ವರದಿಗಾರ ಸಿಂದಗಿ : ಪಟ್ಣಣದ ಸಾಯಿ ನಗರದ ಸಾಯಿನಾಥ ಮಂದಿರದಲ್ಲಿ ಭಕ್ತರ ಬಂಧು ಸಾಯಿಬಾಬಾರವರ 6ನೇ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಸಾವಿರದ ಒಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 9 ಗಂಟೆಗೆ ಸಾಯಿನಾಥ ಆರತಿಯೊಂದಿಗೆ ಪ್ರಾರಂಭವಾಗದ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನದ ವರೆಗೂ ಸಾಗಿ ಬಂದಿತು. ಸಾಲಾಗಿ ಕುಳಿತ ಮುತ್ತೈದೆಯರಿಗೆ ಜಾತ್ರಾ ಸಮಿತಿಯ ಸದಸ್ಯೆಯರು ಹೂವು, ಬಳೆ, ಅರಿಷಿಣ ಕುಂಕುಮದ ಜೊತೆಗೆ ಸಾಯಿಬಾಬಾರ ಕಥಾ ಪುಸ್ತಕ ನೀಡಿ ಮಾಂಗಲ್ಯ ಭಾಗ್ಯ ಚಿರವಾಗಿರಲಿ, ಬಾಬಾರವರ ಆಶೀರ್ವಾದ ಸಿಗಲಿ ಎಂದು ಹಾರೈಸಿದರು. ಸಾವಿರಾರು ಬಾಬಾರವರ ಭಕ್ತಾಧಿಗಳಿಗೆ ಪುರಸಭೆ ಅಧ್ಯಕ್ಷ ಬಾದಷಾ ಸಾಬ ತಾಂಬೋಳಿ ಅನ್ನಪ್ರಸಾದ ಸೇವೆ ಕೈಗೊಂಡಿದ್ದರು. ಜಾತ್ರಾ ಮಹೋತ್ಸವ ಸಮೀತಿ ಸದಸ್ಯರು ಅವರನ್ನು ಸನ್ಮಾನಿಸಿದರು.
ತನ್ವೀರ ಬೈರಾಮಡಗಿ, ಪುಲಕೇಶಿ ಬಳೂತಿ, ಸಿದ್ದು, ರಫೀಕ ಅರಳಗುಂಡಗಿ, ಪ್ರಶಾಂತ ಕೆಂಭಾವಿ ಸೇರಿದಂತೆ ಸಾವಿರಾರು ಬಾಬಾರವರ ಭಕ್ತ ವರ್ಗದೊಂದಿಗೆ ಮತ್ತಿತರರು ಇದ್ದರು.
ವೀಡಿಯೋ ಮತ್ತು ವರದಿ : ರವಿಚಂದ್ರ ಮಲ್ಲೇದ್
