ರಾಷ್ಟ್ರೀಯ ಸುದ್ದಿ

ಪ್ರಧಾನಿ ಭಾಷಣ ನಂಬಿಕೆಗೆ ಮಾಡಿದ ದ್ರೋಹ: ಭಾಷಣದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್

ವರದಿಗಾರ-ನವದೆಹಲಿ:71ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣ ರೈತರಿಗೆ,ಯುವಕರಿಗೆ,ಸಮಾಜದಲ್ಲಿರುವ ಅಶಕ್ತರ ನಂಬಿಕೆಗೆ ಮಾಡಿದ ದ್ರೋಹವೆಂದು ಕಾಂಗ್ರೆಸ್ ಕಿಡಿಕಾರಿದೆ. ಮತ್ತು ಪ್ರಧಾನಿಯವರದ್ದು ನಿರಾಶಾದಾಯಕ ಭಾಷಣವೆಂದು ಹೇಳಿದೆ.

71ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಬಳಿಕ ಈ ಬಗ್ಗೆ ಪ್ರತಿಕ್ರಿಸಿದ ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಆನಂದ್ ಶರ್ಮಾ, ಮೋದಿಯವರಿಗೆ ಉತ್ತರಪ್ರದೇಶದ ಗೋರಖ್​​ಪುರದಲ್ಲಿ ಅಮಾನವೀಯವಾಗಿ ಮಕ್ಕಳು ಸಾವಿಗೀಡಾದ ಘಟನೆಯ ಗಂಭೀರತೆ ಅರಿವಾಗಿಲ್ಲದಿರುವುದರಿಂದ ಮಕ್ಕಳ ಸಾವುಗಳನ್ನು ಸ್ವಾಭಾವಿಕ ವಿಪತ್ತಿಗೆ ಹೋಲಿಕೆ ಮಾಡಿದ್ದಾರೆ ಎಂದು ಶರ್ಮಾ ಹೇಳಿದ್ದಲ್ಲದೇ ಈ ರೀತಿಯ ಭಾಷಣವನ್ನು ಮಾಡುವಾಗ ಎಚ್ಚರಿಕೆಯಿಂದಿರಬೇಕೆಂದು ಪ್ರಧಾನಿಗೆ ಕಿವಿಮಾತು ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಧಾನಿಯವರು ಭಾಷಣದಲ್ಲಿ ಪ್ರಸ್ತಾಪಿಸಿರುವುದರ ಬಗ್ಗೆ ಮಾತು ಮುಂದುವರಿಸಿದ ಆನಂದ್ ಶರ್ಮಾ, ಮೇಲ್ದರ್ಜೆಯಲ್ಲಿ ಭಾಷಣ ಮಾಡುವುದನ್ನು ಬಿಟ್ಟು ಜನರ ಸಮಸ್ಯೆಯ ಮೂಲದ ಬಗ್ಗೆ ಮಾತನಾಡಲಿ.ಜನತೆಗೆ ರಕ್ಷಣೆಯ ಭರವಸೆ ನೀಡಬೇಕಾಗಿದ್ದ ಪ್ರಧಾನಿ, ಒಂದು ವರ್ಷದ ಹಿಂದೆ ನಡೆದ ಘಟನೆಯನ್ನು ಮೆಳುಕು ಹಾಕುತ್ತಾ ನಿರ್ದಿಷ್ಟ ದಾಳಿಯನ್ನು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ನಿರ್ದಿಷ್ಟ ದಾಳಿಯ ಬಳಿಕವೂ ಪಾಕಿಸ್ತಾನ ದೇಶದಲ್ಲಿ ಅನೇಕ ಬಾರಿ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

ಟೀಕೆಗಳ ಸುರಿಮಳೆಯನ್ನೇ ಮಾಡಿದ ಆನಂದ್ ಶರ್ಮಾ,ಪ್ರಧಾನಿಯ ಭ್ರಷ್ಟಾಚಾರ ವಿರುದ್ಧದ ನಡೆಯ ಬಗ್ಗೆ ಮಾತೆತ್ತಿದ ಅವರು, ಮಾರ್ಚ್ 31ರ ಬಳಿಕ 1000 ಹಾಗೂ 500ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ವಿನಿಮಯವಾದ ಹಣದ ಬಗ್ಗೆ ಆರ್.ಬಿ.ಐ ಇದುವರೆಗೂ ಬಹಿರಂಗಪಡಿಸದಿರುವುದಕ್ಕೆ ಕಾರಣವೇನೆಂದು ಇದೇ ಸಂದರ್ಭ ಕೇಳಿದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಿ, ದೇಶದ ಅಸಂಘಟಿತ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಈಗ ಈ ವಿಷಯದ ಕುರಿತು ಅವರು ಮೌನಕ್ಕೆ ಜಾರಿದ್ದಾರೆ. ರೈತರಿಗೆ ನೀಡಲಾಗಿದ್ದ ಭರವಸೆಗಳನ್ನೂ ಪ್ರಧಾನಿ ಈಡೇರಿಸಿಲ್ಲದಿರುವುದರಿಂದ ಇದರ ಹೊಣೆಗಾರಿಕೆಯನ್ನು ಅವರೇ ಹೊರಬೇಕೆಂದು ಹೇಳಿ ಜಿಎಸ್ ಟಿ ವಿಪಕ್ಷಗಳ ಸಹಕಾರದಿಂದ ಬಂದಿರುವುದನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಲೇ ಇಲ್ಲ ಎಂದು ತನ್ನ ಪರ ಬ್ಯಾಟಿಂಗ್ ಮಾಡಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group