ವರದಿಗಾರ-ಬೆಳ್ಳಾರೆ: ಅನ್ನ ದಾನಂ ಪರಂ ದಾನಂ ಎಂಬುದು ಅತ್ಯಂತ ಪ್ರಾಚೀನವಾದ ಭಾರತೀಯ ಉಕ್ತಿ.ದೇವಾಲಯಗಳಂಥಹ ಶ್ರದ್ದಾ ಕೇಂದ್ರಗಳಲ್ಲಿ ಅನ್ನದಾನ ಸೇವೆ ಅಂದಿನಿಂದಲೂ ನಡೆದು ಕ್ಕೊಂಡು ಬಂದಿದೆ.
ನೆರೆಮನೆಯವರು ಹಸಿದಿರುವಾಗ ಉನ್ನುವವನು ನನ್ನವನಲ್ಲ ಎಂದು ಲೋಕ ಪ್ರವಾದಿಯವರ ಮಾತಿನ ಚರ್ಯೆಯನ್ನು ಅನುಸರಿಸಿಕೊಂಡು ಬದುಕುತ್ತಿರುವ ಸಮುದಾಯ ಇಂದು ಅನ್ನದಾನಕ್ಕೆ ಮುಂದಾಗಿದ್ದು ಮಹಾ ಕಾರ್ಯವೇ ಸರಿ.
ಪ್ರತೀ ಶುಕ್ರವಾರ ಜುಮಾ ನಮಾಝ್ ನೆರವೇರಿಸಿದ ನಂತರ ಶ್ರೀಮಂತ, ಬಡವ ಎಂಬ ಭೇದಬಾವ ತೋರದೆ ಜುಮಾ ನಮಾಝ್ ಬಳಿಕ ಪ್ರಾರ್ಥನೆಗೆ ಆಗಮಿಸಿದ ದೀನಿ ಸ್ನೇಹಿಗಳಿಗೆ ಅನ್ನ ದಾನವನ್ನು ಏರ್ಪಡಿಸುವ ಮೂಲಕ ಇತರ ಮಸೀದಿಗಳಿಗೆ ಮಾದರಿ ಎನಿಸಿದೆ.
ಜಮಾಅತಿನ ಉಧಾರ ದಾನಿಗಳ ಸಹಾಯದಿಂದ ನೆರವೇರುವ ಈ ಬೃಹತ್ ಅನ್ನದಾನವನ್ನು ಜಮಾತಿನ ಅಧ್ಯಕ್ಷ ಕೆ.ಎಂ ಮಹಮ್ಮದ್ ಹಾಜಿಯವರ ದಿವ್ಯ ಹಸ್ತದಿಂದ ಅನ್ನದಾನ ಮಹಾದಾನ ಎಂಬ ವೇಧ ವಾಕ್ಯದೊಂದಿಗೆ ಅನ್ನವನ್ನು ಬಡಿಸುವ ಮೂಲಕ ಚಾಲನೆ ನೀಡಿದ್ದಾರೆ.. ಜುಮಾ ನಮಾಝ್ ನೆರವೇರಿಸಲು ಆಗಮಿಸಿದ ಊರ ಮತ್ತು ಪರವೂರ ನೂರಾರು ದೀನಿ ಪ್ರೇಮಿಗಳಿಗೆ ಅನ್ನವನ್ನು ಬಡಿಸಲು ಜಮಾಅತಿನ ಉಪಾದ್ಯಕ್ಷರಾದ ಹಾಜಿ ಅಬೂಬಕ್ಕರ್ ಮಂಗಳ, ಬಶೀರ್ ಬಿ.ಎ. , ಹಾಜಿ ಕೆ ಮಮ್ಮಾಲಿ, ಅಬ್ದುಲ್ ಖಾದರ್ ಬಯಂಬಾಡಿ ಅಲ್ಲದೆ ಜಮಾಅತಿನ ಸರ್ವ ಸದಸ್ಯರು ಸಹಕರಿಸಿದರು.
ವರದಿ: ಅನ್ಸಾರ್ ಬೆಳ್ಳಾರೆ
