ವರದಿಗಾರ: ಬಿಜೆಪಿಯು ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಅವರು ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಅಮೇಠಿಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು.
‘ಮೂರು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಏನು ಮಾಡಿದೆ’ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆಗೆ ಅಮಿತ್ ಷಾ ಪ್ರತಿಕ್ರಿಯಿಸುತ್ತಾ , ಪಕ್ಷವು ಈ ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ನೀಡಿದೆ ಎಂದು ಹೇಳಿದ್ದಾರೆ. ನೀವು ನಮ್ಮ ಮೂರು ವರ್ಷಗಳ ಲೆಕ್ಕವನ್ನು ಕೇಳುತ್ತಿದ್ದೀರಿ. ಆದರೆ, ಅಮೇಠಿಯ ಜನ ನಿಮ್ಮ ಮೂರು ಪೀಳಿಗೆ ಮಾಡಿದ ಕೆಲಸವನ್ನು ಲೆಕ್ಕ ಹಾಕುತ್ತಿದ್ದಾರೆ
ಅದಲ್ಲದೆ ಗುಜರಾತ್ನ ಅಭಿವೃದ್ಧಿಯ ಬಗ್ಗೆ ವ್ಯಂಗ್ಯವಾಡಿರುವ ರಾಹುಲ್ ಗಾಂಧಿ ವಿರುದ್ಧ ಹಾರಿಹಾಯ್ದಿರುವ ಷಾ, ಅಮೇಠಿ ಜನತೆಗೆ ನೆಹರು ಕುಟುಂಬದ ಮೂರು ತಲೆಮಾರು ಏನು ಮಾಡಿದೆ ಎಂದು ತಿರುಗಿ ಪ್ರಶ್ನಿಸಿದ್ದಾರೆ.
