ವರದಿಗಾರ: ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರ ನಡವಳಿಕೆಯಿಂದ ಬೇಸತ್ತ ಚೆನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಚೆನ್ನಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಅದಲ್ಲದೆ ಮುಂದಿನ ನಿರ್ಧಾರವನ್ನು ಅಕ್ಟೋಬರ್ 22ರಂದು ತೀರ್ಮಾನಿಸುವುದಾಗಿ ಇದೇ ಸಂದರ್ಭ ಅವರು ತಿಳಿಸಿದ್ದಾರೆ.
ಹಿಂದೆ ಕಾಂಗ್ರೆಸ್ ನಿಂದ ಟಿಕೆಟ್ ವಂಚಿತನಾಗಲು ಕಾಂಗ್ರೆಸ್ ನಾಯಕ, ಸಚಿವ ಡಿ.ಕೆ.ಶಿವಕುಮಾರ್ ಕಾರಣವೆಂದು ಶಾಸಕ ಸಿ.ಪಿ. ಯೋಗೇಶ್ವರ್ ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿದ್ದು, ಕಾಂಗ್ರೆಸ್ ನ ಒಂದೊಂದೇ ವಿಕೆಟ್ ಗಳ ಪತನವಾಗುತ್ತಿರುವುದು ಬಿಜೆಪಿಗೆ ವರವಾಗಲಿದೆ ಎಂದು ರಾಜಕೀಯ ವಿಮರ್ಶಕರು ಹೇಳಿಕೊಳ್ಳಲು ಪ್ರಾರಂಭಿಸಿದ್ದಾರೆ
