ರಾಷ್ಟ್ರೀಯ ಸುದ್ದಿ

ಗೂರ್ಖಾಲ್ಯಾಂಡ್ ವಂಚನೆ : ಬಂಗಾಳ ಬಿಜೆಪಿ ಅಧ್ಯಕ್ಷರಿಗೆ ಬಿತ್ತು ಸಾರ್ವಜನಿಕ ಗೂಸಾ; ವೀಡಿಯೋ ವೈರಲ್ !

ವರದಿಗಾರ : ಪಶ್ಚಿಮ ಬಂಗಾ ರಾಜ್ಯ ಬಿಜೆಪಿ ಅಧ್ಯಕ್ಷ  ದಿಲೀಪ್ ಘೋಷ್ ಮತ್ತವರ ಬೆಂಬಲಿಗರು ಡಾರ್ಜಿಲಿಂಗ್’ನಲ್ಲಿ ಪ್ರತ್ಯೇಕ ಗೂರ್ಖಾಲ್ಯಾಂಡ್’ಗಾಗಿ ಹೋರಾಟ ನಡೆಸುತ್ತಿರುವ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದಾರೆ.  ಗೂರ್ಖಾ ಜನಮುಕ್ತಿ ಮೋರ್ಚಾ (GJM ), ಜನ ಆಂದೋಲನ್ ಪಾರ್ಟಿ ಮತ್ತು ಗೂರ್ಖಾ ನ್ಯಾಶನಲ್ ಲಿಬರೇಶನ್ ಫ್ರಂಟ್’ನ (GNLF) ಕಾರ್ಯಕರ್ತರು, ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷರು ಸೇರಿದಂತೆ ಬಿಜೆಪಿ ಬೆಂಬಲಿಗರನ್ನು ಅಟ್ಟಾಡಿಸಿಕೊಂಡು ರಸ್ತೆಯುದ್ದಕ್ಕೂ ಥಳಿಸಿದ್ದಾರೆ. ಬಂಗಾಳದ ಬಿಜೆಪಿ ಮತ್ತದರ ನಾಯಕರು ತಮ್ಮ ಪ್ರತ್ಯೆಕ ರಾಜ್ಯದ ಹೋರಾಟಕ್ಕೆ ವಂಚನೆ ಮಾಡಿದ್ದೇ ಈ ದಾಳಿಗೆ ಕಾರಣ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ದಾಳಿಕೋರರು ಥಳಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

ರಾಜ್ಯ ಬಿಜೆಪಿಯ ‘ವಿಜಯ್ ಸಮ್ಮೇಳನಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಬಿಜೆಪಿಯ ವಿರುದ್ಧ ಘೋಷಣೆ ಕೂಗುತ್ತಲೇ GJM ನಾಯಕ ಬಿನಯ್ ತಮಾಂಗ್ ಪರ ಹೋರಾಟಗಾರರು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರು. ಈ ವೇಳೆ ಸ್ಥಳದಿಂದ ನಿರ್ಗಮಿಸಲು ಅಣಿಯಾಗುತ್ತಿದ್ದ ದಿಲೀಪ್ ಮತ್ತವರ ಬೆಂಬಲಿಗರನ್ನು ರಸ್ತೆಯುದ್ದಕ್ಕೂ ಥಳಿಸುತ್ತಾ ಸಾಗಿದ್ದಾರೆ. ಕೊನೆಯಲ್ಲೊಂದು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆಯುವವರೆಗೂ ಗೂರ್ಖಾ ಹೋರಾಟಗಾರರು ಅವರನ್ನು ಥಳಿಸುತ್ತಿದ್ದರು.

ಜನ ಆಂದೋಲನ್ ಪಾರ್ಟಿಯ ಪಾರ್ಟಿಯ ಸ್ಥಾಪಕ ಹರ್ಕ ಬಹಾದ್ದೂರ್ ಚೆಟ್ರಿ  ಮಾತನಾಡುತ್ತಾ, ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ಬೇಡವೆನ್ನುವ ಬಿಜೆಪಿಗರಿಗೆ ನಮ್ಮ ಪ್ರದೇಶಕ್ಕೆ ಭೇಟಿ ನೀಡುವ ಧೈರ್ಯವಾದರೂ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ. ಹಲವಾರು ವರ್ಷಗಳಿಂದ ಬಿಜೆಪಿ ನಮ್ಮನ್ನು ವಂಚಿಸುತ್ತಾ ಬಂದಿದೆ, ಅವರನ್ನು ಇಲ್ಲಿಂದ ಓಡಿಸಲು ಇದು ಸಕಾಲ ಎಂದವರು ಹೇಳಿದರು.

ಡಾರ್ಜಿಲಿಂಗ್ ಸಂಸದ ಎಸ್ ಎಸ್ ಅಹ್ಲುವಾಲಿಯಾ ಮತ್ತು ರಾಜ್ಯ ಬಿಜೆಪಿ ನಾಯಕರು ಗೂರ್ಖಾಲ್ಯಾಂಡ್ ಕುರಿತೊಂದು ಸ್ಪಷ್ಟ ನಿಲುವು ತಾಳದೆ ಡಾರ್ಜಿಲಿಂಗ್’ಗೆ ಭೇಟಿ ನೀಡಬಾರದೆಂದು ಕಳೆದ ಅಕ್ಟೋಬರ್ 2 ರಂದು ಜಿ ಜೆ ಎಂ  ನಾಯಕ ಮತ್ತು ಡಾರ್ಜಿಲಿಂಗ್ ಆಡಳಿತ ಬೋರ್ಡ್’ನ ಸಂಚಾಲಕರೂ ಆಗಿರುವ ಬಿನಯ್ ತಮಾಂಗ್ ಎಚ್ಚರಿಕೆ ನೀಡಿದ್ದರು.  ನಮ್ಮ ಹೋರಾಟಕ್ಕೆ ನೆರವಾಗಬಹುದೆಂಬ ಆಶಯದೊಂದಿಗೆ 2009 ರಿಂದ ನಾವು ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳುಹಿಸುತ್ತಿದ್ದೇವೆ. ಆದರೆ ಇದು ವರೆಗೂ ಯಾವುದೇ ಫಲ ಕಂಡಿಲ್ಲ ಎಂದು ತಮಾಂಗ್ ಹೇಳುತ್ತಾರೆ. ಮಾತ್ರವಲ್ಲ ಇತ್ತೀಚೆಗೆ ಸಂಸದ ಅಹ್ಲುವಾಲಿಯಾ ತ್ರಿಪುರಾದಲ್ಲಿ ಮಾತನಾಡುತ್ತಾ , ಬಂಗಾಳ ಮತ್ತು ತ್ರಿಪುರಾವನ್ನು ಒಡೆಯುವುದು ಸಾಧ್ಯವಿಲ್ಲವೆಂದು ಹೇಳಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡಾ ಇದನ್ನೇ ಪುನರುಚ್ಚರಿಸಿದ್ದರು. ಸಹಜವಾಗಿ ಇದು ಗೂರ್ಖಾ ಹೋರಾಟಗಾರರನ್ನು ಕೆರಳಿಸಿತ್ತು. ಬಿಜೆಪಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತ್ಯೇಕ ಗೂರ್ಖಾಲ್ಯಾಂಡ್ ಸ್ಥಾಪನೆಯ ಭರವಸೆ ನೀಡಿತ್ತು. ಆದರೆ ಅದನ್ನು ಇದುವರೆಗೂ ಈಡೇರಿಸದೆ ನಮ್ಮನ್ನು ವಂಚಿಸಿದೆ ಎಂದು ತಮಾಂಗ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಇದೊಂದು ‘ಪೂರ್ವಯೋಜಿತ ದಾಳಿ’ ಎಂದಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಪೊಲೀಸರು ಈ ಘಟನೆಗೆ ಕಾರಣವೆಂದವರು ದೂರಿದರು. ಸಿಲಿಗುರಿ ಮೇಯರ್ ಮತ್ತು ಹಿರಿಯ ಸಿಪಿಎಂ ನಾಯಕ ಅಶೋಕ್ ಭಟ್ಟಾಚಾರ್ಯ ಕೂಡಾ ಈ ಘಟನೆಯನ್ನು ಖಂಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group