ವರದಿಗಾರ ಡೆಸ್ಕ್: ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಪ್ರಾಡಕ್ಟ್ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದು ವಿವಾದಕ್ಕೆ ಸಿಲುಕಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ಎಚ್.ಡಿ.ದೇವೇಗೌಡರ ಪ್ರಾಡಕ್ಟ್, ಕಾಂಗ್ರೆಸ್ನಲ್ಲಿರುವ ಹುಲುಸಾದ ಮೇವನ್ನು ಮೇಯಲು ಜಮೀರ್ ಅಹಮ್ಮದ್ ಆ ಪಕ್ಷಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇವೇಗೌಡರಿಗೆ ಜಮೀರ್ ಅಹಮ್ಮದ್ ರನ್ನು ಪರಿಚಯಿಸಿದ್ದೇ ನಾನು. ನಮ್ಮ ಪಕ್ಷದಲ್ಲಿ ಗೆದ್ದು ಎಲ್ಲಾ ಅಧಿಕಾರವನ್ನು ಅನುಭವಿಸಿ ಈಗ ನಮ್ಮ ಪಕ್ಷವನ್ನೇ ದೂರುತ್ತಿದ್ದಾರೆ. ಜಮೀರ್ ಶಾಸಕ ಆರ್.ವಿ.ದೇವರಾಜ್ಗೂ ಟೋಪಿ ಹಾಕಿದ್ದಾರೆ. ಹೇಗೂ ಕಾಂಗ್ರೆಸ್ನಲ್ಲಿ ಪ್ರಬಲ ಮುಸ್ಲಿಂ ನಾಯಕರಿಲ್ಲ. ಅದಕ್ಕಾಗಿ ಜಮೀರ್ ಅಹಮ್ಮದ್ರನ್ನು ಪಕ್ಷಕ್ಕೆ ಕರೆದುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
