ರಾಜ್ಯ ಸುದ್ದಿ

ಗೌರಿ ಲಂಕೇಶ್‌ ಹತ್ಯೆ: ಶಂಕಿತ ಹಂತಕರ ರೇಖಾಚಿತ್ರಕ್ಕೂ ಬಿಜೆಪಿ ಶಾಸಕನ ಆಪ್ತ ಸಹಾಯಕನಿಗೂ ಸಾಮತ್ಯೆ?

ವರದಿಗಾರ: ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ರವರ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಇಬ್ಬರು ಶಂಕಿತ ಹಂತಕರ ಮೂರು ರೇಖಾಚಿತ್ರವನ್ನು ಶನಿವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಹಣೆ ಮೇಲೆ ತಿಲಕವಿಟ್ಟಿರುವ ಹಂತಕನಿಗೂ ಬಿಜೆಪಿಯ ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಅವರ ಆಪ್ತ ಸಹಾಯಕ ಪ್ರಭಾಕರ್‌ ಅವರ ಭಾವಚಿತ್ರಕ್ಕೂ ಹೋಲಿಕೆ ಇದೆ ಎಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸುರೇಶ್‌ಗೌಡ ಅವರ ಆಪ್ತ ಸಹಾಯಕ ಪ್ರಭಾಕರ್‌ ಘಟನೆ ಸಂಬಂಧಿಸಿದಂತೆ ನನಗೆ ಅನೇಕರಿಂದ ದೂರವಾಣಿ ಕರೆಗಳು ಬರುತ್ತಿವೆ. ಗೌರಿ ಲಂಕೇಶ್‌ ಹತ್ಯೆ ಹಂತಕರಿಗೂ ನನಗೂ ಯಾವುದೆ ಸಾಮತ್ಯೆ ಇಲ್ಲ ಎಂದು ಹೇಳಿಕೊಂಡಿದ್ದಾರೆ ಜತೆಗೆ, ಪ್ರಕರಣಕ್ಕೂ ನನಗೂ  ಸಂಬಂಧವಿಲ್ಲ. ಇದು ನನ್ನ ವಿರುದ್ಧ ತೇಜೋವಧೆಗೆ ಮಾಡಿರುವ ಪಿತೂರಿಯಾಗಿದೆ ಎಂದು ಪ್ರಭಾಕರ ಮ್ಯಾಸನಾಯಕ ಅವರು ಹೇಳಿಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group