ವರದಿಗಾರ: ಪಂಜಾಬ್ನ ಲೂಧಿಯಾನದಲ್ಲಿನ ಕೈಲಾಶ್ ನಗರದಲ್ಲಿ ಇಂದು ಬೆಳಿಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ನಾಯಕ ರವೀಂದ್ರ ಗೋಸಾಯಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಗೋಸಾಯಿಯವರು ಬೆಳಗ್ಗೆ 7.20ಕ್ಕೆ ಶಾಖೆಯಿಂದ ಬಂದು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಮತ್ತು ತನ್ನ ಸಾಕು ನಾಯಿಯೊಂದಿಗೆ ಮನೆಯಿಂದ ಹೊರಗೆ ನಿಂತಿದ್ದಾಗ, ಇಬ್ಬರು ಆಗಂತುಕರು ಅವರ ಕುತ್ತಿಗೆಗೆ ಮತ್ತು ಬೆನ್ನ ಹಿಂಬಾಗಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಲೂಧಿಯಾನ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸ್ಥಳದಲ್ಲೇ ಗೋಸಾಯಿ ಮೃತಪಟ್ಟಿದ್ದಾರೆ.
ದುಖಃತಪ್ತ ಕುಟುಂಬ
ರವೀಂದ್ರ ಗೋಸಾಯಿಯವರು ಲೂಧಿಯಾನದ ರಘುನಾಥ ನಗರ ಮೋಹನ್ ಶಾಖೆಯ ಮುಖ್ಯಸ್ಥರಾಗಿದ್ದರು. ಮಾತ್ರವಲ್ಲ ಶಾಖೆಯ ಮುಖ್ಯ ಶಿಕ್ಷಕರಾಗಿದ್ದರು. ಅವರು ಲೂಧಿಯಾನ ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಹಂತಕರು ಬೆಳಗ್ಗಿನಿಂದಲೇ ಗೋಸಾಯಿಯವರ ಮನೆಯ ಸುತ್ತಮುತ್ತ ತಿರುಗಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ದೊರೆತಿದೆ.
ಹಂತಕರ ಸಿಸಿಟಿವಿ ದೃಶ್ಯಗಳು
ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
