ರಾಷ್ಟ್ರೀಯ ಸುದ್ದಿ

ಸಿಪಿಎಂ ಕಾರ್ಯಕರ್ತರ ಕಣ್ಣು ಕೀಳುತ್ತೇವೆ ಎಂದ ಬಿಜೆಪಿ ಸಂಸದೆ: ಬೆದರಿಕೆಗೆ ಹೆದರುವುದಿಲ್ಲವೆಂದ ಕೇರಳಿಗರು

ವರದಿಗಾರ: ಕೇರಳದ ಸಿಪಿಎಂ ಕಾರ್ಯಕರ್ತರ ಕಣ್ಣುಗುಡ್ಡೆಗಳನ್ನು ಕೀಳುತ್ತೇವೆ ಎಂದು ಬಿಜೆಪಿ ಸಂಸದೆ ಸರೋಜ್ ಪಾಂಡೆ ಬೆದರಿಕೆಯನ್ನು ಒಡ್ಡಿದ್ದಾರೆ. ಆದರೆ ಈ ಬೆದರಿಕೆಗೆ ಕೇರಳದ ಜನತೆ ಟ್ವಿಟರ್‌ನಲ್ಲಿ ಸರೋಜ್ ಅವರನ್ನು ಲೇವಡಿ ಮಾಡುವ ಮೂಲಕ ಪ್ರತಿಭಟಿಸುದ್ದಾರೆ.

ಅವರು ಕೇರಳದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆಗಳನ್ನು ಖಂಡಿಸಿ ಬಿಜೆಪಿ ಆಯೋಜಿಸಿದ್ದ ‘ಜನರಕ್ಷಾ ಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ನಾವು ಜನರಕ್ಷಾ ಯಾತ್ರೆಯನ್ನು ಆರಂಭಿಸಿರುವುದು, ಇನ್ನು ಮುಂದೆ ಸಿಪಿಎಂ ಕಾರ್ಯಕರ್ತರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಕೆಕ್ಕರಿಸಿ ನೋಡಿದರೆ ಸಿಪಿಎಂ ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಅವರ ಕಣ್ಣುಗುಡ್ಡೆಗಳನ್ನು ಕಿತ್ತು ಹಾಕಲು ಎಂದು ಜನರಕ್ಷಾ ಯಾತ್ರೆಯ ಹಿಂದಿರುವ ಅಜೆಂಡಾವನ್ನು ಸ್ಪಷ್ಟ ಪಡಿಸಿದ್ದರು.

ಜನರಕ್ಷಾ ಯಾತ್ರೆಯ ಸಮಾರೋಪದಲ್ಲಿ ಬಿಜೆಪಿ ಸಂಸದೆ ನೀಡುರುವ ಬೆದರಿಕೆಯನ್ನು ಕೇರಳಿಗರು ಸಾಮಾಜಿಕ ತಾಣವಾದ ಟ್ವಿಟ್ಟರ್ ಸ್ವೀಕರಿಸಿದ್ದು, ನಿಮ್ಮ ಬೆದರಿಕೆಗೆ ಕೇರಳಿಗರು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಅದಲ್ಲದೆ ಟ್ವಿಟರ್‌ನಲ್ಲಿ #GougeDa ಎಂಬ ಹ್ಯಾಷ್‌ಟ್ಯಾಗ್ ಆರಂಭಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group