ವರದಿಗಾರ: ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಶಂಕಿತ ಆರೋಪಿಗಳ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ.
ಹತ್ಯೆ ಕುರಿತ ಮಹತ್ವದ ಸುಳಿವಾಗಿ ರೇಖಾಚಿತ್ರಗಳನ್ನು ಪರಿಗಣಿಸಲಾಗಿದ್ದು, ಎಸ್ಐಟಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಮೂವರು ಶಂಕಿತ ಆರೋಪಿಗಳ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಲ್ಲಿ ಈ ರೇಖಾಚಿತ್ರಗಳಲ್ಲಿರುವ ಮತ್ತು ವಿಡಿಯೋದಲ್ಲಿರುವ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಅನುಮಾನವಿದ್ದು, ಇವರ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ಕೂಡಲೇ ವಿಶೇಷ ತನಿಖಾ ತಂಡ, ಸಿ.ಐ.ಡಿ., ಬೆಂಗಳೂರು, ಇವರಿಗೆ ಅಥವಾ ಮೊಬೈಲ್ ಸಂಖ್ಯೆ 9480800202 ನಂಬರಿಗೆ ಅಥವಾ sit.glankesh@ksp.gov.in ಗೆ ಮಾಹಿತಿ ನೀಡಲು ಕೋರಿದೆ. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಮತ್ತು ಸರಕಾರ ನಿಗದಿಪಡಿಸಿರುವ ಬಹುಮಾನವನ್ನು ನೀಡಲಾಗುವುದು.
