ವರದಿಗಾರ: ಶಿವ ದೇಗುಲವನ್ನು ಧ್ವಂಸ ಮಾಡಿ ತಾಜ್ ಮಹಲ್ ನ್ನು ಶಹಜಹಾನ್ ಕಟ್ಟಿದ್ದಾರೆ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿಯ ಸಂಸದ ವಿನಯ್ ಕಟಿಯಾರ್ ರಾಷ್ಟ್ರೀಯ ಸುದ್ದಿ ವಾಹಿನಿಯೊಂದಿಗೆ ಹೇಳಿಕೊಂಡಿದ್ದಾರೆ.
ತಾಜ್ ಮಹಲ್, ತೇಜೋ ಮಹಲ್ ಎಂಬ ಹಿಂದೂ ದೇಗುಲವಾಗಿತ್ತು.ಅದನ್ನು ಧ್ವಂಸ ಮಾಡಿ ಶಹಜಹಾನ್ ಕಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅದಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಜ್ ಮಹಲ್ ಗೆ ಭೇಟಿ ನೀಡಲು ಬಯಸಿರುವುದು ಸರಿಯಾದ ಕ್ರಮವೆಂದ ಅವರು, ತಾಜ್ ಮಹಲ್ ನ್ನು ನಾಶ ಮಾಡಬೇಕೆಂದು ನಾನು ಹೇಳುವುದಿಲ್ಲ. ಆದರೆ ಹಿಂದೂ ದೇಗುವಿತ್ತು ಎಂಬುವುದು ವಾಸ್ತವ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ತಾಜ್ ಮಹಲ್ ಬಗ್ಗೆ ಹೇಳಿಕೆ ನೀಡಿ ವಿವಾದದ ಕೇಂದ್ರ ಬಿಂದುವಾಗಿದ್ದ ಬಿಜೆಪಿ ಸಂಸದ ಸಂಗೀತ್ ಸೋಮ್ ದೇಶದ ಸಂಸ್ಕೃತಿಯಲ್ಲಿ ತಾಜ್ ಮಹಲ್ ಕಪ್ಪು ಚುಕ್ಕೆ ಎಂದು ಹೇಳಿರುವುದರ ಕೆಲವೇ ದಿನಗಳ ಬಳಿಕ ಮತ್ತೊಂದು ವಿವಾದಿತ ಹೇಳಿಕೆ ಬಂದಿದೆ.
