ವರದಿಗಾರ : ಹಲವು ಜನವಿರೋಧಿ ಉದ್ದಿಮೆ ನೀತಿಗಳಿಂದಾಗಿ ಪ್ರಧಾನಿ ಮೋದಿ ಬಡ ವ್ಯಾಪಾರಿಗಳನ್ನು ಅಕ್ಷರಶಃ ಬೀದಿಗೆ ತಳ್ಳಿದ್ದು, ಈಗೀಗ ಹಲವು ವಿಶಿಷ್ಟ ರೀತಿಯ ಪ್ರತಿಭಟನೆಗಳು ಒಂದೊಂದಾಗಿ ಹೊರ ಬರತೊಡಗಿವೆ. ಇದಕ್ಕೊಂದು ಉದಾಹರಣೆಯೆಂಬಂತೆ ನಿಪಾಯಿ ಎಂಬಲ್ಲಿನ ಬಟ್ಟೆ ವ್ಯಾಪಾರಿ ಸಂಘದವರು ನಗರದ ವಾಣಿಜ್ಯ ಕಟ್ಟಡವೊಂದಕ್ಕೆ ಬೃಹತ್ ಬ್ಯಾನರ್ ಒಂದನ್ನು ಹಾಕಿ ಅಲ್ಲಿ ಮೋದಿಯ ಜನವಿರೋಧಿ ಉದ್ಯಮ ನೀತಿಯ ವಿರುದ್ಧ ಕಿಡಿಕಾರಿ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ.
ಆ ಬ್ಯಾನರ್’ನಲ್ಲಿ “ಮೋದಿಯನ್ನು ಓಡಿಸಿ, ವ್ಯಾಪಾರವನ್ನು ಉಳಿಸಿ” ಎಂಬ ತಲೆಬರಹದಡಿಯಲ್ಲಿ ‘ಉದ್ಯೋಗ ಒಂದು ಅಕ್ರಮ ದಂಧೆಯಾಗಿದೆ, ವಿತ್ತ ಮಂತ್ರಿ ಜೇಟ್ಲಿ ಅಂಧರಾಗಿದ್ದಾರೆ, ಮೋದಿ ನಮಗೆ ನಾಚಿಕೆಯಾಗುತ್ತಿದೆ; ನೀವು ನಮ್ಮನ್ನು ಬಡಿಯುತ್ತಿದ್ದರೂ ನಾವಿನ್ನೂ ಜೀವಂತವಿದ್ದೇವೆ’ ಎಂದು ಬರೆದಿದ್ದಾರೆ. ಅಂದು ನಿಮಗೆ ನಾವು ಓಟು ಕೊಡದಿರುತ್ತಿದ್ದರೆ ಇಂದು ನಮ್ಮ ಹೊಟ್ಟೆಯ ಮೇಲೆ ಈ ರೀತಿ ಹೊಡೆಯಲು ಆಗುತ್ತಿರಲಿಲ್ಲವೆಂದು ಮಾರ್ಮಿಕವಾಗಿ ಬರೆದು ಎಲ್ಲರಿಗೂ ಕಾಣುವ ರೀತಿಯಲ್ಲಿ ನೇತು ಹಾಕಿಸಿದ್ದಾರೆ.
ಸಾಮಾಜಿಕ ತಾಣವಾದ ‘ಇಂಸ್ಟಾಗ್ರಾಂ’ನಲ್ಲಿ ರಿಯಲ್ ಇಂಡಿಯಾ ಎನ್ನುವ ಖಾತೆದಾರನೊಬ್ಬ ಈ ಫೋಟೋವನ್ನು ಅಪ್ಲೋಡ್ ಮಾಡಿದ್ದಾನೆ
