ರಾಜ್ಯ ಸುದ್ದಿ

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಿದರೆ, ವೇದಿಕೆಯಲ್ಲೇ ಟಿಪ್ಪು ಇತಿಹಾಸವನ್ನು ಬಿಚ್ಚಿಟ್ಟು ಧಿಕ್ಕಾರ ಕೂಗುವೆ

ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ತನ್ನ ಸವಾಲನ್ನು ಎದುರಿಸಲಿ ಅನಂತ್ ಕುಮಾರ್ ಹೆಗಡೆ ಸವಾಲ್

ವರದಿಗಾರ: ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ನಡೆಯಲಿರುವ ಟಿಪ್ಪು ಜಯಂತಿಯ ಪ್ರಯುಕ್ತ ಸರಕಾರದ ವತಿಯಿಂದ ನಡೆಯುವ ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಿದೆ ಎಂದಾದಲ್ಲಿ ಟಿಪ್ಪುವಿನ ಇತಿಹಾಸನ್ನು ಎಳೆಎಳೆಯಾಗಿ ಬಿಚ್ಚಿಟ್ಟು ವೇದಿಕೆಯಲ್ಲೇ ಧಿಕ್ಕಾರ ಕೂಗುತ್ತೇನೆ ಮತ್ತು ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ತನ್ನ ಸವಾಲನ್ನು ಎದುರಿಸಲಿ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಅನಂತ್ ಕುಮಾರ್ ಹೆಗಡೆ ಸವಾಲು ಹಾಕಿದ್ದಾರೆ.

ಅವರು ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಸ್ವತಃ ನಾನೇ ಆಮಂತ್ರಣ ಪತ್ರಿಕೆಯಲ್ಲಿ ಹೆಸರನ್ನು ಹಾಕುವುದು ಬೇಡ ಎಂದು ಹೇಳಿರುವುದರಿಂದ ಹೆಸರನ್ನು ಹಾಕುವ ಅಗತ್ಯವಿಲ್ಲ. ಶಿಷ್ಟಾಚಾರದ ಪಾಲನೆಗಾಗಿ ನನ್ನ ಹೆಸರನ್ನು ಯಾವುದೇ ಕಾರಣಕ್ಕೂ ಹಾಕುವುದು ಬೇಡ. ಕಳೆದ ಬಾರಿಯೂ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ತನ್ನ ಹೆಸರನ್ನು ಹಾಕುವುದು ಬೇಡ ಎಂದು ಸೂಚಿಸಿದ್ದೆ ಎಂದಿದ್ದಾರಂತೆ.

ಇದನ್ನೂ ಓದಿ:

ಟಿಪ್ಪು ಜಯಂತಿಗೆ ನನ್ನನ್ನು ಆಹ್ವಾನಿಸದಿರಿ ಎಂಬ ಮನವಿ: ಟಿಪ್ಪು ಸುಲ್ತಾನ್ ಕ್ರೂರ ಕೊಲೆಗಾರ, ಮತಾಂಧ, ಸಾಮೂಹಿಕ ಅತ್ಯಾಚಾರಿ ಎಂದು ಜರಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಗಡೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group