ವರದಿಗಾರ : ಝೀ ಟಿವಿಯ ಮಾಲಕ ಶುಭಾಶ್ ಚಂದ್ರ ಬಿಜೆಪಿಯಿಂದ ರಾಜ್ಯಸಭಾ ಸದಸ್ಯನಾಗಿರುವಾಗ ಅದು ತನ್ನನ್ನು ಯಾರಿಗೆ ಮಾರಲ್ಪಟ್ಟಿದೆ ಎಂಬ ಸಂಶಯ ಜನರಿಗೆ ಖಂಡಿತಾ ಇಲ್ಲ. ಹೀಗಿರುವಾಗ ಅದು ತನ್ನೆಲ್ಲಾ ವರದಿಗಳಲ್ಲಿ ಬಿಜೆಪಿ ಮತ್ತದರ ನಾಯಕರಿಗೆ ಬೇಕಾದ ರೀತಿಯಲ್ಲಿ ಬಿತ್ತರಿಸುತ್ತದೆ. ಅದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರ ಮಗ ಜಯ್ ಶಾರ ಕಂಪನಿಯ ವಹಿವಾಟಿನಲ್ಲಿ ಅನಾಮತ್ ಏರಿಕೆಯ ವಿರುದ್ಧ ಎಲ್ಲೂ ವರದಿ ಪ್ರಕಟಿಸದೆ ಮೌನ ವಹಿಸಿತ್ತು. ನಿನ್ನೆ ಗುಜರಾತಿನ ಆನಂದ್ ಜಿಲ್ಲೆಯ ಅಕ್ಲಾವ್ ಎಂಬಲ್ಲಿ ಚುನಾವಣಾ ಪ್ರಚಾರ ನಿಮಿತ್ತದ ರೋಡ್ ಶೋ ನಡೆಸುತ್ತಿದ್ದ ರಾಹುಲ್ ಗಾಂಧಿಯವರಲ್ಲಿ ಈ ಕುರಿತು ಪ್ರಶ್ನೆ ಕೇಳಿದ ಝೀ ಟಿವಿಯ ಪತ್ರಕರ್ತನನ್ನು ಮತ್ತು ಸ್ವಾಮಿ ನಿಷ್ಟೆ ತೋರಿಸುತ್ತಿರುವ ಝೀ ಟಿವಿ ಎರಡನ್ನೂ ಒಂದೇ ಏಟಿನಲ್ಲಿ ತನ್ನ ಮಾತಿನ ಚಾಟಿ ಬೀಸಿ ಆ ಪತ್ರಕರ್ತನ ಬೆವರಿಳಿಸಿದ್ದಾರೆ.
ಆ ಮಾತುಕತೆ ಹೀಗಿದೆ:
ಇವತ್ತು ನನ್ನ ಮಿತ್ರ ಬಹಳ ಉತ್ತಮವಾದ ಒಂದು ಪ್ರಶ್ನೆ ಕೇಳಿದ್ದಾರೆ. ಅವರು ಬಹಳ ‘ಧೈರ್ಯವಂತ’ ಕೂಡಾ. ಅವರು ಮೋದಿಗೂ ಹೆದರಲ್ಲ, ಅಮಿತ್ ಶಾಗೂ ಹೆದರಲ್ಲ. ತಮ್ಮ ಹೆಸರೇನು?
ಅದಕ್ಕೆ ಉತ್ತರಿಸುವ ಬದಲು ಪತ್ರಕರ್ತ, ಅಲ್ಲ ಸರ್ ನಾನು ನಿಮ್ಮನ್ನು ಪ್ರಶ್ನೆ ಕೇಳಿದ್ದೆಂದು ಹೇಳಿದಾಗ, ನೀವು ಹೆದರಬೇಡಿ ತಮ್ಮ ಹೆಸರು ಹೇಳಿ ಎಂದು ಮರು ಪ್ರಶ್ನಿಸುತ್ತಾರೆ. ಆಗ ಆತ ನನ್ನ ಹೆಸರು ಗೌರವ್ ಪಟೇಲ್ ಎನ್ನುತ್ತಾನೆ. ಈಗ ತಮ್ಮ ಪ್ರಶ್ನೆ ಕೇಳಿ ಎಂದು ರಾಹುಲ್ ಹೇಳಿದಾಗ ಪತ್ರಕರ್ತ, ಅಮಿತ್ ಶಾರವರ ಮಗನ ವಹಿವಾಟಿನ ಬಗ್ಗೆ ತಾವೇನು ಹೇಳ್ತೀರಾ ಎಂದು ಕೇಳಿದಾಗ ರಾಹುಲ್ ಗಾಂಧಿ ಅದೇ ಪ್ರಶ್ನೆಯನ್ನು ಪತ್ರಕರ್ತನಲ್ಲೇ ಮರು ಪ್ರಶ್ನಿಸಿ, ತಾವೂ ಕೂಡಾ ಓರ್ವ ಪತ್ರಕರ್ತ ತಾವೇನು ಹೇಳ್ತೀರಾ, ತಮ್ಮ ಅಭಿಪ್ರಾಯವೇನೆಂದು ಕೇಳುತ್ತಾರೆ? ಪೇಚಿಗೀಡಾದ ಪತ್ರಕರ್ತ ಸುಮ್ಮನಿದ್ದುಬಿಡುತ್ತಾನೆ. ಮಾತು ಮುಂದುವರಿಸಿದ ರಾಹುಲ್ ಗಾಂಧಿ, ಕೇವಲ ಒಂದು ವರ್ಷದ ಅವಧಿಯೊಳಗಡೆ 80 ಕೋಟಿಯ ಏರಿಕೆಯಾಗಿರುವ ವಹಿವಾಟು ಯಾವ ರೀತಿಯದ್ದೆಂದು ಇಡೀ ಗುಜರಾತ್ ಮಾತ್ರವಲ್ಲ ಭಾರತೀಯರಿಗೆ ಗೊತ್ತೆಂದು ಹೇಳುತ್ತಾ, ಮತ್ತೊಮ್ಮೆ ಪತ್ರಕರ್ತನನ್ನು, ನೀವೊಬ್ಬ ಧೈರ್ಯವಂತ ಪತ್ರಕರ್ತ, ನಾನು ಮೆಚ್ಚಿದೆ ಎಂದು ಮಾರ್ಮಿಕವಾಗಿ ಉತ್ತರಿಸಿ ಮುಂದೆ ಸಾಗುತ್ತಾರೆ.
ಒಟ್ಟಿನಲ್ಲಿ ಹಿಂದೆಲ್ಲಾ ಸಿಗುವ ಎಲ್ಲಾ ಅವಕಾಶಗಳನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಕೀಳಾಗಿ ಚಿತ್ರಿಸಲು ಪ್ರಯತ್ನಿಸುತ್ತಿದ್ದ ಕೆಲವೊಂದು ಟಿವಿ ಪತ್ರಕರ್ತರಿಗೆ ರಾಹುಲ್ ಈಗ ತನ್ನ ಮಾತಿನ ಮೂಲಕಾನೇ ಚಾಟಿ ಬೀಸಲಾರಂಭಿಸಿದ್ದಾರೆ. ಅವರ ಭಾಷಣ ಶೈಲಿಗಳೂ ಬದಲಾಗಿರುವ ‘ಹೊಸ’ ರಾಹುಲ್ ಗಾಂಧಿಯನ್ನು ಪರಿಚಯಿಸುತ್ತಿದೆ.
ವೀಡಿಯೋ ವೀಕ್ಷಿಸಿ
