ರಾಷ್ಟ್ರೀಯ ಸುದ್ದಿ

ಆರೆಸ್ಸೆಸ್ ನಾಯಕನ ಹತ್ಯೆಯನ್ನು ಖಂಡಿಸಿದ ರಾಹುಲ್ ಗಾಂಧಿ

ಪಂಜಾಬಿನ ಲುಧಿಯಾನದಲ್ಲಿ ನಿನ್ನೆ ನಡೆದ ಆರೆಸ್ಸೆಸ್ ನಾಯಕನ ಕೊಲೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಆರೆಸ್ಸೆಸಿನ ಲುಧಿಯಾನದ ರಘುನಾಥ ನಗರ ಮೋಹನ್ ಶಾಖೆಯ ಮುಖ್ಯಸ್ಥರೂ, ಮುಖ್ಯ ಶಿಕ್ಷಕರೂ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರೂ ಆಗಿದ್ದ ರವೀಂದ್ರ ಗೋಸಾಯಿಯವರು ನಿನ್ನೆ ಬೆಳಿಗ್ಗೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್ ನಾಯಕ ರವೀಂದ್ರ ಗೋಸಾಯಿಯವರ ಹತ್ಯೆಯನ್ನು ತಾನು ಬಲವಾಗಿ ಖಂಡಿಸುತ್ತೇನೆಂದು ಅವರು ಟ್ವೀಟ್ ಮಾಡಿದ್ದಾರೆ. ಹಿಂಸೆಯು ಸ್ವೀಕಾರಾರ್ಹವಲ್ಲ ಹಾಗೂ ಅಪರಾಧಿಗಳು ಶಿಕ್ಷಿಸಲ್ಪಡಬೇಕೆಂದೂ ತನ್ನ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಸೈದ್ಧಾಂತಿಕ ವಿರೋಧವಿದ್ದರೂ ಆರೆಸ್ಸೆಸ್ ನಾಯಕನೊಬ್ಬನ ಹತ್ಯೆಯನ್ನು ಖಂಡಿಸಿ ಯಾವುದೇ ರೀತಿಯ ಹಿಂಸೆಯೂ ಸ್ವೀಕಾರಾರ್ಹವಲ್ಲ ಎಂದು ವ್ಯಕ್ತಪಡಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ವ್ಯಾಪಕ ಪ್ರಶಂಸೆಗೊಳಗಾಗಿದ್ದಾರೆ. ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ದೇಶದ ಹಲವು ಕಡೆಗಳಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಆರೆಸ್ಸೆಸ್ ಕಾರ್ಯಕರ್ತರು ದೂರು ದಾಖಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group