ವರದಿಗಾರ: ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಷನ್ ಮಂಚಿ ಕೆಯ್ಯೂರು ಇದರ ಪಂಚ ವಾರ್ಷಿಕೋತ್ಸವದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಇತ್ತೀಚೆಗೆ ಲಯನ್ಸ್ ಕ್ಲಬ್ ಮಂಚಿಕಟ್ಟೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಷನ್ ಅಧ್ಯಕ್ಷರಾದ ಡಿ.ಎನ್. ಫಾರೂಕ್ ರವರ ಅಧ್ಯಕ್ಷತೆಯಲ್ಲಿ, ಕೊಳ್ನಾಡು ಮಸೀದಿಯ ಖತೀಬರಾದ ಸಾಲಿಂ ಸಅದಿ ಅಲ್ ಅಫ್ಳಲಿ ಮಂಚಿ ಉದ್ಘಾಟಿಸಿದರು.
SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಪ್ರಾಸ್ತಾವಿಕ ಭಾಷಣ ಮಾಡಿ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು.
ರಕ್ತದಾನ ಶಿಬಿರದಲ್ಲಿ 43 ಜನರು ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಬ್ಲಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಲಯನ್ಸ್ ರೇಮಂಡ್ ರೊಝಾರಿಯೋ,ಲಯನ್ ಗೋಪಾಲ್ ಆಚಾರ್ಯ,ಎಂ.ಡಿ ಮಂಚಿ, ಕುಮಾರ್ ಕೆಯ್ಯೂರು, ಬದ್ರುದ್ದೀನ್ ಕಯ್ಯೂರು,ಮುಹಮ್ಮದ್ ಮಂಚಿ,ಇಬ್ರಾಹಿಂ , ಆಸಿಫ್ , ಹನೀಫ್ ಮಂಚಿ,ಎ.ಕೆ. ಸುಲೈಮಾನ್, ಗಫ್ಫಾರ್ ಕುಕ್ಕಾಜೆ ಹಾಗು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಅಡ್ಮೀನ್ ಗಳಾದ ಮುಸ್ತಫ ಅಡ್ಡೂರು,ಸತ್ತಾರ್ ಕ್ರಷ್ಣಾಪುರ, ಅಶ್ರಫ್ ಕಲ್ಕಟ್ಟ ಕಾರ್ಯಕಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಶ್ರಫ್ ಮಂಚಿ ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಷನ್ ಪರವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಿದರು.ಅಲ್ಲದೇ ರಕ್ತ ಪೂರೈಸುವಲ್ಲಿ ತನ್ನ ನಿಸ್ವಾರ್ಥ ಸೇವೆಗಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಅಡ್ಮಿನ್ ಫೈಝಲ್ ಮಂಚಿ ಇವರನ್ನು ಅಸೋಸಿಯೇಷನ್ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯಶಸ್ವಿಗಾಗಿ ದುಡಿದ ಸರ್ವರಿಗೂ ಸಂಘಟಕರು ಪ್ರಕಟಣೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
