ಅನಿವಾಸಿ ಕನ್ನಡಿಗರ ವಿಶೇಷ

ಮಕ್ಕಾ-ಕೆಸಿಎಫ್ ವತಿಯಿಂದ ಸ್ವಾತಂತ್ರ್ಯ ಆಚರಣೆ

ವರದಿಗಾರ-ಮಕ್ಕತುಲ್ ಮುಕರ್ರಮ: ಭಾರತದ 71ನೇ ಸ್ವಾತಂತ್ರೋತ್ಸವನ್ನು ಕನಾ೯ಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಭಾರತದ ಹಜ್ಜಾಜಿಗಳೊಂದಿಗೆ ಮಕ್ಕಾದಲ್ಲಿ ಆಚರಿಸಿತು.

ಧ್ವಜಾರೋಹಣ ವೇಳೆ ಕೆಸಿಎಫ್ ಕಾರ್ಯಕರ್ತರು ಭಾರತ ರಾಷ್ಟ್ರ ಗೀತೆ ಹಾಡಿದರು. ಈ ವೇಳೆ ಮಾತನಾಡಿದ ದಾರುಲ್ ಇರ್ಶಾದ್ ಎಜುಕೇಶನ್ ಮಾಣಿ ಇದರ ಆರ್ಗನೈಸರ್ ಉಮ್ಮರ್ ಸಖಾಫೀ ಪರಪ್ಪು ಮಾತನಾಡಿ ಭಾರತ ಸ್ವಾತಂತ್ರ್ಯಕ್ಕಾಗಿ ಮಡಿದ ಮಹಾತ್ಮರನ್ನು ನೆನೆದು ಗೌರವ ಸಲ್ಲಿಸಿದರು. ಭಾರತೀಯರಾದ ನಾವು ಜಾತಿ, ಮತ, ಬೇಧ ಭಾವವನ್ನು ಮೆರೆತು ಐಕ್ಯತೆಯ ಭಾರತವನ್ನು ಕಟ್ಟುವಂತೆ ಕರೆ ನೀಡಿದರು. ಕೆಸಿಎಫ್ ಮುಖಂಡ ಅಬ್ಬಾಸ್ ಹಾಜಿ ಎಲಿಮಲೆ ಮಾತಾನಾಡಿ ನಾವು ವಿದೇಶದಲ್ಲಿದ್ದರೂ, ನಮ್ಮ ದೇಶದ ಮೇಲಿರುವ ದೇಶಪ್ರೇಮ ಅಪಾರ  ಎಂದರು.ಜಿದ್ದಾ ಝೋನಲ್ ಪ್ರಧಾನ ಕಾಯ೯ದಶಿ೯ ಇಬ್ರಾಹಿಂ ಕಿನ್ಯ ಅನಿವಾಸಿ ಭಾರತೀಯರಿಗೆ ಸ್ವಾತಂತ್ರ್ಯ ಶುಭಶಾಯಗಳನ್ನು ತಿಳಿಸುವ ಮೂಲಕ ಕಾಯ೯ಕ್ರಮಕ್ಕೆ ಶುಭ ಹಾರೈಸಿದರು. ಮಂಗಳೂರು ಈದ್ಗಾ ಜುಮಾ ಮಸ್ಜಿದ್ ಖತೀಬರಾದ ಸ್ವದಕತ್ತುಲ್ಲಾ ಮುಸ್ಲಿಯಾರ್ ಧ್ವಜಾಹರೋಹಣ ನೆರವೇರಿಸಿದರು.

ಕಾಯ೯ಕ್ರಮಕ್ಕೆ ಆಗಮಿಸಿದ ಹಜ್ಜಾಜಿಗಳಿಗೆ ಪಾನೀಯ ಹಾಗೂ ಸಿಹಿತಿಂಡಿ ಹಂಚಲಾಯಿತು. ವೇದಿಕೆಯಲ್ಲಿ ಹೆಚ್.ವಿ.ಸಿ ಕೋ -ಆಡಿ೯ನೇಟರ್ ಮೂಸಾ ಹಾಜಿ ಕಿನ್ಯಾ, ಕೆಸಿಎಫ್ ಮಕ್ಕತ್ತುಲ್ ಮುಕರ್ರಮ ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್ ಉಪಸ್ಥಿತರಿದ್ದರು.ಹನೀಫ್ ಸಖಾಫೀ ಬೋಳ್ಮಾರ್ ಸ್ವಾಗತಿಸಿ, ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್  ಪ್ರ. ಕಾಯ೯ದಶಿ೯ ಕಲಂದರ್ ಶಾಫೀ ಅಸೈಗೋಳಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group