ವರದಿಗಾರ: ಅಯೋಧ್ಯೆಯಲ್ಲಿ ಬುಧವಾರ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಅಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮಗಳಿಗಾಗಿ ಸಾರ್ವಜನಿಕರ ಹಣ ವ್ಯರ್ಥಗೊಳಿಸಲಾಗುತ್ತಿದೆ ಹಾಗೂ ಒಂದು ಸಮೂಹವನ್ನು ಯೋಗಿ ಆದಿತ್ಯನಾಥ್ ಓಲೈಸುತ್ತಿರುವುದಾಗಿ ಮತ್ತು ಅವರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಟೀಕೆಗೆ ಪ್ರತಿಕ್ರಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನನ್ನ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ದೇವಾಲಯದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ವೈಯಕ್ತಿಕ ನಂಬಿಕೆ. ವಿರೋಧ ಪಕ್ಷಗಳು ಹೇಗೆ ಇದರಲ್ಲಿ ಮೂಗು ತೂರಿಸುತ್ತವೆ ಎಂದು ವಿರೋಧ ಪಕ್ಷಗಳನ್ನು ಪ್ರಶ್ನಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಇಲ್ಲಿನ ಪ್ರತಿಯೊಂದು ಪ್ರದೇಶವನ್ನೂ ಅಭಿವೃದ್ಧಿಪಡಿಸುವುದು ನನ್ನ ಕರ್ತವ್ಯ. ಅದಕ್ಕೆ ಬದ್ಧನಾಗಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ.
