರ ಮುಂದೆ ಬಿಜೆಪಿಯನ್ನು ಬೆತ್ತಲಾಗಿಸಿದ್ದಾರೆ ಎಂದವರು ಹೇಳಿದರು. ನರೇಂದ್ರ ಪಟೇಲ್, ನಿಖಿಲ್ ಸವಾನಿಯವರೊಂದಿಗೆ ಆಂಧೋಲನದಲ್ಲಿ ಸಹಪಾಟಿಯಾಗಿದ್ದು, ನಿನ್ನೆ ಬಿಜೆಪಿ ಸೇರಿದ್ದ ಕೆಲವೇ ಗಂಟೆಗಳ ಬಳಿಕ, ಬಿಜೆಪಿ ತನಗೆ ಒಂದು ಕೋಟಿಗಳ ಆಮಿಷವೊಡ್ಡಿತ್ತು ಎಂದು ಮಧ್ಯರಾತ್ರಿ ಪತ್ರಿಕಾಗೋಷ್ಟಿ ನಡೆಸಿ ಬಿಜೆಪಿಯ ನಿಜ ಬಣ್ಣ ಬಯಲುಗೊಳಿಸಿದ್ದರು. ಇದು ರಾಜ್ಯ ಬಿಜೆಪಿಗೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು.

 

‘ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತೇನೆ ‘

ಬಿಜೆಪಿ ಎಲ್ಲಾ ಪಾಟೀದಾರ್ ಆಂದೋಲನದ ನಾಯಕರನ್ನು ಖರೀದಿಸುವ ಕೆಟ್ಟ ಪ್ರಯತ್ನವನ್ನು ನಡೆಸುತ್ತಿದೆ. ನಾನದನ್ನು ಖಂಡಿಸುತ್ತೇನೆ. ಇವತ್ತು ರಾಹುಲ್ ಗಾಂಧಿ ಗುಜರಾತಿಗೆ ಭೇಟಿ ನೀಡುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ. ಭೇಟಿಗೆ ಅವಕಾಶ ಸಿಕ್ಕರೆ ನನ್ನ ಅಭಿಪ್ರಾಯಗಳನ್ನು ಅವರಲ್ಲಿ ತಿಳಿಸಲಿದ್ದೇನೆ ಎಂದು ಹೇಳುತ್ತಾ  ನಿಖಿಲ್ ಸವಾನಿ, ತಾನು ಕಾಂಗ್ರೆಸ್ ಸೇರುವ ಕುರಿತು ಸುಳಿವು ನೀಡಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ತಾನೇ ತೋಡಿದ ಗುಂಡಿಗೆ ಬೀಳುತ್ತಿದೆ. 1995ರಿಂದ ಕಳೆದ ಐದು ಅವಧಿಗಳ 22 ವರ್ಷಗಳಲ್ಲಿ ಅಧಿಕಾರ ನಡೆಸುತ್ತಿದ್ದರೂ, ಪಟೇಲ್ ಸಮುದಾಯದ ಆಶ್ವಾಸನೆಗಳನ್ನು ಈಡೇರಿಸದೆ ಕಾಲ ತಳ್ಳಿಕೊಂಡು ಬಂದಿರುವ ಬಿಜೆಪಿಗೆ ಈಗೀಗ ಅವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದು ಕಳೆದ ವರ್ಷ ಪಾಟೀದಾರ್ ಆಂಧೋಲನ ರೂಪುಗೊಳ್ಳುವುದರೊಂದಿಗೆ ತೀವ್ರ ಹಿನ್ನಡೆ ಅನುಭವಿಸುತ್ತಾ ಬಂದಿತ್ತು. ಈಗ ಗಾಯದ ಮೇಲೆ ಬರೆ ಎಳೆದಂತೆ ವಿಧಾನಸಭಾ ಚುನಾವಣೆ ಮುಂದಿಟ್ಟುಕೊಂಡು ಒಂದೆಡೆ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯಗಳೊಂದಿಗೆ, ರಾಜ್ಯ ಬಿಜೆಪಿಯ ಈ ರೀತಿಯ ಅಕ್ರಮಗಳಿಂದಾಗಿ ಅದು ಜನತೆಯ ಮುಂದೆ ಮತ್ತೊಮ್ಮೆ ಬೆತ್ತಲಾಗಿದೆ.

 

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group